Talent award for Lambani children
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ 58 ತಾಂಡಾಗಳ ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಎಂಎಸ್ಸಿ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ 35ಕ್ಕೂ ಹೆಚ್ಚು ಲಂಬಾಣಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುಳಿಯಾರಿನಲ್ಲಿ "ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಚಿಕ್ಕನಾಯಕನಹಳ್ಳಿಯ ಶ್ರೀ ಸೇವಾಲಾಲ್ ಮರಿಯಮ್ಮ ತಾಂಡಾ ಅಭಿವೃದ್ಧಿ ಟ್ರಸ್ಟ್ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಜಯಂತ್ಯುತ್ಸವ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಸಾಧನೆಗೈದ ಪ್ರತಿ ವಿದ್ಯಾರ್ಥಿಗೂ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸದಸ್ಯ ಮಂಜಾನಾಯ್ಕ್, ಜಿಪಂ ಮಾಜಿ ಸದಸ್ಯೆ ಲೋಹಿತಾ ಬಾಯಿ ಹಾಗೂ ತಾಪಂ ಮಾಜಿ ಅಧ್ಯಕ್ಷೆ ಚೇತನ ಗಂಗಾಧರ್, ತಾಲೂಕು ಸಂಘದ ಕಾರ್ಯದರ್ಶಿ ಮೋತಿ ನಾಯ್ಕ್, ಬೆಸ್ಕಾಂ ಎಇಇ ಗವಿರಂಗಪ್ಪ, ಬೆಸ್ಕಾಂ ಇಂಜಿನಿಯರ್ ಬೈರಾಪುರ ಉಮೇಶ್ ನಾಯ್ಕ್, ಬರಕನಾಹಾಳ್ ತಾಂಡಾದ ಸಮಾಜ ಸೇವಕ ಚಂದ್ರನಾಯ್ಕ್, ಆಲದಕಟ್ಟೆ ತಾಂಡಾದ ಕುಮಾರ್ ನಾಯ್ಕ್, ಶಿಕ್ಷಕಿ ಲಕ್ಷಿ$್ಮಬಾಯಿ ಇದ್ದರು.