ತುಮಕೂರು ಜಿಲ್ಲೆಯಲ್ಲಿ ಬಿತ್ತನೆಯಲ್ಲಿ ತೊಡಗಿರುವ ರೈತರು 
ತುಮಕೂರು

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಬಿತ್ತನೆ ಕುಂಠಿತ

ಪ್ರಮುಖ ಮುಖ್ಯಾಂಶಗಳು

  • ಸಕಾಲದಲ್ಲಿ ಸುರಿಯದ ಮಳೆಯಿಂದ ರೈತರಲ್ಲಿ ಆತಂಕ
  • ಮುಂದಿನ ದಿನದಲ್ಲಿ ಮಳೆಯ ಕೊರತೆ ಸಾಧ್ಯತೆ
  • ಪರ್ಯಾಯ ಬೆಳೆಗಳಿಗೂ ಕೃಷಿ ಇಲಾಖೆ ಸಲಹೆ
ತುಮಕೂರು: ಎಲ್​ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಶೇ.43ರಷ್ಟು ಮುಂಗಾರು ಮಳೆ ಕೊರತೆಯಾಗಿದ್ದು ಇದರ ರಿಯಲ್​ ಎೆಕ್ಟ್​ ತುಮಕೂರು ಜಿಲ್ಲೆಗೂ ತಟ್ಟಲಾರಂಭಿಸಿದ್ದು ಮುಂಗಾರು ಅವಧಿಯ ಬಿತ್ತನೆ ಮೇಲೆ ಪರಿಣಾಮ ಬೀರಿದೆ. ಹವಾಮಾನ ಇಲಾಖೆ ಗುರುತಿಸಿರುವ ಅತ್ಯಂತ ಸೂಕ್ಷ$್ಮ, ಅಪಾಯದ ಪಟ್ಟಿಯಲ್ಲಿ ತುಮಕೂರು ಜಿಲ್ಲೆಯನ್ನೂ ಸೇರಿಸಲಾಗಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಮುಂದಿನ ದಿನಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆಯಿದ್ದು ದುರ್ಬಲ ಮುಂಗಾರು ಪರಿಸ್ಥಿತಿ ಜುಲೈ 2ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮಳೆ ಕೊರತೆಯ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಬೆಳೆ ಶಿಫಾರಸು ಮಾಡುವ ರಾಜ್ಯವಾರು ತುರ್ತು ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೂ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆಯಾದರೂ ಬಿತ್ತನೆಗೆ ಸೂಕ್ತ ಸಮಯವಾದ ಕಳೆದ 20 ದಿನಗಳಿಂದ ಚಿ.ನಾ.ಹಳ್ಳಿ, ಗುಬ್ಬಿ, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲೂಕಿನಲ್ಲಿ ಮಳೆ ಕೊರತೆಯುಂಟಾಗಿದೆ. ಇನ್ನುಳಿದ ಐದು ತಾಲೂಕಿನಲ್ಲಿ ಮಳೆ ಸುರಿದಿದೆಯಾದರೂ ಸಕಾಲದಲ್ಲಿ ಬೀಳದೆ ಬಿತ್ತನೆ ಮಂದಗತಿಯಲ್ಲಿದೆ.
ಜಿಲ್ಲೆಯ 3.20 ಲಕ್ಷ ಹೆ. ಕೃಷಿ ಬೆಳೆ ವಿಸ್ತೀರ್ಣವಿದ್ದು ಈ ಪೈಕಿ ಕಳೆದ ವರ್ಷ 1.70ಲಕ್ಷ ಹೆ. ಪ್ರದೇಶದಲ್ಲಿ ರಾಗಿಯನ್ನೇ ಬೆಳೆಯಲಾಗಿದ್ದು ಈ ವರ್ಷ ಜೂ.24ರ ವರೆಗೂ ಕೇವಲ 130 ಹೆ. ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ರಾಗಿ, ಜೋಳ, ಸಜ್ಜೆ, ಸಿರಿಧಾನ್ಯ ಬೆಳೆಯುವ 2.08ಲಕ್ಷ ಹೆ. ಪ್ರದೇಶವಿದ್ದರೂ ಈವರೆಗೂ ಕೇವಲ 1070ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.
