ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವವು ವೈಭವದಿಂದ ನೆರವೇರಿತು. 
ತುಮಕೂರು

ಚಂದ್ರಮೌಳೀಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಕ್ಯಾತಸಂದ್ರದಲ್ಲಿ ಜರುಗಿದ ಸ್ವಾಮಿ ಉತ್ಸವ
  • ನೆರವೇರಿದ ಧಾರ್ಮಿಕಾ ಪೂಜ
  • ಮಂಗಳವಾರ ಶತ ಚಂಡಿಕಾ ಯಾಗ
ತುಮಕೂರು: ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಶನಿವಾರ 125 ನೇ ಬ್ರಹ್ಮರಥೋತ್ಸವವು ಅತ್ಯಂತ ವೈಭವ ಹಾಗೂ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಬೆಳಗ್ಗೆ 7 ಗಂಟೆಯಿಂದ ರಥಾಂಗಹೋಮ, ನವಗ್ರಹ ಪುರಸ್ಸರ ಮೃತ್ಯುಂಜಯಹೋಮ ಮತ್ತಿತರ ಧಾರ್ಮಿಕ ಪೂಜಾದಿಗಳು ನಡೆದವು. ಮಧ್ಯಾಹ್ನ 12.30 ರಿಂದ 1.15ರ ಅಭಿಜಿನ್​ ಮಹೂರ್ತದಲ್ಲಿ ಶ್ರೀ ಚಂದ್ರಮೌಳೀಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ದೇವಾಲಯದ ಧರ್ಮದರ್ಶಿ ಹಾಗೂ ಪ್ರಧಾನ ಅರ್ಚಕ ಕೆ.ವೈ.ಲಕ್ಷ್ಮಿನರಸಿಂಹಶಾಸ್ತ್ರಿ, ವೈದಿಕ ವಿದ್ವಾಂಸರುಗಳಾದ ಡಾ.ಪ್ರಶಾಂತ್​ಭಟ್​, ಮಂಜುನಾಥಉರಾಳ್​, ಕೆ.ವೈ.ಸುಬ್ರಹ್ಮಣ್ಯಶಾಸ್ತ್ರಿ, ಶ್ರೀಪಾದಶಾಸ್ತ್ರಿ, ಅಶ್ವತ್ಥನಾರಾಯಣಶಾಸ್ತ್ರಿ, ರಮೇಶಾಚಾರ್​, ಜಿ.ಎಲ್​.ರವಿ, ಅರುಣ್​ಕುಮಾರ್​, ಸಿ.ಪಿ.ವಿಜಯ್​ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಮಾಜಿ ಸಚಿವ ಸೊಗಡುಶಿವಣ್ಣ, ಉದ್ಯಮಿ ಚಿದಾನಂದ್​ ಮತ್ತಿತರರು ಬೆಳಗ್ಗೆಯೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಜ.5 ರಂದು ರುದ್ರಹೋಮ, ಶ್ರೀ ಚಕ್ರಾರ್ಚನೆ, ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ. 6 ರಂದು "ಶತ ಚಂಡಿಕಾ ಯಾಗ' ಮತ್ತು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ 125 ಕಲಶಗಳ ಮಹಾ ಕುಂಭಾಭಿಷೇಕ ನಡೆಯಲಿದೆ.