ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣ
- ತುಮಕೂರು-ಮಲ್ಲಸಂದ್ರ ನಡುವೆ ಕಾಮಗಾರಿ
- ಕೆಲವು ರೈಲು ಸಂಚಾರಗಳ ಮಾರ್ಗ ಬದಲಾವಣೆ
- ವಾಸ್ಕಡೋಗಾಮ-ಯಶವಂತಪುರ ಎಕ್ಸ್ಪ್ರೆಸ್ ಮಾರ್ಗ ಬದಲು
ತುಮಕೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್, ಭೀಮಸಂದ್ರ-ಮುದ್ದಲಿಂಗನಹಳ್ಳಿ ಪಾದಚಾರಿ ಮೇಲ್ಸೇತುವೆ ಹಾಗೂ ನಿಡವಂದ-ಹಿರೇಹಳ್ಳಿ ನಡುವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ ಕೆಲವು ರೈಲು ಸಂಚಾರಗಳನ್ನು ರದ್ದುಗೊಳಿಸಿ, ಕೆಲವು ರೈಲು ಸಂಚಾರಗಳ ಮಾರ್ಗ ಬದಲಾಯಿಸಲಾಗಿದೆ.
ರೈಲುಗಳ ರದ್ದತಿ: ಡಿ.17ಮತ್ತು 24 ರಂದು ಚಿಕ್ಕಮಗಳೂರು-ಯಶವಂತಪುರ ದೈನಂದಿನ ಎಕ್ಸ್ಪ್ರೆಸ್, ಯವಂತಪುರ- ಚಿಕ್ಕಮಗಳೂರು ಎಕ್ಸ್ಪ್ರೆಸ್ ರೈಲು ಹಾಗೂ ಕೆಎಸ್ ಆರ್ ಬೆಂಗಳೂರು-ಮೈಸೂರು ದೈನಂದಿನ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದತಿ: ಡಿ.17, 20, 21 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆವರೆಗೆ ಸಂಚರಿಸಲಿದೆ. ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.
ತಾಳಗುಪ್ಪ ರೈಲು: ಡಿ.17, 20, 21 ಮತ್ತು 24 ರಂದು ತಾಳಗುಪ್ಪ- ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಇದೇ ದಿನಗಳಂದು ಕೆಎಸ್ಆರ್ ಬೆಂಗಳೂರು-ಧಾರವಾಡ ಎಕ್ಸ್ಪ್ರೆಸ್ ರೈಲು, ಕೆಎಸ್ಆರ್ ಬೆಂಗಳೂರು ಮತ್ತು ಅರಸೀಕೆರೆಯ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
ಡಿ.17 ಮತ್ತು 24 ರಂದು, ಧಾರವಾಡ-ಬೆಂಗಳೂರು ಎಕ್ಸ್ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್ ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಡಿ.17 ಮತ್ತು 24 ರಂದು ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರು ನಡುವೆ ಭಾಗಶಃ ರದ್ದಾಗಲಿದ್ದು, ದೊಡ್ಡಬೆಲೆಗೆ ಸಂಚಾರ ಕೊನೆಗೊಳಿಸುತ್ತದೆ.
ತುಮಕೂರು-ಕೆಎಸ್ ಆರ್ ಬೆಂಗಳೂರು ಮೆಮು ರೈಲು, ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣನ್ನು ಆರಂಭಿಸಲಿದೆ.
ಡಿ.17 ಮತ್ತು 24 ರಂದು ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಚಿಕ್ಕಬಾಣಾವರದಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಮಾರ್ಗ ಬದಲಾವಣೆ: ಡಿ.16 ಮತ್ತು 23 ರಂದು ವಾಸ್ಕೋ ಡಗಾಮ-ಯಶವಂತಪುರ ಎಕ್ಸ್ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.
ವೇಲಕಣಿ-ವಾಸ್ಕೋಡಗಾಮ ಎಕ್ಸ್ ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.
ಡಿ.17, 20, 21 ಮತ್ತು 24 ರಂದು ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಚಿಕ್ಕಬಾಣಾವರ, ನೆಲಮಂಗಲ ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ.
ಡಿ.17 ಮತ್ತು 24 ರಂದು ಯವಂತಪುರ-ಹಜರ್ತ ನಿಜಾಮುದ್ದೀನ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್, ತುಮಕೂರು-ಚಾಮರಾಜನಗರ ದೈನಂದಿನ ಪ್ಯಾಸೆಂಜರ್ ಮತ್ತು ಹುಬ್ಬಳ್ಳಿ-ತಿರುವನಂತಪುರಂ ಉತ್ತರ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳು ತಮ್ಮ ಮೂಲ ನಿಲ್ದಾಣಗಳಿಂದ 2 ಗಂಟೆ ತಡವಾಗಿ ಹೊರಡಲಿವೆ.