ತುಮಕೂರು ವಿವಿ ಘಟಿಕೋತ್ಸವದಲ್ಲಿ 5 ಚಿನ್ನದ ಪದಕ ವಿಜೇತೆ ಎಂ.ಆಶಾರಾಣಿಗೆ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಪ್ರಮಾಣಪತ್ರ ಪ್ರದಾನ ಮಾಡಿದರು.
- ತುಮಕೂರು ವಿವಿ 19ನೇ ಘಟಿಕೋತ್ಸವ
- ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಟಾಪರ್
- ಕುಟುಂಬ ನಿರ್ವಹಣೆಗೆ ಕೂಲಿಯೇ ಆಧಾರ
ತುಮಕೂರು: ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚು ಅಂಕದೊಂದಿಗೆ ಮೊದಲ Rankಗಳಿಸಿರುವ ಎಂ.ಆಶಾರಾಣಿ ಐದು ಚಿನ್ನದ ಪದಕಗಳ ಪಡೆಯುವುದರೊಂದಿಗೆ ಚಿನ್ನದ ಹುಡುಗಿ ಎನಿಸಿದ್ದಾರೆ.
ಶಿರಾ ತಾಲೂಕಿನ ಹುಣಸೆಹಳ್ಳಿ ಗ್ರಾಮದ ಮಂಜುನಾಥ್, ಕೆಂಚಮ್ಮ ದಂಪತಿ ಎರಡನೇ ಪುತ್ರಿ ಆಶಾರಾಣಿ. ಕೂಲಿನಾಲಿ ಮಾಡುವ ತಂದೆ-ತಾಯಿ ಎಂದಿಗೂ ಮಕ್ಕಳ ಶಿಕ್ಷಣಕ್ಕೆ ತೊಡಕಗಾದಂತೆ ನೋಡಿಕೊಂಡಿದ್ದಾರೆ. ಕೂಲಿಯೇ ಕುಟುಂಬದ ನಿರ್ವಹಣೆಯ ಆಧಾರ. ಸ್ನಾತಕೋತ್ತರ ಪದವಿಯಲ್ಲಿ Rank ಪಡೆಯುವುದರೊಂದಿಗೆ ಆಶಾರಾಣಿ ತಂದೆ-ತಾಯಿಯ ಕನಸು ನನಸು ಮಾಡಿದ್ದಾರೆ. ಸಂಶೋಧನೆ ಮಾಡಿ ಪಿಎಚ್ಡಿ ಮಾಡಬೇಕು, ಕನ್ನಡ ಪ್ರಾದ್ಯಾಪಕಿ ಆಗಬೇಕೆಂಬ ಕನಸು ಹೊತ್ತಿರುವ ಆಶಾರಾಣಿ ಓದಿಗೆ ಬಡತನ ಎಂದಿಗೂ ಅಡ್ಡಿಯಾಗಿಲ್ಲ.
ಪ್ರತಿನಿತ್ಯ ಊರಿಂದಲೇ ಓಡಾಟ: ಮಧುಗಿರಿ ತಾಲೂಕಿನ ಮಲ್ಲೇನಹಳ್ಳಿಯ ಆರ್.ವಿನುತಾ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಅತಿಹೆಚ್ಚು ಅಂಕಗಳಿಸಿ Rank ಪಡೆದಿದ್ದು ಸ್ನಾತಕೋತ್ತರ ವಿಭಾಗದಲ್ಲಿ ಟಾಪರ್ ಶ್ರೇಯಗಳಿಸಿದ್ದಾರೆ. 3 ಚಿನ್ನದ ಪದಕ ಪಡೆದಿದ್ದಾರೆ.
ಪ್ರತಿನಿತ್ಯ ಊರಿನಿಂದಲೇ ತುಮಕೂರಿಗೆ ಓಡಾಡುತ್ತಿದ್ದ ವಿನುತಾ 2-3 ಬಸ್ ಬದಲಿಸಿ ವಿವಿಗೆ ಬರಬೇಕಿತ್ತು. ಬೆಳಗ್ಗೆ 6.30ಕ್ಕೆ ಮನೆಬಿಟ್ಟರೆ ಸಂಜೆ 7 ಮತ್ತೆ ಮನೆ ಸೇರಲು. Rank ಪಡೆಯಲೇಬೇಕೆಂಬ ಗುರಿ ಇಟ್ಟುಕೊಂಡಿದ್ದ ವಿನುತಾ ಈ ಸಾಧನೆ ಮಾಡಬೇಕೆಂಬ ಹಠ, ಛಲ ಹೊಂದಿದ್ದರು. ರಂಗನಾಥ್, ಶಾಂತಮ್ಮದಂಪತಿ ಪುತ್ರಿ ವಿನುತಾ ಕೃಷಿ ಕುಟುಂಬದ ಹಿನ್ನೆಲೆಯುಳ್ಳವರು. ವಿನುತಾ ಶ್ರಮಕ್ಕೆ ಪ್ರತಿಲ ಸಿಕ್ಕಿದೆಯಾದರು ಆಕೆಗೆ ವಿವಿ ಆಡಳಿತ ಮಂಡಳಿ ಮಾಡಿದ ಎಡವಟ್ಟಿನಿಂದ ಈ ಬಾರಿ Rank ವಿಜೇತರಿಗೆ "ಚಿನ್ನದ ಪದಕ' ಸಿಗಲಿಲ್ಲವೆಂಬ ಕೊರಗು ಇದೆ. ಗುಣಮಟ್ಟದ ಪ್ರಮಾಣಪತ್ರವನ್ನು ವಿತರಿಸದೇ ಇರುವ ನೋವು ರ್ಯಾಂಕ್ ವಿಜೇತರಿಗಿದೆ.
ಶ್ರಾವ್ಯ ಗೆ 3 ಚಿನ್ನ: ವಿದ್ಯಾವಾಹಿನಿ ಪದವಿ ಕಾಲೇಜು ವಿದ್ಯಾರ್ಥಿನಿ ಶ್ರಾವ್ಯ ಎಂ.ಬದ್ರಿ ಬಿ.ಕಾಂ., ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ Rank ಪಡೆದು, 3 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ತುಮಕೂರಿನ ಬದ್ರಿನಾಥ್, ತ್ರಿವೇಣಿ ದಂಪತಿಯ ದ್ವೀತಿಯ ಪುತ್ರಿ ಶ್ರಾವ್ಯಗೆ ಸಿಎ ವ್ಯಾಸಂಗ ಮಾಡಿ ಲೆಕ್ಕಪರಿಶೋಧಕಳಾಗವು ಕನಸಿದೆ.