ತುಮಕೂರು ಜಿಲ್ಲಾ ಕಾಂಗ್ರೆಸ್​ ಟಕದ ವತಿಯಿಂದ ಪಂಡಿತ್​ ಜವಹರಲಾಲ್​ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಎಸ್​.ಷಫೀ ಅಹ್ಮದ್​, ಜಿ.ಚಂದ್ರಶೇಖರಗೌಡ, ಕೆಂಚಮಾರಯ್ಯ, ಇಕ್ಬಾಲ್​ ಅಹ್ಮದ್​, ಎಚ್​.ಸಿ.ಹನುಮಂತಯ್ಯ, ಇಾರ್ನ್​ ಅಹ್ಮದ್​, ಕುಮಾರಸ್ವಾಮಿ, ಭಾಗ್ಯಮ್ಮ, ಲಕ್ಷಿ$್ಮದೇವಮ್ಮ ಮತ್ತಿತರರು ಇದ್ದರು.  
ತುಮಕೂರು

ಎಸ್​ಐಆರ್​ಗೆ ಕಾಂಗ್ರೆಸ್​ ತೀವ್ರ ವಿರೋಧ

ಪ್ರಮುಖ ಮುಖ್ಯಾಂಶಗಳು

  • ನೆಹರು ಪುಣ್ಯಸ್ಮರಣೆ
  • ಕೈ ಅಧಿಕಾರಕ್ಕೆ ಅಂಟಿಕೊಂಡ ಪಕ್ಷವಲ್ಲ
  • ಮಾಜಿ ಶಾಸಕ ಎಸ್​.ಷಫೀ ಅಹ್ಮದ್​
ತುಮಕೂರು: ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಮೂಲಕ ಕಾಂಗ್ರೆಸ್​ ಪಕ್ಷದ ಸಂಪ್ರದಾಯಕ ಮತಗಳಿಗೆ ಕಡಿವಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ ಎಂದು ಮಾಜಿ ಶಾಸಕ ಎಸ್​.ಷಫೀ ಅಹ್ಮದ್​ ಹೇಳಿದರು.
ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಂಡಿತ್​ ಜವಹರಲಾಲ್​ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲು ಪಕ್ಷದ ಹುಟ್ಟಿ, ಬೆಳೆದು ಬಂದ ಇತಿಹಾಸವನ್ನು ಪಕ್ಷದ ಕಾರ್ಯಕರ್ತರು ಅರಿಯಬೇಕಾಗಿದೆ. ಕಾಂಗ್ರೆಸ್​ ಬಡವರ ಪರವಾಗಿರುವ ಪಕ್ಷ. ಅಧಿಕಾರಕ್ಕೆ ಅಂಟಿಕೊಂಡ ಪಕ್ಷವಲ್ಲ ಎಂದರು.
ಇನ್ನೂ ಮೂರು ವರ್ಷ ಚುನಾವಣಾ ವರ್ಷ. ಮೈಮರೆತರೇ ಪಕ್ಷ ಅಧಿಕಾರ ಬರುವುದು ಮರೀಚಿಕೆಯಾಗಲಿದೆ. ರಾಜ್ಯ ಗೃಹ ಸಚಿವರು ಆಗಿರುವ ಡಾ.ಜಿ.ಪರಮೇಶ್ವರ್​ರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ತುಮಕೂರು ಜಿಲ್ಲಾ ಕಾಂಗ್ರೆಸ್​ ನಿಂದ ರ್ನಿಣಯ ಮಾಡಿ ಎಐಸಿಸಿಗೆ ಕಳುಹಿಸುವಂತೆ ಸಲಹೆ ನೀಡಿದರು.
ಪಂಡಿತ್​ ಜವಹರಲಾಲ್​ ನೆಹರು ಅವರು ರೂಪಿಸಿದ ರಾಜಕೀಯ ನೀತಿ, ವಿದೇಶಾಂಗ ನೀತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ನೆಹರು ರೂಪಿಸಿದ ಅಲಿಪ್ತ ನೀತಿಗಳನ್ನು ಮೆಚ್ಚಿಕೊಂಡು ವಿಶ್ವ ಸಂಸ್ಥೆ ಅವರನ್ನು ಶಾಂತಿ ಧೂತ ಎಂಬ ಬಿರುದನ್ನು ನೀಡಿತ್ತು. ನೆಹರು ಕುಟುಂಬ ಇಡೀ ತಮ್ಮ ಜೀವನವನ್ನೇ ದೇಶದ ಸ್ವಾತಂತ್ರ ಮತ್ತು ಅಭಿವೃದ್ದಿಗೆ ಮುಡಿಪಾಗಿಟ್ಟಿದೆ ಎಂದು ಜಿಲ್ಲಾ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಸ್ಮರಿಸಿದರು.
