ಪೊಲೀಸರು ವಶ ಪಡಿಸಿಕೊಂಡ ಮಾಲನ್ನು ತುಮಕೂರು ಎಸ್ಪಿ ಕೆ.ವಿ.ಅಶೋಕ್​ ವೀಕ್ಷಿಸಿದರು.  
ತುಮಕೂರು

ಇಒ ಮನೆ ದರೋಡೆಕೋರನ ಬಂಧನ

ಪ್ರಮುಖ ಮುಖ್ಯಾಂಶಗಳು

  • ಎರಡೂವರೆ ವರ್ಷ ಬಳಿಕ ಪ್ರಕರಣದ ಆರೋಪಿ ಪತ್ತೆ
  • 55 ಲಕ್ಷ ಚಿನ್ನಾಭರಣ ಕಳವು
  • ಜೈಲಿನಲ್ಲಿದ್ದ ನಟೋರಿಯಸ್​ ಫಹೀಮ್​
ತುಮಕೂರು: ತಾಪಂ ಇಒ ಮನೆ ದೋಚಿದ್ದ ಉತ್ತರ ಪ್ರದೇಶದ ಕುಖ್ಯಾತ ಖದೀಮನನ್ನು ಎರಡೂವರೆ ವರ್ಷದ ಬಳಿಕ ತುಮಕೂರು ಪೊಲೀಸರು ಬಂಧಿಸಿದ್ದಾರೆ!
ನಟೋರಿಯಸ್​ ಕಳ್ಳ ಫಹೀಮ್​ ಅಲಿಯಾಸ್​ ಎಟಿಎಂ ಹೀಮ್​ ಇಸ್ಲಾಮುದ್ದೀನ್​ (38)ನನ್ನು ಪ್ರಯಾಗ್​ ರಾಜ್​ ಜೈಲಿನಿಂದ ಬಾಡಿವಾರೆಂಟ್​ ಮೇಲೆ ಕರೆತಂದು ಡಿಸೆಂಬರ್​ 30, 2023ರಲ್ಲಿ ನಗರದ ಗೋಕುಲ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾಪಂ ಇಒ ಎನ್​.ಮಂಜುನಾಥ್​ ಮನೆ ಬೀಗ ಹೊಡೆದು 401 ಗ್ರಾಂ ತೂಕದ 55 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆ ಬೀಗ ಹಾಕಿಕೊಂಡು ಕೆಲಸದ ನಿಮಿತ್ತ ಮಂಜುನಾಥ್​ ತೆರಳಿದ್ದಾಗ ಈ ಟನೆ ನಡೆದಿತ್ತು. ಈ ಸಂದರ್ಭದಲ್ಲಿ ಮಗಳ ಮದುವೆ ಕಾರ್ಯವಿತ್ತು. ಜಯನಗರ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶದ ಮುರದಾಬಾದ್​ ಜಿಲ್ಲೆಯ ಉಮರಿ ಕಲಾಗ್ರಾಮದ ಆರೋಪಿ ಫಹೀಮ್​ ಬಳಿಯಿಂದ 150 ಗ್ರಾಂ 220 ಮಿಲಿ ತೂಕದ ಚಿನ್ನದ ಗಟ್ಟಿ, 50 ಗ್ರಾಂ 130 ಮಿಲಿ ತೂಕದ ಚಿನ್ನದ ಕೈ ಕಡಗ ಹಾಗೂ 200 ಗ್ರಾಂ 770 ಮಿಲಿ ತೂಕದ ಬಿಸ್ಕತ್​ ಆಕಾರದ ಚಿನ್ನದ ಗಟ್ಟಿ ಒಟ್ಟು 401 ಗ್ರಾಂ 12 ಮಿಲಿ ತೂಕದ ಅಂದಾಜು 55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ತುಮಕೂರು ನಗರ ಡಿವೈಎಸ್ಪಿ ಕೆ.ಆರ್​.ಚಂದ್ರಶೇಖರ್​ ನೇತೃತ್ವದ ತಿಲಕ್​ಪಾರ್ಕ್​ ಸಿಪಿಐ, ಎನ್​.ಕೆ.ನದಾಫ್, ಜಯನಗರ ಠಾಣೆ ಪಿಎಸ್​ಐ ಎನ್​. ಮೋಹನ್​ ಒಳಗೊಂಡ ತಂಡ ಈ ಪ್ರಕರಣ ಪತ್ತೆಹಚ್ಚಿದ್ದು ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಅಭಿನಂದಿಸಿ, ಪ್ರಶಂಸನಾ ಪತ್ರ ನೀಡಿದರು.
66 ಪ್ರಕರಣಗಳಲ್ಲಿ ಭಾಗಿ
ನಟೋರಿಯಸ್​ ಕ್ರಿಮಿನಲ್​ ಫಹೀಮ್​ ಸದ್ಯ ಪ್ರಯಾಗ್​ ರಾಜ್​ ಜೈಲಿನಲ್ಲಿದ್ದು ಬೆಂಗಳೂರಿನ ನಂದಿನಿ ಲೇಔಟ್​, ಬ್ಯಾಡರಹಳ್ಳಿ, ರಾಜಗೋಪಾಲನಗರ, ಕೊಡಿಗೇಹಳ್ಳಿ, ಬಣಸವಾಡಿ, ಅಮೃತಹಳ್ಳಿ, ಜ್ಞಾನಭಾರತಿ, ಹೆಣ್ಣೂರು, ಪೀಣ್ಯ, ಅನ್ನಪೂಣೇಶ್ವರಿ ನಗರ, ಆರ್​ಎಂಡಿ ಯಾರ್ಡ್​ ಪೊಲೀಸ್​ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ 29 ಪ್ರಕರಣಗಳು ಹಾಗೂ ಆಂದ್ರಪ್ರದೇಶದಲ್ಲಿ &1, ರಾಜಸ್ಥಾನ&1, ಹರಿಯಾಣ&1, ಉತ್ತರಾಖಂಡ&2, ಉತ್ತರಪ್ರದೇಶ&30, ಲಕ್ನೋದಲ್ಲಿ- 1 ಹಾಗೂ ಚತ್ತೀಸ್​ಘಡ ದಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 66 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.