ತೊಗರಿ, ಅಲಸಂದೆ, ಉದ್ದು, ಹೆಸರು, ಅವರೇ, ಮೇವಿನ ಜೋಳ ಬೆಳೆಯುವ 52156ಹೆ. ಪೈಕಿ 5660 ಹೆಕ್ಟೇರ್​ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ, ನೆಲಗಡಲೇ 43000 ಹೆ. ಪೈಕಿ 2780 ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ. ಎಣ್ಣೆಕಾಳು ಬೆಳೆಯಬಹುದಾದ 44100 ಹೆಕ್ಟೇರ್​ ಭೂಪ್ರದೇಶದಲ್ಲಿ 2834ಹೆ. ಮಾತ್ರ ಬಿತ್ತನೆ ಸಾಧ್ಯವಾಗಿದೆ.
ಜನವರಿ 1ರಿಂದ ಜೂ.24ರ ವರೆಗೂ ಜಿಲ್ಲೆಯಲ್ಲಿ ವಾಡಿಕೆಯಂತೆ 178.20ಮಿಮೀ ಮಳೆ ಬೀಳಬೇಕಿದ್ದು ಈವರೆಗೂ 206.90ಮಿಮೀ ಮಳೆಯಾಗಿದೆ. ವಾಡಿಕೆಗಿಂತ 16.11ಮಿಮೀ ಹೆಚ್ಚು ಮಳೆಯಾಗಿದೆ. ಆದರೆ, ಗುಬ್ಬಿ ತಾಲೂಕಿನಲ್ಲಿ ಶೇ.25.43ಮಿಮೀ ಮಳೆ ಕೊರತೆಯಾಗಿದೆ, ಕುಣಿಗಲ್​ 5ಮಿಮೀ, ತಿಪಟೂರು 5, ತುಮಕೂರು 11.38, ತುರುವೇಕೆರೆ 7.03ಮಿಮೀ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಜುಲೈ ಬಿತ್ತನೆಗೆ ಉತ್ತಮ ಮಳೆಯಾದರೆ: ರಾಗಿ ಬೆಳೆಯಲ್ಲಿ ಜಿಪಿಯು 28, ಜಿಪಿಯು 66. ಜಿಪಿಯು 67, ಜಿಪಿಯು 26, ಜಿಪಿಯು 45, ಜಿಪಿಯು 48, ಎಂಎಲ್​ 365, ಎಂಆರ್​ 1, ಎಂಆರ್​ 6, ಇಂಡಾಫ್​ 7 ಮತ್ತು ಇಂಡಾಫ್​ 9 ತಳಿ ಬಿತ್ತನೆಗೆ ಉಪಯೋಗಿಸಬೇಕಿದೆ. ಬಿತ್ತನೆಯ ಸಮಯದಲ್ಲಿ ಅವಶ್ಯಕತೆಗಿಂತ ಶೇ.15 ರಿಂದ ಶೇಕಡ 20ರಷ್ಟು ಹೆಚ್ಚಿನ ಬೀಜದ ಪ್ರಮಾಣ ಬಳಸುವುದು. ಬೀಜಗಳನ್ನು 18 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ 24 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡುವುದು.
