ಸ್ವಾತಂತ್ರ್ಯದ ಓಟ ನಾಟಕ ದೃಶ್ಯ 
ತುಮಕೂರು

8 ರಂದು ಸ್ವಾತಂತ್ರ್ಯದ ಓಟ ನಾಟಕ

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ರಂಗಾಯಣ ಪ್ರಸ್ತುತ
  • ಬೊಳುವಾರು ಮಹಮದ್​ ಕುಂಞ ಕಾದಂಬರಿ
  • ಗುಬ್ಬಿ ವೀರಣ್ಣ ಕಲಾಕ್ಷೇತ್ರ
ತುಮಕೂರು: ಝೆನ್​ ಟೀಮ್​, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಶಿವಮೊಗ್ಗ ರಂಗಾಯಣ ವತಿಯಿಂದ ಜೂ. 8 ರಂದು ಸೋಮವಾರ ಸಂಜೆ 6ಕ್ಕೆ ಶಿವಮೊಗ್ಗ ರಂಗಾಯಣ ಪ್ರಸ್ತುತ ಪಡಿಸುವ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನವನ್ನು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೊಳುವಾರು ಮಹಮದ್​ ಕುಂಞ ಅವರ ಕಾದಂಬರಿಯನ್ನು ಸಿನಿಮಾ ಹಾಗೂ ರಂಗಭೂಮಿ ನಟ ಗೋಮಾರದಹಳ್ಳಿ ಮಂಜುನಾಥ ನಾಟಕ ರೂಪಾಂತರ ಮಾಡಿದ್ದಾರೆ. ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನವನ್ನು ನಟರಾಜ್​ ಹೊನ್ನವಳ್ಳಿ ಅವರು ಮಾಡಿದ್ದಾರೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರು ಆದ ಝೆನ್​ ಟೀಮ್​ ಉಗಮ ಶ್ರೀನಿವಾಸ್​ ತಿಳಿಸಿದ್ದಾರೆ.
ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು ಮಿರ್ಜಿ, ಗೋಮಾರದಹಳ್ಳಿ ಮಂಜುನಾಥ್​, ಬೆಳಗುಂಬ ವೆಂಕಟೇಶ್​, ಅಂಕಸಂದ್ರ ಪ್ರೇಮ್​ ಕುಮಾರ್​, ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಕೆ.ಎಸ್​. ಸಿದ್ಧಲಿಂಗಪ್ಪ ಉಪಸ್ಥಿತರಿರುವರು.
ವಾಘಾ ಗಡಿಯಲ್ಲಿ ಆರಂಭವಾಗುವ ಕಥಾನಕ ಕರಾಚಿ, ಲಾಹೋರ್​, ದೆಹಲಿ, ಮುತ್ತುಪ್ಪಾಡಿ, ಕ್ಯಾಲಿಫೋರ್ನಿಯಾ, ಬರ್ಲಿನ್​ ಗಳಲ್ಲಿ ಬೆಳೆದು ಮತ್ತೆ ವಾಘಾದಲ್ಲಿ ಕೊನೆಯಾಗುವ ಪಯಣ ರೋಚಕತೆಯನ್ನು ಒಳಗೊಂಡಿದೆ. ದೇಶ ಇಬ್ಬಾಗವಾದಂದಿನಿಂದ ಸುವರ್ಣ ಸ್ವಾತಂತ್ರ್ಯದ ಓಟ ನಾಟಕ ದೃಶ್ಯ ಉತ್ಸವದವರೆಗಿನ ಪ್ರಮುಖ ಘಟನೆಗಳನ್ನು ಆರ್ಥಿಕ, ಧಾರ್ಮಿಕ, ಸಾಮಾಜಿಕ, ವಸ್ತು ಸಾಂಗತ್ಯದಲ್ಲಿ ಧಾರಣ ಮಾಡಿಕೊಂಡ ಭಾರತದ ಬದುಕಿನ ಅನುಭವ ಕಥನ ಈ ಪ್ರಸ್ತುತಿ.