ಕುಣಿಗಲ್​ ಪಟ್ಟಣದಲ್ಲಿ ಜೆಡಿಎಸ್​ ತಾಲೂಕು ಅಧ್ಯಕ್ಷ ಜಗದೀಶ್​ ನಾಗರಾಜಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆ.ಎಲ್​.ಹರೀಶ್​, ಈ. ಮಂಜು, ವಾಸು, ರಂಗಸ್ವಾಮಿ, ಜಗದೀಶ್​ ಮತ್ತಿತರರು ಇದ್ದರು.  
ತುಮಕೂರು

ಕುಣಿಗಲ್​ನಲ್ಲಿ ಸಾಮೂಹಿಕ ಎಸ್​ಐಆರ್​

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​
  • ಮತಪಟ್ಟಿಗೆ ಬಾಂಗ್ಲಾ ಅಕ್ರಮ ವಲಸಿಗರ ಹೆಸರು
  • ತಾಲೂಕು ಜೆಡಿಎಸ್​ ನಿಂದ ಆರೋಪ
ಕುಣಿಗಲ್​: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್​ಐಆರ್​ ) ಪ್ರಕ್ರಿಯೆಯನ್ನು ನಿಯಮಬಾಹಿರವಾಗಿ ಹಾಗೂ ಅಕ್ರಮವಾಗಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಪಟ್ಟಣದ 19ನೇ ವಾರ್ಡ್​ನ ಅಂಗನವಾಡಿಯಲ್ಲಿ ಕುಳಿತು ಎಸ್​ಐಆರ್​ ಪ್ರಕ್ರಿಯೆ ನಡೆಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಿಯಮಾನುಸಾರ ಬಿಎಲ್​ಒಗಳು ಮನೆ ಮನೆಗೆ ತೆರಳಿ ಎನ್ಯೂಮರೇಷನ್​ ಾಮ್​ರ್ ನೀಡಿ ದಾಖಲೆಗಳನ್ನು ಖುದ್ದಾಗಿ ಪರಿಶೀಲಿಸಿ ಆ್ಯಪ್​ಗೆ ಅಪ್​ಲೋಡ್​ ಮಾಡಬೇಕು. ಆದರೆ, ಗುರುವಾರ ಪಟ್ಟಣದ 19ನೇ ವಾರ್ಡ್​ನಲ್ಲಿ ಅಂಗನವಾಡಿಯಲ್ಲಿ ಕುಳಿತು ಬಿಎಲ್​ಒ ಇಂದುಮತಿ ನಿಯಮ ಮೀರಿ ಸಾರ್ವಜನಿಕರಿಗೆ ಾಮ್​ರ್ಗಳನ್ನು ವಿತರಿಸುತ್ತಿದ್ದರು. ಜತೆಗೆ ಯಾವುದೇ ದಾಖಲೆ ಪರಿಶೀಲನೆ ಮಾಡದೆ ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಆ್ಯಪ್​ಗೆ ಅಪ್​ಲೋಡ್​ ಮಾಡಿರುವುದು ಕಂಡು ಬಂದಿದೆ
ಬಿಎಲ್​ಒ ನಿಯಮಬಾಹಿರ ನಡೆಯನ್ನು ಗಮನಿಸಿದ ಸ್ಥಳಿಯ ಮುಖಂಡರು ಹಾಗೂ ಯುವಕರು ಪ್ರಶ್ನಿಸಿದಾಗ ಉಡಾಫೆಯಾಗಿ ಉತ್ತರಿಸಿದ್ದು, ಮತ್ತಷ್ಟು ಗೊಂದಲ್ಕೆ ಕಾರಣವಾಗಿದೆ. ಈ ಸಂಪೂರ್ಣ ಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಹರಿದಾಡಿರುವುದು ಎಸ್​ಐಆರ್​ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಸಾಯಾಗಿದೆ. ಅಲ್ಲದೆ, ಅಕ್ರಮ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಎಂದು ಶುಕ್ರವಾರ ಪಕ್ಷದ ಕಚೇರಿಯಲ್ಲಿ ಜೆಡಿಎಸ್​ ತಾಲೂಕು ಜಗದೀಶ್​ ನಾಗರಾಜಯ್ಯ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್​ ಮುಖಂಡರುಗಳಾದ ಕೆ.ಎಲ್​.ಹರೀಶ್​, ಈ. ಮಂಜು, ವಾಸು, ರಂಗಸ್ವಾಮಿ, ಜಗದೀಶ್​ ಹಾಜರಿದ್ದರು.
