ತುಮಕೂರು ಜಿಲ್ಲಾಧಿಕಾರಿ ಕಚೇರಿ
- ಜಿಲ್ಲೆಯ 1.18 ಲಕ್ಷ ಲಾನುಭವಿ ಬದುಕು ಬೀದಿಗೆ
- ದಾಖಲಾತಿ ಪರಿಶೀಲನೆಗೆ ಕಂದಾಯ ಇಲಾಖೆ ರ್ನಿಲರ್ಕ್ಷ್ಯ
ತುಮಕೂರು: ವಿವಿಧ ಸಾಮಾಜಿಕ ಯೋಜನೆಗಳಲ್ಲಿ ಪಿಂಚಣಿ ಪಡೆಯುತ್ತಿರುವ ಜಿಲ್ಲೆಯ 1.18 ಲಕ್ಷ ಲಾನುಭವಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ಪಿಂಚಣಿ ತಡೆಹಿಡಿಯಲಾಗಿದೆ. ಸಂದೇಹಾಸ್ಪದ ಪ್ರಕರಣಗಳೆಂದು ಪರಿಗಣಿಸಿ ತಾತ್ಕಾಲಿಕವಾಗಿ ಪಿಂಚಣಿ ಇಲ್ಲದ ಹಿನ್ನೆಲೆಯಲ್ಲಿ ಅಂಕವಿಕಲರು, ವೃದ್ಧರು, ವಿದುವೆಯರು ಜೀವನ ನಿರ್ವಹಣೆಗೂ ಕಷ್ಟಪಡುವಂತಾಗಿದೆ.
ಅರ್ಹತಾ ಮಾನದಂಡ ಹೊಂದದೆ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಕೆಯಾಗಿದೆ ಎಂಬ ನೆಪದಲ್ಲಿ ಕುಟುಂಬ ದತ್ತಾಂಶದಿಂದ ಮಾಹಿತಿ ಪಡೆದು ವಯಸ್ಸು, ಆದಾಯ ಮಿತಿ, ಎಚ್ಆರ್ಎಂಎಸ್, ಆದಾಯ ತೆರಿಗೆ, ಎಪಿಎಲ್ ಕಾರ್ಡ್ ಹೊಂದಿರುವವರನ್ನು ಸಂದೇಹಾಸ್ಪದ ಲಾನುಭವಿಗಳೆಂದು ಗುರುತಿಸಿ ಭೌತಿಕ ಪರಿಶೀಲನೆಗೆ ಸಂಯೋಜನೆ ತಂತ್ರಾಂಶ ಕೂಡ ಸಿದ್ಧಪಡಿಸಲಾಗಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಸಾವಿರಾರು ಅರ್ಹ ಲಾನುಭವಿಗಳಿಗೂ ತೊಂದರೆಯಾಗಿದೆ.
ರಾಜ್ಯದಲ್ಲಿಯೂ ಬರೋಬ್ಬರಿ 23.14 ಲಕ್ಷ ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡು ಬಂದಿದ್ದು, ಪರಿಶೀಲನೆ ಸಮಯದಲ್ಲಿ ದಾಖಲಾತಿ ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18.06 ಲಕ್ಷ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜತೆಗೆ 51720 ರದ್ದುಪಡಿಸಲಾಗಿದೆ.
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯಾನುಸಾರ ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗ್ರಾಮ ಅಧಿಕಾರಿಯವರು ಸಂಯೋಜನೆ ಮೊಬೈಲ್ ಆಪ್ ಮೂಲಕ ಪರಿಶೀಲಿಸಿ ಶಿಫಾರಸ್ಸು ಮಾಡಿರುವ ಪ್ರಕರಣಗಳನ್ನು ಸಂಬಂಧಪಟ್ಟ ತಹಸೀಲ್ದಾರ್ ಪರಿಶೀಲಿಸಿ ಅರ್ಹರಿಗೆ ಪಿಂಚಣಿ ಮುಂದುವರಿಸಬೇಕಿದೆ.
