ಶಿರಾ: ಹದಿಹರೆಯದ ಪಯಣದಲ್ಲಿ ಡಿಜಿಟಲ್ ಯುಗದ ಸವಾಲಿನ ಜತೆ ನಮ್ಮ ಉಜ್ವಲ ಭವಿಷ್ಯವೂ ಒಗ್ಗೂಡಿರುತ್ತದೆ. ಹದಿಹರೆಯ ಜೀವನದ ವರ್ಣರಂಜಿತ ಸಮಯ ಎಂದು ಶಿರಾ ತಾಲೂಕಿನ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್ ತಿಳಿಸಿದರು.
ತಾಲೂಕಿನ ನವ್ಯದಿಶ&ಸುಶಿಣ ಕಾರ್ಯಕ್ರಮ ಹಾಗೂ ಸಿದ್ಧಾರ್ಥ ಪ್ರೌಢಶಾಲೆ, ತಾಳಗುಂದ ಸಹಯೋಗದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಸುರತ ಹದಿಹರೆಯ ಮತ್ತು ಉಜ್ವಲ ಭವಿಷ್ಯ ಹದಿಹರೆಯದ ಹೆಜ್ಜೆಗಳಿಂದ ಸುರತ ಪಯಣದೆಡೆಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವಯಸ್ಸಿನಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಯಿಂದ ಮನಸ್ಸಿನಲ್ಲಿ ತಳಮಳ ಬಾಹ್ಯ ವಿಷಯಗಳಿಗೆ ಆಕರ್ಷಿತರಾಗುವುದು ಸಹಜ. ಇಂದಿನ ಡಿಜಿಟಲ್ ಯುಗದಲ್ಲಿ ಆಕರ್ಷಣೆ ಹೊರಜಗತ್ತಿಗೆ ಸೀಮಿತವಾಗಿರದೆ, ಸಾಮಾಜಿಕ ಮಾಧ್ಯಮಗಳ ರೂಪದಲ್ಲಿ ಮನೆಮಾಡಿವೆ ಎಂದರು.
ಜೆ.ಎಸ್.ವಿದ್ಯಾಭಾನ್ ಮಾತನಾಡಿ, ಹದಿಹರೆಯದ ಪ್ರತಿ ಹೆಜ್ಜೆಯನ್ನೂ ಜಾಗರೂಕತೆಯಿಂದ ಇರಬೇಕು. ಆನ್ಲೈನ್ ಅಪಾಯಗಳಿಂದ ದೂರವಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆತ್ತವರ ಕನಸಿನ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು.
ಜೆ.ಎಸ್ ಜನಾರ್ಧನ್ ಮಾತನಾಡಿ, ಹದಿಹರೆಯ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ವರ್ಣರಂಜಿತ ಹಾಗೂ ಸೂಕ್ಷ$್ಮಟ್ಟ ನವ್ಯದಿಶ ಸಂಸ್ಥೆಯು ಪ್ರಸ್ತುತ 16 ಪ್ರೌಢಶಾಲೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ 10 ಪ್ರಮುಖ ಜೀವನ ಕೌಶಲ ವಿವಿಧ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ ಎಂದರು.