ತುಮಕೂರಿನ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಪಿ.ಎನ್. ಹೇಮಚಂದ್ರ, ಜಿ.ಎಸ್.ರೇಣುಕಪ್ಪ, ಎಸ್.ಪ್ರತಿಭಾ, ಡಾ.ಜಿ.ಆರ್.ರೇವಣ್ಣಸಿದ್ದಪ್ಪ ಮತ್ತಿತರರು ಇದ್ದರು.
- ಶ್ರೀ ಸಿದ್ದಗಂಗಾ ಪದವಿಪೂರ್ವ ಕಾಲೇಜು
- ಸಂಭ್ರಮ ಕಾರ್ಯಕ್ರಮ
- ಸಿದ್ದಗಂಗಾ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ
ತುಮಕೂರು: ಇಂದಿನ ಜೆನ್ ಜಿ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ 30 ಸೆಕೆಂಡಿಗಳಿಗಿಂತ ಹೆಚ್ಚಿನ ಕಾಲ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಕ್ಷೀಣಿಸುತ್ತಿರುವುದು ಆತಂಕಾರಿ ಎಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಕಳಕಳ ವ್ಯಕ್ತಪಡಿಸಿದರು.
ನಗರದ ಟೌನ್ಹಾಲ್ ಬಳಿಯ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ "ಸಂಭ್ರಮ' ಕಾರ್ಯಕ್ರಮ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, "ನಹಿ ಜ್ಞಾನೇನ ಸದೃಶಂ' ಆ ಜ್ಞಾನವನ್ನು ನಮ್ಮದಾಗಿಸಿಕೊಳ್ಳುವ ನಿರಂತರ ಪ್ರಯತ್ನಮಾಡಬೇಕು. ಜಗತ್ತಿನಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದ ಒಡವೆ ಜ್ಞಾನ ರತ್ನ ಎಂದರು.
ವಿದ್ಯಾರ್ಥಿಗಳು ಕೌಶಲವನ್ನು ಬೆಳಸಿಕೊಳ್ಳಬೇಕು. ಇಂಗ್ಲೀಷ್ ಭಾಷಾ ಸಾಮರ್ಥ್ಯವನ್ನು ಬೆಳಸಿಕೊಂಡರೆ ಜಗತ್ತಿನ ಯಾವ ದೇಶದಲ್ಲಾದರೂ ನೆಲೆಕಂಡುಕೊಳ್ಳಬಹುದು ಎಂದು ಹುಣಸೂರಿನ ಡಿ ದೇವರಾಜು ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪಿ.ಎನ್. ಹೇಮಚಂದ್ರ ಹೇಳಿದರು.
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ಸಂಯೋಜನಾಧಿಕಾರಿ ಜಿ.ಎಸ್. ರೇಣುಕಪ್ಪ ಮಾತನಾಡಿ, ಜ್ಞಾನವೆನ್ನುವುದು ಎಲ್ಲಕ್ಕಿಂತ ಶ್ರೇಷ್ಠ. ಅದನ್ನು ಗಳಿಸುವ ನಿಟ್ಟಿನಲ್ಲಿ ಶ್ರಮಪಡುವಂತೆ ಸಲಹೆ ನೀಡಿದರು.
ಎಲ್ಲಾ ವಿದ್ಯಾರ್ಥಿಗಳು ಕಲಿಕೆಯ ಜತೆಗೆ ನಮ್ಮ ಭಾರತೀಯ ಸಂಸತಿಯನ್ನು ಮೈಗೂಡಿಸಿಕೊಳ್ಳಬೇಕು. ಸಿದ್ದಗಂಗಾ ಶ್ರೀಗಳು ಸ್ಥಾಪಿಸಿರುವ ನಮ್ಮ ಸಂಸ್ಧೆಯಲ್ಲಿ ಕಲಿಯುವ ನೀವೆಲ್ಲಾ ಪುಣ್ಯವಂತರು ಎಂದು ಪ್ರಾಚಾಯೆರ್ ಎಸ್.ಪ್ರತಿಭಾ ಹೇಳಿದರು.
ಡಾ. ಜಿ.ಆರ್ ರೇವಣ್ಣಸಿದ್ದಪ್ಪ, ಯಶೋದಮ್ಮ, ವಿಶ್ವನಾಥ್ ಉಪಸ್ಥಿತರಿದ್ದರು. ಬಿ.ನಾಗವೇಣಿ ಸ್ವಾಗತಿ, ವಜಿಹಾಭಾನು ವಂದಿಸಿದರು. ರೂಪ ನಿರೂಪಿಸಿದರು.