Take action against those digging up the road. 
ತುಮಕೂರು

ರಸ್ತೆ ಅಗೆಯುವವರ ವಿರುದ್ಧ ಕ್ರಮ ಕೈಗೊಳ್ಳಿ

ತಿಪಟೂರು : ತಾಲೂಕಿನ ಕರಿಕೆರೆದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು. ತಹಸೀಲ್ದ್ದಾರ್​ ಜೀ.ವಿ ಮೋಹನ್​ ಕುಮಾರ್​, ಇಒ ಎಚ್​.ಎಂ.ಸುದರ್ಶನ್​, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್​ ಮತ್ತಿತರರು ಇದ್ದರು.
:ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ರಸ್ತೆ ಅಗೆದು ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ವಹಿಸುವುದು ಗ್ರಾಪಂ ಪಿಡಿಒ, ಕಾರ್ಯದರ್ಶಿ ಮತ್ತು ಇಒ ಜವಾಬ್ದಾರಿ. ತಪ್ಪಿದಲ್ಲಿ ಅವರನ್ನೇ ನೇರ ಹೊಣೆ ಮಾಡಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ಎಚ್ಚರಿಸಿದರು.]
ತಾಲೂಕಿನ ಕರಿಕೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಹಾಳುಮಾಡುವರು ಮತ್ತು ಕೆರೆ ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈ ಗೊಳ್ಳದಿದ್ದರೆ ಸಂಬಂಧಪಟ್ಟ ಪಿಡಿಒ ಕಾರ್ಯದರ್ಶಿಗಳ ವೇತನ ಕಟ್​ ಮಾಡಲಾಗುವುದು. ಜಮೀನುಗಳಿಗೆ ನೀರು ಹಾಯಿಸಿಕೊಳ್ಳುವ ಸಲುವಾಗಿ ಪೈಪ್​ಲೈನ್​ ಅಳವಡಿಸಲು ಸಾರ್ವಜನಿಕ ರಸ್ತೆ ಅಗದು ಜನರ ಸಂಚಾರಕ್ಕೆ ಅಡ್ಡಿಪಡಿಸಬೇಡಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 18 ಲಕ್ಷ ವೆಚ್ಚದಲ್ಲಿ ಕರಿಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಳ್ಳುವ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಧರ್ಮಸ್ಥಳ ಸಂಸ್ಥೆ ಕೈ ಜೋಡಿಸುತ್ತಿದೆ ಎಂದರು.
ಮತ್ತಿಹಳ್ಳಿ ಗ್ರಾಪಂ ಪಿಡಿಒ ಶಿವಲಿಂಗಯ್ಯ. ಕೆರೆ ಸಮಿತಿ ಅಧ್ಯಕ್ಷ ರಾಜಶೇಖರ್​, ಡೇರಿ ಅಧ್ಯಕ್ಷ ದಿನೇಶ್​, ಯೋಜನಾಧಿಕಾರಿ ಕೆ.ಉದಯ್​, ಕೆರೆ ಕಾಮಗಾರಿಯ ಅಭಿಯಂತರ ಭರತ್​, ಕೃಷಿ ಅಧಿಕಾರಿ ಪ್ರಮೋದ್​ ಕುಮಾರ್​ ಮೇಲ್ವಿಚಾರಕ ಮುನಿಶ್​, ಗ್ರಾಮಸ್ಥರು ಉಪಸ್ಥಿತರಿದ್ದರು.