The goal is the economic empowerment of women. 
ತುಮಕೂರು

ಮಹಿಳೆಯರ ಆರ್ಥಿಕ ಸಬಲೀಕರಣವೇ ಗುರಿ

ಕುಣಿಗಲ್​ : ನೀರಾವರಿ, ಮಹಿಳೆಯರ ಆರ್ಥಿಕ ಸಬಲೀಕರಣ, ಯುವಕರಿಗೆ ಉದ್ಯೋಗ ಕಲ್ಪಿಸುವುದು ನನ್ನ ಗುರಿ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ತಿಳಿಸಿದರು.
ತಾಲೂಕಿನ ರಂಗನಾಥಸ್ವಾಮಿ ದೇವಸ್ಥಾನದ ತಡೆಗೂಡೆ ನಿಮಾರ್ಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನಾದ್ಯಂತ ಸುಮಾರು ಐದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಉತ್ರಿದುರ್ಗ ಹೋಬಳಿಯ ಸಿದ್ದೆಮಣಿಪಾಳ್ಯದಲ್ಲಿ ಒಂದುವರೆ ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಗುನ್ನಾಗರೇ ಬಿಟಿಪಾಳ್ಯ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಕಾಮಗಾರಿ ಹಾಗೂ ಬಿಟಿಪಾಳ್ಯ&ಜಿಡ್ಡಿಗೆರೆ ಸೇತುವೆಗೆ 1 ಕೋಟಿ ರೂ. ಕಾಮಗಾರಿ ಕೈಗೊಳ್ಳಲಾಗಿದೆ. ಯುವಕರಿಗೆ, ಮಹಿಳೆಯರಿಗೆ ಆರ್ಥಿಕ ಶಕ್ತಿ ನೆಡುವ ಕಾರ್ಯಕ್ರಮದ ಜತೆಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವದು ಎಂದರು.
ಈಗಾಗಲೇ 400 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸೇತುವೆ, ಚರಂಡಿ ಕಾಮಗಾರಿ ಮುಗಿದಿವೆ. 1,200 ಕೋಟಿ ರೂ. ವೆಚ್ಚದಲ್ಲಿಮ ನೀರಾವರಿ ಯೋಜನೆ ಕೈಗೊಳ್ಳಲಾಗಿದೆ. ತಾಲೂಕಿನ ಅಭಿವೃದ್ಧಿಗೆ ಡಿ.ಕೆ.ಸುರೇಶ್​, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ನನಗೆ ಶಕ್ತಿ ನೀಡಿದರಿಂದ ಸಾಧ್ಯವಾಯಿತು. ಕೇಂದ್ರದ ಮೋದಿ ಸರ್ಕಾರ ಅಗತ್ಯ ವಸ್ತುಗಳಾದ ಸಿಲಿಂಡರ್​, ಪೆಟ್ರೋಲ್​, ಡೀಸೆಲ್​, ಅಡುಗೆ ಎಣ್ಣೆ ಸೇರಿದಂತೆ ನಿತ್ಯ ಬಳಸುವ ಎಲ್ಲ ಪದಾರ್ಥಗಳ ಬೆಲೆ ಜಾಸ್ತಿ ಮಾಡಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರ ಜೀವನ ಸ್ಥಿತಿ ದುಸ್ತರವಾಗುತ್ತಿದೆ. ಇಂತಹ ಜನವಿರೋಧಿ ನೀತಿಯನ್ನು ಜನಸಾಮಾನ್ಯರು ಖಂಡಿಸಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪುರಸಭೆ ಮಾಜಿ ಸದಸ್ಯ ಪಾಪಣ್ಣ, ಗ್ರಾಪಂ ಮಾಜಿ ಸದಸ್ಯ ಮಾಯಣ್ಣ ಗೌಡ, ಮುಖಂಡರಾದ ಮುನಿಯಪ್ಪ, ಜೈಕುಮಾರ್​, ಹುಚ್ಚಯ್ಯ, ಗುತ್ತಿಗೆದಾರರಾದ ಟಿ.ಎಚ್​.ಶಿವಣ್ಣ, ಮಧು ಇದ್ದರು.