ಹೆತ್ತೇನಹಳ್ಳಿ‌ ಶ್ರೀ ಮಾರಮ್ಮ ದೇವಾಲಯ  
ತುಮಕೂರು

ಹೆತ್ತೇನಹಳ್ಳಿ‌ ಮಾರಮ್ಮ ದೇವಾಲಯ ದೋಚಿದ ಕಳ್ಳರು ಆಭರಣ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ‌ ದೇವಾಲಯಕ್ಕೆ ಕನ್ನ ಹಾಕಿದ ಖದೀಮರು
  • ಲಕ್ಷಾಂತರ ರೂಪಾಯಿ ಆಭರಣ ಕಳ್ಳತನ
  • ಹೆತ್ತೇನಹಳ್ಳಿ‌‌ ಸುತ್ತಮುತ್ತಲ ಗ್ರಾಮದ ಅಧಿದೇವತೆ ಮಾರಮ್ಮ
ತುಮಕೂರು: ತಾಲೂಕಿನ ಐತಿಹಾಸಿಕ ಹೆತ್ತೇನಹಳ್ಳಿ ಮಾರಮ್ಮ ದೇವಾಲಯ ಹಾಗೂ ಶ್ರೀರಾಮ ದೇವಾಲಯದ ಬಾಗಿಲು ಹೊಡೆದಿರುವ ಖದೀಮರು ದೇವರ ಆಭರಣ ದೋಚಿದ್ದಾರೆ.
ಶುಕ್ರವಾರ ತಡರಾತ್ರಿ ದೇವಸ್ಥಾನದ ಬೀಗ ಹೊಡೆದು ಕಳ್ಳತನ ಮಾಡಲಾಗಿದ್ದು ದೇವರ ವಿಗ್ರಹದ ಮೇಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳ್ಳತನವಾಗಿದೆ ಎನ್ನಲಾಗಿದೆ.
ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮರಾ ಹೊಡೆದು ಹಾಕಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದ್ದು ಸದ್ಯಕ್ಕೆ ಕಳ್ಳರ ಸುಳಿವು ಪತ್ತೆಯಾಗಿಲ್ಲ.
ದೇವರ ಮೇಲೆ ಹಾಕಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿರುವ ಖದೀಮರು ಭಕ್ತರ ಭಾವನೆಗಳಿಗೆ ಘಾಸಿ ಮಾಡಿರುವುದು ಗ್ರಾಮದಲ್ಲಿ ಆತಂಕ ಹೆಚ್ಚಿಸಿದೆ.
ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನದ ಹಿಂಭಾಗವಿದ್ದ ಶ್ರೀ ರಾಮ ದೇವಸ್ಥಾನದಲ್ಲೂ ಕಳ್ಳತನಕ್ಕೆ ಯತ್ನ ಮಾಡಲಾಗಿದ್ದು ದೇವಸ್ಥಾನದ ಬೀಗ ಹೊಡೆದು ದೋಚಲಾಗಿದೆ.
ಶನಿವಾರ ಬೆಳಗ್ಗೆ ಗ್ರಾಮಸ್ಥರು ದೇವಾಲಯ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು.