ಮಧುಗಿರಿ: ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಎಐಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಜಾತಾ ಶಂಕರ್ ನಾರಾಯಣ್ ತಿಳಿಸಿದರು.
ಪಟ್ಟಣದ ಟೌನ್ಹಾಲ್ ರಸ್ತೆಯಲ್ಲಿರುವ ಮಹಿಳಾ ಸಮಾಜದಲ್ಲಿ ಬಾಲಭವನ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ಬ್ಯಾಗ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಶಿಕ್ಷಣದ ಕಡೆ ಗಮನವಿಟ್ಟು ಓದಬೇಕು ಎಂದರು.
ಬಿಇಒ ಹನುಮಂತರಾಯಪ್ಪ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರವಂತಾರಾಗಬೇಕು. ಸರ್ಕಾರ ಉಚಿತ ಸಮವಸ್ತ್ರ ಹಾಗೂ ಮಧ್ಯಾಹ್ನದ ಊಟ ನೀಡುತ್ತಿದೆ. ಟ್ರಸ್ಟ್ ಮಹಿಳೆಯರ ಮುಂದಾಲೋಚನೆಯ ಫಲವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ಉಚಿತವಾಗಿ ನೀಡುತ್ತಿರುವುದು ಶ್ಲಾಘಿಸಿದರು ಎಂದರು. ಖಜಾಂಚಿ ಲಕ್ಷಿ$್ಮಮೂರ್ತಿ, ಟ್ರಸ್ಟಿಗಳಾದ ಅರುಂಧತಿ ರಾಜ್, ಸಾವಿತ್ರಮ್ಮ, ಗಾಯತ್ರಿ ಮೋಹನ್, ಅನುರಾಧಾ, ಜಿ.ನಾರಾಯಣ, ರಾಜು ಇದ್ದರು.