ನೆಲಗಡಲೆಯಲ್ಲಿ ತಳಿಗಳಾದ ಜೆಎಲ್​ 24, ಕೆ-6 ಮತ್ತು ಕೆ-9 ತಳಿಗಳನ್ನು ಬಿತ್ತನೆ ಮಾಡಬೇಕು ಸಾಮಾನ್ಯವಾಗಿ ಬಿತ್ತನೆ ಸಮಯ ಜುಲೈ ಮೊದಲ ವಾರವಾಗಿರುತ್ತದೆ. ಆದರೆ, ಜುಲೈ ಮೊದಲ 15 ದಿನಗಳ ನಂತರ ಮಳೆ ವಿಳಂಬವಾದರೆ ಪರ್ಯಾಯ ಬೆಳೆಯಾಗಿ ರಾಗಿ, ಹುರುಳಿ ಮತ್ತು ಹಿಂಗಾರಿ ಕಡಲೆ ಬೆಳೆಯನ್ನು ಬೆಳೆಯಬಹುದು. ಬಿತ್ತನೆ ಮಾಡಿದ 30 ರಿಂದ 40 ದಿನಗಳ ನಂತರ 3 ಮೀಟರ್​ ಅಂತರದಲ್ಲಿ ಉಕ್ಕೆ ಸಾಲು ಅಥವಾ ತೋಡನ್ನು ತೆಗೆಯುವುದು.
ಮುಸುಕಿನ ಜೋಳ ಪೆಂಡಿ ಮೆಥಾಲಿನ್​+ಅಟ್ರಜಿನ್​ ಅನ್ನು ಪ್ರತಿ ಹೆಕ್ಟರ್​ ಗೆ 0.5 ಕೆ.ಜಿ. ಪ್ರಮಾಣದಲ್ಲಿ ಮೊಳಕೆಗೆ ಮೊದಲು ಸಿಂಪಡಿಸಬೇಕು, ತೊಗರಿ ತಳಿಗಳಾದ ಬಿಆರ್​ ಜಿ-1 ಮತ್ತು ಬಿಆರ್​ ಜಿ-2 ಅನ್ನು ಬಿತ್ತನೆಗೆ ಬಳಸಬಹುದು. ಆದರೆ ಮಳೆ ವಿಳಂಬವಾದರೆ ಎಕೆಟಿ-8811 ಅಥವಾ ಬಿಎಸ್​ ಎಂಆರ್​-786 ತಳಿಗಳನ್ನು ಬಳಸುವುದು.
ಆಗಸ್ಟ್​ನಲ್ಲಿ ಮಳೆಯಾದರೆ: ರಾಗಿಯಲ್ಲಿ ಜಿ.ಪಿ.ಯು-28, ಎಂ.ಎಲ್​-365, ಪಿ.ಆರ್​-202, ಜಿಪಿಯು-66, ತಳಿಗಳನ್ನು ಆಗಸ್ಟ್​ 15 ರೊಳಗೆ ಮತ್ತು ಜಿಪಿಯು-26, ಜಿಪಿಯು-45, ಜಿಪಿಯು-48ನ್ನು ಆಗಸ್ಟ್​ ಅಂತ್ಯದವರೆಗೆ ಬಿತ್ತನೆ ಮಾಡಬಹುದು ರಾಗಿ ಸಸಿ ಮಡಿ ಬೆಳೆಸಿದ್ದಲ್ಲಿ ನಾಟಿಗೆ ಉಪಯೋಗಿಸುವುದು ಉತ್ತಮ. ರಾಗಿ ಬಿತ್ತನೆಯಾಗಿದ್ದು ಸರಿಯಾಗಿ ಹುಟ್ಟುವಳಿಯಾಗದಿದ್ದರೆ ರಾಗಿ ಪೈರನ್ನು ನಾಟಿ ಮಾಡುವುದು ಸೂಕ್ತ. ಅಲಸಂದೆ, ಹುರುಳಿ ಮತ್ತು ಹೆಬ್ಬಾಳ ಅವರೆಯನ್ನು ಬಿತ್ತನೆ ಮಾಡಬಹುದು. ಜಾನುವಾರುಗಳಿಗೆ ಅಗತ್ಯವಿರುವ ಮೇವಿಗಾಗಿ ಮೇವಿನ ಜೋಳ ಬಿತ್ತನೆ ಮಾಡಬಹುದು.
