ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ "ಎಲೈಸಿಯಾ ಬ್ಯುಸಿನೆಸ್ ಎಕ್ಸ್ಪೋ 2026'ಅನ್ನು ಎಂ.ಗೌತಮ್ ಉದ್ಘಾಟಿಸಿದರು. ಭಾನುಪ್ರಕಾಶ್, ಡಾ.ಮಹಾಂತೇಶ್ ಎಂ. ನಡಕಟ್ಟಿ, ಅಜ್ಮತ್ಉಲ್ಲಾ, ಡಾ.ಪವಿತ್ರಾ, ಡಾ.ಮಮತಾ, ಖಲಂಧರ್ ಪಾಷ ಇದ್ದರು.
- ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರ
- ಎಲೈಸಿಯಾ ಬ್ಯುಸಿನೆಸ್ ಎಕ್ಸ್ಪೋ 2026
- ಹಿರಿಯ ತಾಂತ್ರಿಕ ಮುಖ್ಯಸ್ಥ ಎಂ.ಗೌತಮ್
ತುಮಕೂರು: ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಯೋಚಿಸಿ ಅದನ್ನು ಅನುಷ್ಠಾನಕ್ಕೆ ತರಲು ಸದಾ ಪ್ರಯತ್ನಿಸಿ ಅದು ಸಾಕಾರವಾದ ಮೇಲೆ ಜಗತ್ತು ನಿಮ್ಮೆಡೆಗೆ ನೋಡುತ್ತದೆ ಎಂದು ಜೆಪಿ ಮಾರ್ಗನ್ ಸಂಸ್ಥೆಯ ಹಿರಿಯ ತಾಂತ್ರಿಕ ಮುಖ್ಯಸ್ಥ ಎಂ.ಗೌತಮ್ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಶ್ರೀ ಸಿದ್ಧಾರ್ಥ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ "ಎಲೈಸಿಯಾ ಬ್ಯುಸಿನೆಸ್ ಎಕ್ಸ್ಪೋ 2026' ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಿನಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳ ಚುಕ್ಕಾಣಿಯನ್ನು ಹಿಡಿದಿರುವವರು ಎಂಬಿಎ ಓದಿರುವವರು. ಜಗತ್ತಿನಲ್ಲಿ ಇಂದು ಎಂಬಿಎಗೆ ಸಾಕಷ್ಟು ಬೆಲೆ ಇದೆ ಎಂದರು.
ಜಗತ್ತು ಹೊಸ ಹೊಸ ಉದ್ಯಮಗಳತ್ತ ಮುಖಮಾಡುತ್ತಿದೆ. ಈ ಸಂದರ್ಭದಲ್ಲಿ ಎಂಬಿಎ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಹೆಚ್ಚಿಸಿಕೊಂಡು ಉತ್ತಮ ಕ್ರಿಯಾಶೀಲ ಚಿಂತನೆಯಿಂದ ಕಾರ್ಪೊರೇಟ್ ಯುಗಕ್ಕೆ ಕಾಲಿಟ್ಟರೆ ಖಂಡಿತ ಯಶಸ್ವಿಯಾಗುವಿರಾ. ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ಮಾತ್ರ ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಎಫ್ಕೆಆರ್ಸಿಸಿಐ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಿಮಾರ್ಣವಾಗುತ್ತಿರುವ ಉದ್ಯಮಗಳನ್ನು ಪ್ರೋತ್ಸಾಹಿಸಬೇಕು ಹಾಗೂ ಸಣ್ಣ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು. ಜಿಲ್ಲೆಯಲ್ಲಿ ಸಾಕಷ್ಟು ಉದ್ಯಮಗಳು ಆರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ನೀವು ಕೂಡ ನಿಮ್ಮ ಉದ್ಯಮವನ್ನು ಇಲ್ಲೇ ಸ್ಥಾಪಿಸಿ ಜಗತ್ತಿಗೆ ತಲುಪಬಹುದು. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ಹಾಗೂ ವಿವಿಧ ಕಾರ್ಪೊರೇಟ್ ಸಂಸ್ಥೆಗಳು ನೀಡುತ್ತವೆ ಎಂದರು.
ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಂತೇಶ್ ಎಂ. ನಡಕಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ಉದ್ಯಮವನ್ನು ನಿರ್ಮಿಸುವ ಕಡೆಗೆ ಚಿಂತಿಸಿ. ಸರ್ಕಾರಗಳು ಹೊಸದಾಗಿ ಉದ್ಯಮವನ್ನು ಸ್ಥಾಪಿಸುವವರಿಗೆ ಪ್ರೋತ್ಸಾಹಧನವನ್ನು ನೀಡುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡು ಒಂದು ಸ್ವಂತ ಉದ್ಯಮವನ್ನು ನಿರ್ಮಿಸಿ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಎಸ್ಎಸ್ಐಎಂಎಸ್ನ ಪ್ರಾಂಶುಪಾಲ ಅಜ್ಮತ್ಉಲ್ಲಾ, ಸಹಾಯಕ ಪ್ರಾಧ್ಯಾಪಕಿ ಡಾ.ಪವಿತ್ರಾ, ಎಸ್ಎಸ್ಐಬಿಎಂನ ಪ್ರಾಚಾಯೆರ್ ಡಾ.ಮಮತಾ, ಸಹಾಯಕ ಆಡಳಿತಾಧಿಕಾರಿ ಖಲಂಧರ್ ಪಾಷ ಮತ್ತಿತರರು ಉಪಸ್ಥಿತರಿದ್ದರು.