The field of journalism contributes to the development of society.
ಕುಣಿಗಲ್: ಪತ್ರಿಕಾರಂಗವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯನಿಷ್ಠ ಅಭಿವೃದ್ಧಿ ಪರವಾಗಿ ಸ್ವಾತಂತ್ರ$್ಯ ಪೂರ್ವದಿಂದಲೂ ಕೆಲಸ ನಿರ್ವಹಿಸುತ್ತ ಬಂದಿರುವುದು ಶ್ಲಾಘನೀಯ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾಮಣಿ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ$್ಯ ಪೂರ್ವದಿಂದಲೂ ಗುರುಗಳಿಗೆ ಹಾಗೂ ಪತ್ರಿಕೆಗಳಿಗೆ ಸಮಾಜದಲ್ಲಿ ಉತ್ತಮ ಗೌರವ ಘನತೆಯಿದ್ದು, ಪ್ರಜಾಪ್ರಭುತ್ವದಲ್ಲಿ ಶಿಕ್ಷಣ ಹಾಗೂ ಪತ್ರಿಕಾರಂಗ ಎರಡು ಕಣ್ಣುಗಳಿದ್ದಂತೆ ಕಾರ್ಯನಿರ್ವಹಿಸುತ್ತಿವೆ. ಕತ್ತಿಗಿಂತ ಲೇಖನಿ ಬಹಳ ಅರಿತವಾದುದ್ದು, ಶಿಕ್ಷಣ ವ್ಯಕ್ತಿಯನ್ನು ರೂಪಿಸಿದರೆ ಪತ್ರಿಕಾರಂಗ ಹಿಡಿ ಸಮಾಜವನ್ನು ರೂಪಿಸುತ್ತದೆ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಮಾಧ್ಯನಾಯಕ್ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕ ರಂಗ ತನ್ನದೇ ಆದ ಛಾಪನ್ನು ಸಮಾಜದಲ್ಲಿ ಮೂಡಿಸಿದೆ. ದೇಶ ವಿದೇಶಗಳ ಸಮಾಚಾರಗಳನ್ನ ಪತ್ರಿಕರಂಗವೂ ಪ್ರಜಾಪ್ರಭುತ್ವದಲ್ಲಿ ನೀಡುತ್ತಿದ್ದು, ನೂತನ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ಬಂದ ಬಳಿಕ ಸುಳ್ಳು ಪ್ರಚಾರದಿಂದ ಸಮಾಜ ದಾರಿ ತಪ್ಪುತ್ತಿದೆ. ಆದರೆ ಪತ್ರಿಕ ರಂಗವೂ ನೈಜ ಸುದ್ದಿಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ್ ಮಾತನಾಡಿ, ಸರ್ಕಾರಗಳು ಹೆಚ್ಚಿನ ಗಮನಹರಿಸಿ ಮೂಲ ಸೌಕರ್ಯಗಳ ಜತೆಗೆ ಪತ್ರಕರ್ತರ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಶಕ್ತಿ ತುಂಬಬೇಕು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೀಚನಹಳ್ಳಿ ಶ್ರೀನಿವಾಸ್, ರಾಜ್ಯ ಸಮಿತಿಯ ಮಾಜಿ ಸದಸ್ಯ ಸಿದ್ದಲಿಂಗ ಸ್ವಾಮಿ, ಜಯಣ್ಣ ಬೆಳಗೆರೆ, ಸುರೇಶ್ ವಾತ್ಸವ, ಪುರುಷೋತ್ತಮ್, ಕಸಪ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಉಪಾಧ್ಯಕ್ಷ ಎಂ.ಡಿ.ಮೋಹನ್, ಪ್ರಧಾನ ಕಾರ್ಯದರ್ಶಿ ಎ.ಎಂ. ಶರೀಫ್ ಉಲ್ಲಾ ಮತ್ತಿತರರು ಇದ್ದರು.