ಡಾ.ಶಿವಕುಮಾರಸ್ವಾಮೀಜಿ ಗದ್ದುಗೆಗೆ ಶ್ರೀಸಿದ್ಧಲಿಂಗಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ವಿಶೇಷ ಪೂಜ  
ತುಮಕೂರು

ಸಿದ್ದಗಂಗಾ ಶ್ರೀಗಳ ಪುಣ್ಯ ಸಂಸ್ಮರಣೋತ್ಸವ

ಪ್ರಮುಖ ಮುಖ್ಯಾಂಶಗಳು

  • ಡಾ.ಶಿವಕುಮಾರಸ್ವಾಮೀಜಿ 7ನೇ ಸ್ಮರಣೋತ್ಸವ
  • ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗಿ
  • ಸಾವಿರಾರು ಭಕ್ತರು ಶ್ರೀಮಠದಲ್ಲಿ ಭಾಗಿ
ತುಮಕೂರು: ಸಿದ್ದಗಂಗೆಯ ಲಿಂಗೈಕ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 7ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ನಾಡಿನೆಲ್ಲಡೆಯಿಂದ ಭಕ್ತ ಸಾಗರ ಹರಿದುಬಂದಿದೆ.
ಶ್ರೀಗಳ ಪುಣ್ಯ ಸ್ಮರಣೆ ಅಂಗವಾಗಿ ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು, ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಪುತ್ಥಳಿ ಮೆರವಣಿಗೆ: ಶ್ರೀಮಠದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿಯ ರುದ್ರಾಕ್ಷಿಮಂಟಪದಲ್ಲಿ ಮೆರವಣಿಗೆಯು ನಡೆಯಿತು.
ಉಪರಾಷ್ಟ್ರಪತಿ ಆಗಮನ‌ ನಿರೀಕ್ಷೆ
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಆಗಮನ ನಿರೀಕ್ಷೆಯಲ್ಲಿ ಭಕ್ತ ವೃಂದ.