ಗ್ರಾಮಾಂತರ ಬಿಜೆಪಿ ಶಾಸಕ ಸುರೇಶಗೌಡ ವಿರುದ್ಧ ಸುಳ್ಳು ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರಾಮಾಂತರ ಬಿಜೆಪಿ ಟಕದ ನೇತೃತ್ವದಲ್ಲಿ ತುಮಕೂರು ಎಸ್ಪಿ ಕಚೇರಿ ಮುಂಭಾಗ ಪ್ರತಿಭಟಿಸಿ ಎಎಸ್ಪಿಗಳಾದ ಪುರುಷೋತ್ತಮ್, ಗೋಪಾಲ್ಗೆ ದೂರು ನೀಡಲಾಯಿತು.
- ಡಿ.ಸಿ.ಗೌರಿಶಂಕರ್ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಆಗ್ರಹ
- ಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ
- ಅಡ್ಡಮತದಾನದ ಆರೋಪ ಪೋಸ್ಟರ್
ತುಮಕೂರು: ಬಿಜೆಪಿ ಶಾಸಕ ಬಿ.ಸುರೇಶಗೌಡ ವಿರುದ್ಧ ಅಡ್ಡಮತದಾನ ಆರೋಪ ಹೊರಿಸುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಾನಹಾನಿಗೆ ಯತ್ನಿಸಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಆಪ್ತಸಹಾಯಕ ಸೇರಿದಂತೆ ಆತನ ಬೆಂಬಲಿಗರನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಕದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿ ಬಳಿ ಬುಧವಾರ ಮಧ್ಯಾಹ್ನ ಗ್ರಾಮಾಂತರ ಬಿಜೆಪಿ ಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು, ಸಾಮಾಜಿಕ ಜಾಲತಾಣದಲ್ಲಿ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದ ಪೋಸ್ಟರ್ ಹಂಚಿಕೊಂಡು ಜನರಲ್ಲಿ ಶಾಸಕ ಸುರೇಶಗೌಡ ಬಗ್ಗೆ ಸುಳ್ಳು ಅಭಿಪ್ರಾಯ ಬಿತ್ತಲಾಗುತ್ತಿದ್ದು ಅಪಪ್ರಚಾರ ಜತೆ ಮಾನಹಾನಿ ಮಾಡುತ್ತಿರುವರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮಜರುಗಿಸುವಂತೆ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಇತ್ತೀಚೆಗೆ ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಒಬ್ಬ ಬಿಜೆಪಿ ಶಾಸಕ ಅಡ್ಡ ಮತದಾನ ಮಾಡಿದ್ದು ಯಾರೆಂದು ಗೊತ್ತಿದ್ದರೆ ಕಾಮೆಂಟ್ ಮಾಡಿ ಎಂಬ ಪೋಸ್ಟರ್ ಅನ್ನು ಸಾಮಾಜಿಕ ಜಾಲಾಣಳಲ್ಲಿ ಹಂಚಿದ್ದು ವ್ಯವಸ್ಥಿತವಾಗಿ ನಮ್ಮ ಶಾಸಕರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕರಲ್ಲಿ ತಪು$್ಪ ಅಭಿಪ್ರಾಯ ಮೂಡಿಸುವ ಕೃತ್ಯ ಎಸಗಲಾಗಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿ. ಸುರೇಶ ಗೌಡರು ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿರುತ್ತಾರೆ. ಪಕ್ಷ$ವನ್ನು ತಾಯಿಯ ಜಾಗದಲ್ಲಿ ಇಟ್ಟು ಪೂಜೆ ಸಲ್ಲಿಸುವ ಸುರೇಶಗೌಡರು ಕಳೆದ 28 ವರ್ಷಗಳಿಂದ ಪಕ್ಷದ ಸಂಟನೆಯಲ್ಲಿ ಸಕ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಪಕ್ಷದ ಹಿರಿಯ ಶಾಸಕರಾಗಿ ಹೋರಾಟ ಮತ್ತು ಅಭಿವೃದ್ಧಿ ಕೆಲಸಗಳ ಮೂಲಕ ಜಿಲ್ಲೆ ಕ್ಷೇತ್ರ ಮತ್ತು ರಾಜ್ಯದಲ್ಲಿ ಪಕ್ಷ ಸಂಟನೆ ಮಾಡುತ್ತಿದ್ದಾರೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷ ಸೂಚಿಸಿರುವಂತಹ ಅಭ್ಯರ್ಥಿಗೆ ಪ್ರಾಮಾಣಿಕವಾಗಿ ಮತದಾನ ಮಾಡಿದ್ದು ಮಾಜಿ ಶಾಸಕರ ಬೆಂಬಲಿಗರು ಇಂತಹ ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಎಂ.ಪಿ.ರಾಜಶೇಖರ್ ಹರಿಹಾಯ್ದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಊರುಕೆರೆ ವಿಜಯಕುಮಾರ್, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಶಂಕರ್, ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್, ಮುಖಂಡರಾದ ಸಿದ್ದೇಗೌಡ, ಉಮೇಶ್ಗೌಡ, ತಾರಾದೇವಿ, ಪ್ರಭಾಕರ್, ರಮೇಶ್, ಗಂಗಾಆಂಜೇಯ, ಲೋಕೇಶ್, ಅಂಜಿನಪ್ಪ, ಗಿರೀಶ್, ಮನು, ಸಿದ್ದರಾಜು , ಊರ್ಡಿಗೆರೆ ರವಿ, ಕಣಕುಪ್ಪೆ ಕುಮಾರ್, ರೇಣುಕಮ್ಮ, ಅನ್ನರ್ಪೂಣ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.
ಆಧಾರ ರಹಿತವಾದ ಹಾಗೂ ರಾಜಕೀಯ ದ್ವೇಷ, ಅಸೂಯೆಗಳಿಂದ ಕೂಡಿರುವ ಸುಳ್ಳು ಪೋಸ್ಟರ್ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಪಪ್ರಚಾರ ಮಾಡಿ ಶಾಸಕ ಸುರೇಶಗೌಡರ ಘನತೆ ಗೌರವಕ್ಕೆ ಧಕ್ಕೆ ಉಂಟು ಮಾಡಿ ಮಾನಹಾನಿ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಜರುಗಿಸುವಂತೆ ಪ್ರತಿಭಟನಾಕರರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದರು.