ತುಮಕೂರಿನ ಶಿರಾಗೇಟ್ ಬಳಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿ ಮನೆಗೆ ಸೋಮವಾರ ಸಂಜೆ ಭೇಟಿ ನೀಡಿದ ಜಿಪಂ ಸಿಇಒ ಬಿ.ವಿ.ಅಶ್ವಿಜ ಪರೀಕ್ಷಾ ತಯಾರಿ ಬಗ್ಗೆ ಚರ್ಚಿಸಿದರು. ರುಚಂದ್ರ, ಹನುಮಂತಪ್ಪ ಇದ್ದರು.
- ಎಸ್ಸೆಸ್ಸೆಲ್ಸಿ ಮಕ್ಕಳ ಮನೆಗೆ ಅಶ್ವಿಜ
- ಪೋಷಕರ ಜತೆ ಪರೀಕ್ಷಾ ತಯಾರಿ ಚರ್ಚೆ
- ಮಾ.18 ರಿಂದ ಪರೀಕ್ಷೆ
ತುಮಕೂರು: ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳ ಮನೆಗೆ ಜಿಪಂ ಸಿಇಒ ಬಿ.ವಿ.ಅಶ್ವಿಜ ಭೇಟಿ ನೀಡಿ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ವಿಚಾರಿಸಿದರು.
ಮಾರ್ಚ್ 18 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಜಿಪಂ ಸಿಇಒ ಬಿ.ವಿ.ಅಶ್ವಿಜ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ನಗರದ ಶಿರಾಗೇಟ್ ಬಳಿ ಮನೆಗಳಿಗೆ ಸೋಮವಾರ ಸಂಜೆ 7ಕ್ಕೆ ಭೇಟಿ ನೀಡಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೋಷಕರ ಜತೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಚರ್ಚಿಸಿದರು.
ಸಂಜೆ ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳ ಜತೆ ಮಾತನಾಡಿದ ವೇಳೆ ಯಾವ ವಿಷಯದಲ್ಲಿ ಮಕ್ಕಳು ಹಿನ್ನೆಡೆ ಹೊಂದಿದ್ದಾರೆಂಬ ಬಗ್ಗೆ ಮಾಹಿತಿ ಪಡೆದರಲ್ಲದೆ, ಆ ವಿಷಯದ ಬಗ್ಗೆ ಹೆಚ್ಚು ಓದುವಂತೆ ಸಲಹೆಯಿತ್ತರು. ಇದೇ ವೇಳೆ ಮಾತನಾಡಿದ ಅಶ್ವಿಜ, ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡುವಂತೆ ಪೋಷಕರು ಪ್ರೋತ್ಸಾಹ ನೀಡಬೇಕು. ಪರೀಕ್ಷೆ ಸಮಯವಾದ್ದರಿಂದ ಮಕ್ಕಳು ಸಮಯ ವ್ಯರ್ಥ ಮಾಡದೆ ಓದಿನಲ್ಲಿ ಹೆಚ್ಚು ಆಸಕ್ತಿ ಕೊಡುವಂತೆ ತಿಳಿಸಿದರು.
ಡಿಡಿಪಿಐ ರಘುಚಂದ್ರ, ಬಿಇಒ ಹನುಮಂತಪ್ಪ ಹಾಗೂ ಕಾಳಿದಾಸ ಪ್ರೌಢಶಾಲೆಯ ಶಿಕ್ಷಕರು ಸಾಥ್ ನೀಡಿದರು.
ಎಸ್ಸೆಸ್ಸೆಲ್ಸಿ ಮಕ್ಕಳು ಪರೀಕ್ಷೆ ಸಮಯವಾದ್ದರಿಂದ ಓದಿನತ್ತ ಗಮನಕೇಂದ್ರೀಕರಿಸಬೇಕು. ಮಕ್ಕಳಿಗು ಪೋಷಕರು ಹೆಚ್ಚಿನ ಸಾಥ್ ನೀಡಬೇಕು. ಯಾವ ವಿಷಯಗಳಲ್ಲಿ ಸ್ವಲ್ಪ ಹಿನ್ನೆಡೆ ಇರುವುದನ್ನು ತಿಳಿದುಕೊಂಡು ಶಿಕ್ಷಕರು, ಪೋಷಕರು ಆ ವಿಷಯಗಳ ಬಗ್ಗೆ ಒತ್ತುಕೊಡಬೇಕು. ಲಿತಾಂಶ ಸುಧಾರಣೆಗೆ ಹಲವು ಕ್ರಮವಹಿಸಬೇಕಿದೆ.