ಕೆ.ಎನ್​.ರಾಜಣ್ಣ 
ತುಮಕೂರು

ಪರಂ, ಕೆಎನ್​ಆರ್​ಗೆ ಗೌರವ ಡಾಕ್ಟರೇಟ್​ ನಿರಾಕರಣೆ

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿ 19ನೇ ಘಟಿಕೋತ್ಸವ
  • ಮೂರು ಹೆಸರಿಗೆ ರಾಜ್ಯಪಾಲರು ಮೊಹರು
  • ಡಾ.ಸಿ.ಸೋಮಶೇಖರ್​, ಬಾಲವಿಶ್ವನಾಥ್​, ಮಾನಂಗಿ ರಮೇಶ್​ ಶಿಫಾರಸು
ತುಮಕೂರು: ತುಮಕೂರು ವಿವಿ 19ನೇ ಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್​ಗೆ ಈ ಬಾರಿ ಒಂಭತ್ತು ಹೆಸರನ್ನು ಶಿಫಾರಸು ಮಾಡಲಾಗಿತ್ತು. ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ಡಾ.ಸಿ.ಎಂ.ತ್ಯಾಗರಾಜ್​ ಅಧ್ಯಕ್ಷತೆಯ ಶೋಧನಾ ಸಮಿತಿ ಅಂತಿಮವಾಗಿ ಡಾ.ಜಿ.ಪರಮೇಶ್ವರ್​, ಕೆ.ಎನ್​.ರಾಜಣ್ಣ ಹೆಸರನ್ನು ಕೈಬಿಟ್ಟಿ ಕಳುಹಿಸಿದ್ದ ಮೂರು ಹೆಸರಿಗೆ ರಾಜ್ಯಪಾಲರು ಮೊಹರು ಒತ್ತಿದ್ದಾರೆ. ಕಳೆದ ಬಾರಿಯು ರಾಜಣ್ಣ ಹೆಸರು ಶೋಧನಾ ಸಮಿತಿಗೆ ಶಿಫಾರಸು ಮಾಡಲಾಗಿತ್ತಾದರೂ ಸಮಿತಿ ಆ ಸಂದರ್ಭದಲ್ಲು ಪರಿಗಣಿಸಿರಲಿಲ್ಲ.
ನಿವೃತ್ತ ಐಎಎಸ್​ ಅಧಿಕಾರಿ ಡಾ.ಸಿ.ಸೋಮಶೇಖರ್​, ನೀಲಾಲಯದ ಬಾಲವಿಶ್ವನಾಥ್​, ಮಾನಂಗಿ ರಮೇಶ್​, ಯೋಗಪಟು ಹವಲ್ದಾರ್​ ಹೆಸರನ್ನು ಸಹ ಶೋಧನಾ ಸಮಿತಿಗೆ ಸಿಂಡಿಕೇಟ್​ ಶಿಫಾರಸು ಮಾಡಲಾಗಿತ್ತು ಎಂದು ಪ್ರೊ.ವೆಂಕಟೇಶ್ವರಲು ಸ್ಪಷ್ಟಪಡಿಸಿದರು.
ಏಕ ಸದಸ್ಯ ಸಮಿತಿ ನೇಮಕ
ಬಡ್ತಿಗಾಗಿ ನಕಲಿ ದಾಖಲಾತಿ ನೀಡಿದ್ದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಿಬ್ಬರ ವಿರುದ್ಧ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಏಕ ಸದಸ್ಯ ಸಮಿತಿಯನ್ನು ನೇಮಿಸಲಾಗಿದೆ ಎಂದು ಪ್ರೊ.ವೆಂಕಟೇಶ್ವರಲು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ನೋವೇಶನ್​ ಇನ್​ಕ್ಯುಬೇಶನ್​ ಸೆಂಟರ್​
ವಿವಿಯಲ್ಲಿ ಸ್ಥಾಪಿಸಲಾಗಿರುವ "ತುಮಕೂರು ಇನ್ನೋವೇಶನ್​ ಇನ್​ ಕ್ಯುಬೇಶನ್​ ಆ್ಯಂಡ್​ ಅಂತ್ರಪ್ರಿನ್ಯುರ್​ ಶಿಪ್​ ಕೌನ್ಸಿಲ್​' ಅನ್ನು ರಾಜ್ಯಪಾಲ ಥಾವರ್​ ಚೆಂದ್​ ಗೆಹಲೋತ್​ ಉದ್ಘಾಟಿಸಲಿದ್ದಾರೆ. ಇದಲ್ಲದೇ 240 ಎಕರೆ ಪ್ರದೇಶದ ಹೊಸ ಕ್ಯಾಂಪಸ್​ನಲ್ಲಿ "ಗ್ರೋ ಗ್ರೀನ್​- ಬೈಸಿಕಲ್​' ಯೋಜನೆ ಜಾರಿತರಲಾಗುವುದು. ಜೂ.3 ರಂದೇ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭ ಹಿನ್ನೆಲೆ ಟಿಕೋತ್ಸವಕ್ಕೆ ಬರಲು ಸಾಧ್ಯವಿಲ್ಲ ಎಂಬುದಾಗಿ ರಾಜ್ಯಪಾಲರು ತಿಳಿಸಿದ್ದು ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಟಿಕೋತ್ಸವ ಕಾರ್ಯಕ್ರಮ ಬೆಳಗ್ಗೆ ನಿಗದಿಯಾಗಿರುವುದರಿಂದ ಬರುವಂತೆ ಆಹ್ವಾನಿಸಲಾಗುವುದು ಎಂದು ವೆಂಕಟೇಶ್ವರಲು ತಿಳಿಸಿದರು.