ನಿಡಸಾಲೆಯಲ್ಲು ಸಾಮೂಹಿಕ ಎಸ್​ಐಆರ್​
ಶುಕ್ರವಾರವು ಪಟ್ಟಣದ ಮತಗಟ್ಟೆ ಸಂಖ್ಯೆ 76ರ ವ್ಯಾಪ್ತಿಯಲ್ಲಿ ಹಾಗೂ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಪಂ ವ್ಯಾಪ್ತಿಗಯ ಹೊಸಹಳ್ಳಿ ದೊಡ್ಡಿ ಬೂತ್​ನ ಕೆಬ್ಬಳ್ಳಿ ಸರ್ಕಾರಿ ಶಾಲೆಯಲ್ಲಿ ಸಾಮೂಹಿಕವಾಗಿ ಎಸ್​ಐಆರ್​ ಪರಿಷ್ಕರಣೆಯನ್ನು ಬಿಎಲ್​ಒ ಮಾಡಿದ್ದು ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವೈರಲ್​ ವಿಡಿಯೋ ತೋರಿಸಿದ ಜಗದೀಶ್​
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ತುಣುಕನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಜಗದೀಶ್​ ನಾಗರಾಜಯ್ಯ, ತಾಲೂಕಿನಲ್ಲಿ 5&6 ಸಾವಿರ ಅಕ್ರಮಬಾಂಗ್ಲಾ ವಲಸಿಗರಿದ್ದಾರೆ. ಅವರೆಲ್ಲರಿಗೂ ಅಕ್ರಮವಾಗಿ ಎಲ್ಲಾ ದಾಖಲಾತಿಗಳನ್ನು ಮಾಡಿಕೊಡಲಾಗಿದೆ. ಈಗ ನಿಯಮ ಉಲ್ಲಂಘಿಸಿ ಬಿಎಲ್​ಒಗಳು ವಲಸಿಗರನ್ನು ಗುಪ್ತವಾಗಿ ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆ. ಇದರಿಂದ ಭಾರತದ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಲಾಖೆಯಿಂದ ಈಗಾಗಲೇ ಶೇ.94ರಷ್ಟು ಮ್ಯಾಪಿಂಗ್​ ಪೂರ್ಣವಾಗಿದೆ ಎಂದು ವರದಿ ನೀಡಿದ್ದಾರೆ. ಈ ಅಂಕಿ-ಅಂಶವೇ ಅನುಮಾನ ಮೂಡಿಸುತ್ತಿದೆ. ಬಿಎಲ್​ಒಗಳು ಸಂಪೂರ್ಣವಾಗಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.
ಎಸ್​ಐಆರ್​ ಪರಿಷ್ಕರಣೆ ಕ್ರಮಬದ್ಧವಾಗಿ ಮಾಡದೇ ಇರುವುದರಿಂದ ತಕ್ಷಣವೇ ಹಾಲಿ ಬಿಎಲ್​ಒಗಳನ್ನು ಜಿಲ್ಲಾಧಿಕಾರಿಗಳು ಬೇರೆ ತಾಲೂಕಿಗೆ ವರ್ಗಾವಣೆ ಮಾಡಿ, ನಮ್ಮ ತಾಲೂಕಿಗೆ ಬೇರೆ ಕಡೆಯಿಂದ ಬಿಎಲ್​ಒಗಳನ್ನು ನೇಮಿಸಬೇಕು. ಚುನಾವಣಾ ಆಯೋಗ, ತಹಸೀಲ್ದಾರ್​, ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡುತ್ತೇವೆ. ಸಂಬಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳದಿದ್ದರೆ, ಜನತಾದಳ ಕಾನೂನು ಘಟಕದ ಮೂಲಕ ಉಗ್ರ ಹೋರಾಟ ಮಾಡಲಾಗುವುದು.
ಜಗದೀಶ್​ ನಾಗರಾಜಯ್ಯ
ಜೆಡಿಎಸ್​ ತಾಲೂಕು ಅಧ್ಯಕ್ಷ