Temples are a symbol of Parliament. 
ತುಮಕೂರು

ದೇಗುಲಗಳು ಸಂಸತಿಯ ಪ್ರತಿಕ

ಬರಗೂರು: ಗ್ರಾಮೀಣ ಪ್ರದೇಶಗಳಲ್ಲಿರುವ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಸಮಾಜದ ಐಕ್ಯತೆ, ಸಂಸತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸುವ ಶಕ್ತಿಕೇಂದ್ರಗಳಾಗಿವೆ ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್​ ಗೌಡ ಹೇಳಿದರು.
ಶಿರಾ ತಾಲೂಕು ದ್ವಾರನಕುಂಟೆ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ರಂಗನಾಥಸ್ವಾಮಿ ದೇವಾಲಯದ ಉದ್ಘಾಟನಾ ಹಾಗೂ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ಯುವಪೀಳಿಗೆ ಭಾರತೀಯ ಸಂಸತಿ, ಧಾರ್ಮಿಕ ನಂಬಿಕೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ಡಾ. ದ್ವಾರನಕುಂಟೆ ಲಕ್ಷ್ಮಣ್​ ಮಾತನಾಡಿದರು. ಸೀತಣ್ಣ. ಕೃಷ್ಣಪ್ಪ, ಜಯರಾಮಯ್ಯ, ರೇವಣ್ಣ, ರಂಗನಾಥ್​, ಗೋವಿಂದರಾಜು, ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.