ಡಬಲ್ಸ್ನಲ್ಲಿ ಶಾನ್ವಿ/ಶಾಂಭವಿ ಶರ್ಮ ಜೋಡಿ ಮೋಡಿ
- ರಾಜ್ಯ ಕಿರಿಯರ ranking ಬ್ಯಾಡ್ಮಿಂಟನ್
- ಮನ್ವಿತ್-ವೈಭವ್ ಜೋಡಿ ಗೆಲುವಿನ ಓಟ
- ಜ್ಯೋತ್ಸ್ನಾ-ಕ್ರಿಶಾ ಜೋಡಿ ಫೈನಲ್ ಗೆ
ತುಮಕೂರು: ರಾಜ್ಯ ಕಿರಿಯರ ranking ಬ್ಯಾಡ್ಮಿಂಟನ್ 13 ವಯೋಮಾನದ ಬಾಲಕಿಯರ ಡಬಲ್ಸ್ ಉಪಾಂತ್ಯದಲ್ಲಿ ಸಿಹಿ ಆದರ್ಶ್/ಕೆ.ಹೇಮಶ್ರೀ ಜೋಡಿ 15-11, 15-13 ರಿಂದ ಕೆ.ಎ.ಹನ್ವಿತಾ/ಸ್ತುತಿ ಎಸ್.ಶೆಟ್ಟಿ ವಿರುದ್ಧ, ಶಾನ್ವಿ/ಶಾಂಭವಿ ಶರ್ಮ ಜೋಡಿ 15-5, 15-13 ರಿಂದ ಹೇಶಾ ಸಾಯಿ/ಆರ್.ಖುಷಿ ವಿರುದ್ಧ ಜಯಗಳಿಸಿ ಫೈನಲ್ಗೆ ಅರ್ಹತೆ ಪಡೆಯಿತು.
ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಾಜ್ಯ ಕಿರಿಯರ ranking ಬ್ಯಾಡ್ಮಿಂಟನ್ ಅಂಡರ್ 13 ಬಾಲಕರ ಡಬಲ್ಸ್ನಲ್ಲಿ ಮನ್ವಿತ್ ಮನಿಬೆಟ್ಟು ಆದೇಶ್/ವೈಭವ್ರಾವ್ 15-4, 15-9 ರಿಂದ ಆಶರ್ ರ್ನಾಂಡಿಸ್/ಮೊಹಮ್ಮದ್ ಸಾದ್ ಸಾಜಿದ್ರನ್ನು ಜ್ಞಾನ ರಿಶಿಕ್/ಕೌಶಿಕ್ 15-7, 15-7 ರಿಂದ ಸಮಕ್ಷ ಕೊಟ್ಯಾನ್/ಇ.ಎಸ್.ಸಿದ್ದಾರ್ಥ್ರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
11 ವಯೋಮಾನ ಬಾಲಕರ ಡಬಲ್ಸ್ನಲ್ಲಿ ನಿಹಾನ್ ಮಂದಣ್ಣ/ಸಾತ್ವಿಕ್ ಶ್ರೀಧರ್ ರೆಡ್ಡಿ ಜೋಡಿ ಹಾಗೂ ಅಥರ್ವ ಸಾಹೋ/ರಿಯಾನ್ಷ ರಿಶಿಕ್ ಸಾಯಿ ಯಗಂಟಿ ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಬಾಲಕಿಯರ ವಿಭಾಗದ ಫೈನಲ್ನಲ್ಲಿ ಅರುಷಿ ವೈಣವಿ/ಸ್ವರ ಎಸ್.ಭಾರದ್ವಾಜ್ ಹಾಗೂ ಜ್ಯೋತ್ಸ್ನಾ ವಿನೋದ್/ಕ್ರಿಶಾ ಸಿಂಗ್ ದೇವೊ ಮುಖಾಮುಖಿಯಾಗಲಿದ್ದಾರೆ. ಶನಿವಾರ ಬೆಳಗ್ಗೆ 9ಕ್ಕೆ ಸಿಂಗಲ್ಸ್ ಫೈನಲ್ ನಂತರ ಡಬಲ್ಸ್ ಫೈನಲ್ ಪಂದ್ಯಗಳು ನಡೆಯಲಿವೆ.