State-level athletics meet from 26th
ತಿಪಟೂರು: ವಾ.26 ರಿಂದ ನಾಲ್ಕು ದಿನಗಳ ಕಾಲ 27ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸಲು ಕೆಐಟಿ ಸನ್ನದ್ಧವಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಾತನಾಡಿದ ಅವರು, ವಾ.26ರ ಸಂಜೆ ನಗರದ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆಯಲ್ಲಿ ಕ್ರೀಡಾಪಟುಗಳು, ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕ್ರೀಡಾ ಕಲ್ಪ 2.0ಕ್ಕೆ ಚಾಲನೆ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪರ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ವಿಟಿಯು ಕುಲಪತಿ ಡಾ.ಎಸ್ ವಿದ್ಯಾಶಂಕರ್, ಶಾಸಕ ಕೆ. ಷಡಕ್ಷರಿ, ಕ್ರೀಡಾಪಟು ನಿಹಾಲ್ ಜೋಯಲ್, ಯುವಜನ ಸಬಲೀಕರಣದ ಆಯುಕ್ತ ಆರ್.ಚೇತನ್, ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ಗ್ಲೋಬಲ್ ಅಕಾಡೆಮಿಯ ಡಾ.ಎಚ್.ಬಿ. ಬಾಲಕೃಷ್ಣ, ಡಿವೈಎಸ್‌ಪಿ ಎಂ.ಎಚ್. ಉಮೇಶ್ ಭಾಗವಹಿಸಲಿದ್ದಾರೆ ಎಂದರು.
29 ರಂದು ನಡೆಯುವ ಸವಾರೋಪ ಮತ್ತು ಬಹುವಾನ ವಿತರಣಾ ಸವಾರಂಭದ ಮುಖ್ಯ ಅತಿಥಿಗಳಾಗಿ ಮಧ್ಯಪ್ರದೇಶದ ಖಾಂಡವಾ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ. ನಾಗಾರ್ಜುನ್ ಬಿ. ಗೌಡ, ಕುಲಸಚಿವ ಡಾ. ಪ್ರಸಾದ್ ಬಿ.ರಾಮಪುರ, ಮೌಲ್ಯವಾಪನ ಕುಲಸಚಿವ ಡಾ.ಉಜ್ವಲ್ ಯು.ಜಿ. ಭಾಗವಹಿಸಲಿದ್ದಾರೆ ಎಂದರು.
ಖಜಾಂಚಿ ಟಿ.ಎಸ್. ಶಿವಪ್ರಸಾದ್ ವಾತನಾಡಿ, ರಾಜ್ಯದ 200 ವಿಶ್ವವಿದ್ಯಾಲಯಗಳಿಗೆ ಸೇರಿದ 2 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ನೋಂದಾಯಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಪಟುಗಳು ಹೊಸಬರಿಗೆ ಉತ್ತೇಜನ ನೀಡಲಿದ್ದಾರೆ. 250ಕ್ಕೂ ಹೆಚ್ಚು ಕೋಚ್‌ಗಳು ಆಗಮಿಸಲಿದ್ದಾರೆ. ವಾತಾವರಣ ನೋಡಿಕೊಂಡು ರಾತ್ರಿ 8 ರ ವರೆಗೂ ಫ್ಲೆಡ್‌ಲೈಟ್ ಬೆಳಕಿನಲ್ಲಿ ಕ್ರೀಡೆ ನಡೆಯಲಿವೆ. ಯಶಸ್ವೀ ಕ್ರೀಡಾಕೂಟ ಆಯೋಜಿಸುವ ನಿಟ್ಟಿನಲ್ಲಿ 600 ಮಂದಿಯನ್ನು ಒಳಗೊಂಡ 25 ಕಮಿಟಿಗಳನ್ನು ರಚಿಸಲಾಗಿದೆ ಎಂದರು.
ಕಾರ್ಯದರ್ಶಿಗಳಾದ ಬಿ.ಎಸ್.ಉವಾಶಂಕರ್, ಎಂ.ಆರ್. ಸಂಗಮೇಶ್, ಜಗದೀಶಮೂರ್ತಿ, ಎಚ್.ಜಿ.ಸುಧಾಕರ್, ಖಜಾಂಚಿ ಟಿ.ಎಸ್. ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಚ್.ಸಿ. ಸತೀಶ್‌ಕುವಾರ್ ಇದ್ದರು.