ಭಾರತಕ್ಕೆ ಸ್ವಾತಂತ್ರ ಬಂದಾಗ ಇದ್ದ ಸಾಕ್ಷರತೆ ಪ್ರಮಾಣ ಶೇ.14 ಮಾತ್ರ. ಪಂಚವಾರ್ಷಿಕ ಯೋಜನೆಗಳ ಮೂಲಕ ಶಿಕ್ಷಣ, ಕೈಗಾರಿಕೆ, ಉದ್ಯೋಗ, ಕೃಷಿಯ ಬೆಳವಣಿಗೆ ಭದ್ರ ಅಡಿಪಾಯ ಹಾಕಿದ ದೂರದೃಷ್ಟಿತ್ವ ಹೊಂದಿದ್ದವರು ನೆಹರು. ಬಡತನ ನಿವಾರಣೆ ಜತೆಗೆ ದೇಶದಲ್ಲಿ ಜಲಾಶಯಗಳ ಸಂಖ್ಯೆಯನ್ನು 5000ಕ್ಕೆ ಹೆಚ್ಚಿಸಿ, ನೀರಾವರಿ ಪೂರಕ ಕೃಷಿಗೆ ಒತ್ತು ನೀಡಿ, ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು. ಎಲ್ಲದಕ್ಕೂ ನೆಹರು ಕಾರಣ ಎಂದು ಬಿಜೆಪಿಯವರು ಆರೋಪಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೈ ಕಾರ್ಯಕರ್ತರು ಇದಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಈ ದೇಶವನ್ನು ಆಘೋಷಿತ ತುರ್ತು ಪರಿಸ್ಥಿತಿಯಿಂದ ಹೊರ ತರಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಜಿ.ಚಂದ್ರಶೇಖರ್​ಗೌಡ ಮಾತನಾಡಿ, ಭಾರತ ಪ್ರಗತಿಶೀಲ ರಾಷ್ಟ್ರವಾಗಲು ನೆಹರು ಹಾಕಿಕೊಟ್ಟ ಬುನಾಧಿಯೇ ಕಾರಣ. ತಮ್ಮ ಶಕ್ತಿ, ಸಾಮರ್ಥ್ಯವನ್ನು ದೇಶಕ್ಕಾಗಿ ಧಾರೆ ಎರೆದವರು. ಎಸ್​ಐಆರ್​ ನೆಪದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮತಗಳನ್ನು ಕಸಿಯಲಾಗುತ್ತಿದೆ. ಕಾಂಗ್ರೆಸ್​ನ 70 ವರ್ಷಗಳ ಆಡಳಿತದಲ್ಲಿ ಯಾರ ಹಕ್ಕನ್ನು ಕಸಿಯಲಿಲ್ಲ. ಆದರೆ, ಅಧಿಕಾರದ ಆಸೆಗೆ ಜನರ ಹಕ್ಕು ಕಸಿಯಲು ಬಿಜೆಪಿ ಮುಂದಾಗಿದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಹೇಳಿದರು.
ಜಿಲ್ಲಾ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್​ ಅಹ್ಮದ್​, ಎಸ್ಟಿ ಘಟಕದ ಉಪಾಧ್ಯಕ್ಷ ಎಚ್​.ಸಿ.ಹನುಮಂತಯ್ಯ, ಅಲ್ಪಸಂಖ್ಯಾತರ ಘಟಕದ ಇರ್ಫಾನ್​ ಅಹ್ಮದ್​, ಎಸ್​.ಟಿ.ಘಟಕದ ಕುಮಾರಸ್ವಾಮಿ, ಎಸ್ಸಿ ಘಟಕದ ಶಿವರಾಜು, ಉಮಾಶಂಕರ್​, ಪಿ.ಶಿವಾಜಿ, ಮಂಜುನಾಥ್​, ಸಂಜೀವಕುಮಾರ್​, ಅಂಬರೀಷ್​, ಕಾರ್ಮಿಕ ಘಟಕದ ಸೈಯದ್​ ದಾದಾಪೀರ್​, ಹದೀಬ್​ ಅಹಮದ್​, ಶ್ರೀನಿವಾಸಮೂರ್ತಿ, ಕೆಂಪಣ್ಣ, ಶಿವಪ್ರಸಾದ್​, ಸೇವಾದಳದ ಭೈಲಪ್ಪ, ಭಾಗ್ಯಮ್ಮ, ಸುಜಾತ, ಲಕ್ಷ್ಮಿದೇವಮ್ಮ ಮತ್ತಿತರರು ಉಪಸ್ಥಿತರಿದ್ದರು.