ಸೆಪ್ಟಂಬರ್​ನಲ್ಲಿ ಮಳೆಯಾದರೆ: ಸಸಿ ಮಡಿಗಳನ್ನು ತಯಾರಿಸಿದಲ್ಲಿ ಮೊದಲ ಪಾಕ್ಷಿಕದಲ್ಲಿ ರಾಗಿ ಸಸಿಗಳನ್ನು ಸಸಿ ಮಡಿಗಳಿಂದ ಕಿತ್ತು ನಾಟಿ ಮಾಡಬಹುದು. ಜಿಪಿಯು-26, ಜಿಪಿಯು-45, ಜಿಪಿಯು-48, ಕೆಎಂಆರ್​-301 ಹಾಗೂ ಇಂಡಾಫ್​-15 ತಳಿಗಳ ಪೈರನ್ನು ಬೆಳೆಸಿ ನಾಟಿ ಮಾಡಬಹುದು.
ಸೆಪ್ಟಂಬರ್​ 15ರೊಳಗೆ ಹಿಂಗಾರು ಜೋಳದ ಬಿತ್ತನೆಯನ್ನು ಪೂರ್ಣಗೊಳಿಸುವುದು ಸೂಕ್ತ. ದ್ವಿದಳಧಾನ್ಯ ಬೆಳೆಗಳಾದ ಅಲಸಂದೆ, ಹುರುಳಿ ಮುಂತಾದ ಅಲ್ಪವಧಿ ಬೆಳೆಗಳನ್ನು ಬಿತ್ತನೆ ಮಾಡಬಹುದು. ತಳಿಗಳ ಆಯ್ಕೆ ಮತ್ತು ಮಧ್ಯಂತರ ಬರ ಪರಿಸ್ಥಿತಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಾಗ ಮಳೆಯ ಅಭಾವದಿಂದಾಗುವ ಬೆಳೆ ಹಾನಿ ತಡೆಯಬಹುದು .
ಕಡಿಮೆ ನೀರಿನ ಅವಶ್ಯಕತೆ ಇರುವ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಉತ್ತೇಜಿಸಲಾಗುತ್ತಿದೆ, ಮಳೆಯ ಪ್ರಮಾಣದ ಮೇಲೆ ಬಿತ್ತನೆಗೆ ಸೂಕ್ತ ತಳಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಜತೆಗೆ ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಕೊಳ್ಳಬೇಕು ಎಂದು ಪ್ರಚಾರ ನಡೆಸಲಾಗುತ್ತಿದೆ.
ಲಕ್ಷ್ಮಣ ಎಸ್​.ಕಳ್ಳೆನ್ನವರ
ಜಂಟಿ ಕೃಷಿ ನಿರ್ದೇಶಕ, ತುಮಕೂರು ಜಿಲ್ಲೆ
ಜನವರಿ 1ರಿಂದ ಜೂ.24ರ ವರೆಗೂ ಜಿಲ್ಲೆಯಲ್ಲಿ ಮಳೆ(ಮಿಮೀ):
ತಾಲೂಕು ವಾಡಿಕೆ ಮಳೆ ವಾಸ್ತವಮಳೆ ಸರಾಸರಿ
ಚಿ.ನಾ.ಹಳ್ಳಿ 206 203.99 3.88
ಗುಬ್ಬಿ 224.60 167.49 &25.43
ಕೊರಟಗೆರೆ 217.70 262.79 20.71
ಕುಣಿಗಲ್​ 240.90 228.09 &5.32
ಮಧುಗಿರಿ 188.70 213.13 12.95
ಪಾವಗಡ 153.80 237.28 54.28
ಶಿರಾ 175.20 176.23 0.59
ತಿಪಟೂರು 230.70 180.25 &5.59
ತುಮಕೂರು 203.40 180.25 &11.38
ತುರುವೇಕೆರೆ 221.70 206.12 &7.03
ಒಟ್ಟು 178.20 206.90 16.11