The bond between teacher and student is unforgettable. 
ತುಮಕೂರು

ಗುರು-ಶಿಷ್ಯರ ಬಾಂಧವ್ಯ ಅವಿಸ್ಮರಣೀಯ

ಶಿರಾ: ಗುರು ಕಲಿಸಿದ ವಿದ್ಯೆ ಪಡೆದು ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವ ಸಂಸ್ಕಾರ ಬೆಳಸಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಷ್ಟೇ ದಶಕಗಳು ಕಳೆದರೂ ಗುರು-ಶಿಷ್ಯರ ಬಾಂಧವ್ಯ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಚ್​.ಜಿ.ರಾಮಕೃಷ್ಣಪ್ಪ ಹೇಳಿದರು.
ಶಿರಾ ನಗರದ ಸರ್ಕಾರಿ ಪ್ರೌಢಶಾಲೆಯ 1993-&94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಶಿರಾ ಚಂಗಾವರ ರಸ್ತೆಯಲ್ಲಿರುವ ಬಿ.ಪಿ.ಎಲ್​ ರೆಸಾರ್ಟ್​ನಲ್ಲಿ ಆಯೋಜಿಸಿದ್ದ 1ನೇ ವರ್ಷದ ಸ್ನೇಹಸಮ್ಮಿಲನ ಸಮಾರಂಭದದಲ್ಲಿ ಮಾತನಾಡಿದರು.
ಸ್ಕೌಟ್ಸ್​ ಮತ್ತು ಗೈಡ್ಸ್​ನಲ್ಲಿ 32 ವರ್ಷಗಳ ಸಕ್ರಿಯ ಸೇವೆ ಸಲ್ಲಿಸಿ ನಿವೃತ್ತರಾದ ಪಾತಲಿಂಗಪ್ಪ ಮಾತನಾಡಿ, 32 ವರ್ಷಗಳ ನಂತರ ನಾನು ಭೋದನೆ ಮಾಡುತ್ತಿದ್ದ ಶಾಲೆಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು, ಇಂದು ಸ್ನೇಹಸಮ್ಮಿಲನಗೊಂಡು ವೈಶಿಷ್ಟ$್ಯಪೂರ್ಣ ಕ್ಷಣ ಒದಗಿಸಿದ್ದಾರೆ. ನಾನು ಕಲಿಸಿದ ವಿದ್ಯೆ ಸಾರ್ಥಕವಾಯಿತು ಎಂಬ ಮನೋಭಾವ ಮೂಡಿದೆ. ಇದೇ ರೀತಿ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಇಂತಹ ಸಂಸ್ಕಾರ ಕಲಿಸಿ ಪರಸ್ಪರ ಸ್ನೇಹ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳುವಂತಹ ಹಾಗೂ ಸುಸಂಸತ ಸಮಾಜ ನಿಮಾರ್ಣ ಮಾಡುವ ಸಂಕಲ್ಪ ಮಾಡಬೇಕು ಎಂದರು.
ನಿವೃತ್ತ ಶಿಕ್ಷಕ ಅಡವಿ ರಂಗಪ್ಪ ಮಾತನಾಡಿ, ರಕ್ತ ಸಂಬಂಧಿಗಳಲ್ಲಿ ಇಲ್ಲದ ಬಾಂಧವ್ಯ ಮತ್ತು ಸಲಿಗೆ ವಿದ್ಯಾರ್ಥಿ ಜೀವನದಲ್ಲಿ ಸಂಪಾದಿಸಿದ್ದ ಸ್ನೇಹದಲ್ಲಿ ಮಾತ್ರ ನೋಡಲು ಸಿಗುತ್ತದೆ ಎಂದು ಹೇಳುವ ಮಾತು ನಿಮ್ಮನ್ನು ನೋಡಿದರೆ ನಿಜವೆಂಬದು ಅರಿವಾಗುತ್ತಿದೆ ಎಂದರು.