ತುಮಕೂರಿನ ವಿದ್ಯಾನಿಧಿ ಕಾಲೇಜು ವತಿಯಿಂದ "ನಮ್ಮ ವಿದ್ಯಾರ್ಥಿ&ನಮ್ಮ ಹೆಮ್ಮೆ' ಸಾಧಕ ವಿದ್ಯಾರ್ಥಿಗಳ ಅಭಿನಂದಿಸಲಾಯಿತು. ಕೆ.ಬಿ.ಜಯಣ್ಣ, ಎನ್​.ಬಿ.ಪ್ರದಿಪ್​ ಕುಮಾರ್​, ಸಿದ್ದೇಶ್ವರ ಸ್ವಾಮಿ, ಸುಬ್ರಮ್ಮಣ್ಯ, ವೇದಮೂರ್ತಿ ಮತ್ತಿತರರು ಇದ್ದರು.  
ತುಮಕೂರು

ಅಂಕಗಳಿಗಿಂತ ಅಧ್ಯಯನ ಗೌರವಿಸಬೇಕು

ಪ್ರಮುಖ ಮುಖ್ಯಾಂಶಗಳು

  • ನಮ್ಮ ವಿದ್ಯಾರ್ಥಿ- ನಮ್ಮ ಹೆಮ್ಮೆ
  • ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
  • ಗುಣಾತ್ಮಕ ಶಿಕ್ಷಣಕ್ಕೆ ಒತ್ತು
ತುಮಕೂರು: ವಿದ್ಯಾರ್ಥಿಗಳು ಪಡೆದ ಅಂಕಗಳಿಗಿಂತಲು ಅವರ ಎರಡು ವರ್ಷಗಳ ಶ್ರದ್ದಾಪೂರ್ವಕ ಅಧ್ಯಯನ ಮತ್ತು ಪರಿಶ್ರಮವನ್ನು ಗೌರವಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ಹೇಳಿದರು.
ನಗರದ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ವಿದ್ಯಾನಿಧಿ ಕಾಲೇಜು ವತಿಯಿಂದ ನಮ್ಮ ವಿದ್ಯಾರ್ಥಿ&ನಮ್ಮ ಹೆಮ್ಮೆ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಗೆ ಪೋಷಕರು, ಉಪನ್ಯಾಸಕರು ಹಾಗೂ ಸಂಸ್ಥೆಯ ಸಂಸ್ಥೆಯ ನಿರಂತರ ಬೆಂಬಲವೇ ಕಾರಣ. ಇಂದಿನ ವಿದ್ಯಾರ್ಥಿಗಳ ಯಶಸ್ಸು ಭವಿಷ್ಯದ ಸಮಾಜದ ಪ್ರಗತಿಗೆ ದಾರಿದೀಪವಾಗಿದ್ದು, ಸಾಧನೆಯ ಹಾದಿಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಬೇಕೆಂದು ತಿಳಿಸಿದರು.
ವಿದ್ಯಾನಿಧಿ ತನ್ನ ಧ್ಯೇಯವಾಕ್ಯದಂತೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಿದೆ. ವಿದ್ಯಾರ್ಥಿಗಳ ಸಾಧನೆ ಹಿಂದೆ ಉಪನ್ಯಾಸಕರ ಶ್ರಮವು ಇದೆ. ಶಿಸ್ತಿನ ಜತೆ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ತೊಡಗಿಸಿಕೊಳ್ಳವ ವಾತಾವರಣ ನಿರ್ಮಿಸಲಾಗಿದೆ. ಕ್ರೀಡೆ, ಕಲೆ ಸೇರಿದಂತೆ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕು ವೇದಿಕೆಗಳನ್ನು ಸೃಷ್ಟಿಸಲಾಗಿದೆ. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತು ಕೊಡಲಿದೆ ಎಂದರು.
ಸಾಧಕರಿಗೆ ಲ್ಯಾಪ್​ಟಾಪ್​: ದ್ವೀತಿಯ ಪಿಯುಸಿ ಪರೀೆಯಲ್ಲಿ ರ್ಯಾಂಕ್​ ಪಡೆದಿದ್ದ ಎಸ್​.ಹರ್ಷಿತಾ, ಎಂ.ರೋಹನ್​, ನಂದಶ್ರೀ, ಪಿ.ಪೂರ್ವಿ, ಎಲ್​.ಸಂಜನಾ, ಜೆಇಇಯಲ್ಲಿ ಅಖಿಲಭಾರತ ಮಟ್ಟದಲ್ಲಿ 57 ನೇ ರ್ಯಾಂಕ್​ ಪಡೆದಿರುವ ಎನ್​.ಗಿರಿಜಾ, ಸಿಇಟಿಯಲ್ಲಿ 77 ನೇ ರ್ಯಾಂಕ್​ ಗಳಿಸಿರುವ ಎಸ್​.ಯಶಸ್​ಗೆ ಲ್ಯಾಪ್​ ಟಾಪ್​ ಹಾಗೂ ಡಿ.ಕೆ.ಶಶಾಂಕ್​, ಎಸ್​.ರಚನಾ , ನಿಹಾರಿಕಾ, ಎನ್​.ಎಸ್​.ಯಶ್​ವಂತ, ಬಿ.ಎಲ್​. ಗೌತಮಿ, ಎಂ.ಎ.ಕೃತಿಕಾ ಮತ್ತು ಎಚ್​.ಸಿಂಚನಾಗೆ ಟ್ಯಾಟ್​ಗಳನ್ನು ನೀಡಿ ಅಭಿನಂದಿಸಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಒಟ್ಟು 708 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ, ವಿದ್ಯಾನಿಧಿ ಪ್ರಾಂಶುಪಾಲರಾದ ಸಿದ್ಧೇಶ್ವರ ಸ್ವಾಮಿ, ಸುಬ್ರಹ್ಮಣ್ಯ, ವೇದಮೂರ್ತಿ ಹಾಗೂ ನಂದಿನಿ, ಗಾಯತ್ರಿ, ಲಕ್ಷಿ$್ಮ, ಪ್ರಿಯದರ್ಶಿನಿ, ನಯನ, ಮೇನಾ ಮತ್ತಿತರರು ಇದ್ದರು. ಅಕ್ಷತಾ ಸ್ವಾಗತಿಸಿದರು. ಡಾ.ಆರತಿಪಟ್ರಮೆ ಕಾರ್ಯಕ್ರಮ ನಿರೂಪಿಸಿದರು.