Society can progress through education. 
ತುಮಕೂರು

ಶಿಣದಿಂದ ಸಮಾಜದ ಪ್ರಗತಿ ಸಾಧ್ಯ

ತುಮಕೂರು ಡೆಸ್ಕ್
ಮಧುಗಿರಿ: ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಸಕಾಲದಲ್ಲಿ ಗುರುತಿಸಿ, ಅವರಿಗೆ ಪೋತ್ಸಾಹ ನೀಡುವುದು ಇಡೀ ಸಮಾಜದ ಕರ್ತವ್ಯ ಎಂದು ಕನ್ನಡ ಮತ್ತು ಸಂಸತಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಜಿ.ನಂದಕುಮಾರ್​ ತಿಳಿಸಿದರು.
ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂ (ಆವೋಪ) ಹಾಗೂ ಆರ್ಯವೈಶ್ಯ ಮಂಡಳಿ ಮತ್ತು ಅಂಗ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು.
ಶಿಣ ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ಉತ್ತಮ ಸಂಸ್ಕಾರ ಮತ್ತು ಸಮಾಜಮುಖಿ ಚಿಂತನೆ ಬೆಳೆಸಬೇಕು. ಗ್ರಾಮೀಣ ಹಾಗೂ ತಾಲೂಕು ಮಟ್ಟದ ವಿದ್ಯಾರ್ಥಿಗಳಲ್ಲಿ ಅಪಾರವಾದ ಪ್ರತಿಭೆಯಿದ್ದು, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿರುವ ಆರ್ಯವೈಶ್ಯ ಮಂಡಳಿಯ ಈ ಕಾರ್ಯ ಶ್ಲಾನೀಯ. ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ದೇಶದ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಡಾ.ಕೆ.ಎಸ್​.ರಾಮಕೃಷ್ಣ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪಾಲಕರು ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಂಡು ಸಮಾಜ ಮೆಚ್ಚುವಂತೆ ಬದುಕಬೇಕು. ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ವಿಷಯದ ಆಳವಾದ ಾನ ಬೆಳೆಸಿಕೊಳ್ಳಬೇಕು. ಸಮಯ ಪ್ರೆ, ಕಠಿಣ ಪರಿಶ್ರಮ ಮತ್ತು ಹೆತ್ತವರ ಶ್ರಮಕ್ಕೆ ಗೌರವ ಕೊಡುವುದನ್ನು ಕಲಿಯಬೇಕು. ಪ್ರಸ್ತುತ ದಿನಗಳಲ್ಲಿ ಮೊಬೈಲ್​ ಮತ್ತು ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಬಲಿಯಾಗದೆ, ತಮ್ಮ ಗಮನವನ್ನು ಸಂಪೂರ್ಣವಾಗಿ ವಿದ್ಯಾಭ್ಯಾಸದ ಕಡೆಗೆ ಹರಿಸಬೇಕು ಎಂದು ಕಿವಿಮಾತು ಹೇಳಿದರು.
2026ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀೆಗಳಲ್ಲಿ ಅತ್ಯುನ್ನತ ಅಂಕಗಳಿಸಿ ಸಾಧನೆ ಮಾಡಿದ ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆವೋಪ ಗೌರವಾಧ್ಯ ಜಿ.ಎಸ್​ ರಂಗನಾಥ್​, ಖಜಾಂಚಿ ಭೀಮರಾಜು, ಆರ್ಯವೈಶ್ಯ ಮಂಡಳಿ ಅಧ್ಯ ಕೆ. ಎನ್​.ಶ್ರೀನಿವಾಸ್​ ಮೂರ್ತಿ, ಕೆ.ವಿ ಮಂಜುನಾಥ್​ ಗುಪ್ತ, ಸುದರ್ಶನ್​ ಬಾಬು, ಗಿರೀಶ್​, ಅನೂಪ್​, ವೆಂಕಟೇಶ್​ ಬಾಬು, ಸುಮಾ ಸುದರ್ಶನ್​, ಸುಶೀಲಮ್ಮ, ಗಿರಿಜಾ, ಅಶ್ವಥ್​ ನಾರಾಯಣ್​ ಇದ್ದರು.