ರಾಜ್ಯದಲ್ಲಿ ವೃದ್ಧಾಪ್ಯ ವೇತನದ 6.89 ಲಕ್ಷ ಲಾನುಭವಿಗಳು, ಮನಸ್ವಿನಿ 22315, ಮೈತ್ರಿ 396, ಅಂಕವಿಕಲ ವೇತನ 2.40 ಲಕ್ಷ, ಸಂಧ್ಯ ಸುರಾ 10.28ಲಕ್ಷ ಹಾಗೂ ವಿದುವಾ ವೇತನ ಪಡೆಯುತ್ತಿರುವ 3.33 ಲಕ್ಷ ನಾನುಭವಿಗಳು ಕಳೆದ ನಾಲ್ಕು ತಿಂಗಳಿನಿಂದಲೂ ಪಿಂಚಣಿ ಇಲ್ಲದೆ ಪರದಾಡುವಂತಾಗಿದ್ದು ಜೀವನ ನಿರ್ವಹಣೆಯೂ ಕಷ್ಟವಾಗಿದೆ.
ಜವಬ್ಧಾರಿ ಮರೆತ ವಿಎಒ, ತಹಸೀಲ್ದಾರ್ಗಳು?
ಸಂದೇಹಾಸ್ಪದ ಪ್ರಕರಣಗಳೆಂದು ಪರಿಗಣಿಸಿ ತಾತ್ಕಾಲಿಕವಾಗಿ ಪಿಂಚಣಿ ಕಳೆದುಕೊಂಡಿರುವ ಲಾನುಭವಿಗಳ ಬಳಿ ತೆರಳಿ ದಾಖಲಾತಿಗಳನ್ನು ಪರಿಶೀಲಿಸುವ ಹೊಣೆಯಲ್ಲಿ ಆಯಾ ಗ್ರಾಮ ಆಡಳಿತಾಧಿಕಾರಿ ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಯಾನುಸಾರ ಪರಿಶೀಲಿಸಿ ಸರಿಪಡಿಸುವ ಹೊಣೆಗಾರಿಕೆ ಹೊಂದಿದ್ದರೂ ಕಳೆದ ನಾಲ್ಕು ತಿಂಗಳಿನಿಂದಲೂ ಕೆಲಸವಾಗಿಲ್ಲ.
ವಾಸಸ್ಥಳದಲ್ಲಿ ಬದಲಾವಣೆಯಾದ, ದಾಖಲಾತಿ ನೀಡದವರಿಗೆ ತಿಳುವಳಿಕೆ ಜಾರಿ ಮಾಡಿದೆ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, 30 ದಿನಗಳೊಳಗೆ ದಾಖಲಾತಿಯನ್ನು ಸಂಬಂಧಿತ ತಾಲ್ಲೂಕು ತಹಸೀಲ್ದಾರ್ಗೆ ಸಲ್ಲಿಸಲು ಸೂಚಿಸಲಾಗಿದೆ. ಸಲ್ಲಿಸಿದ ದಾಖಲಾತಿ ಪರಿಶೀಲಿಸಿ, ಅರ್ಹರಿಗೆ ಪಿಂಚಣಿ ಸಿಗುವಂತೆ ಮಾಡುವ ಹೊಣೆಗಾರಿಕೆ ಕಂದಾಯ ಇಲಾಖೆ ಮೇಲಿದೆ.
ಭೌತಿಕ ಪರಿಶೀಲನೆಯಲ್ಲಿ ದಾಖಲೆಗಳ ಕೊರತೆ, ವಿಳಾಸ ಬದಲಾವಣೆ ಹಾಗೂ ಕಾಲಮಿತಿಯಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ತಾಂತ್ರಿಕ ಕಾರಣಗಳಿಂದ ಪಿಂಚಣಿಯಿಂದ ವಂಚಿತರಾಗಿರುವ ನಿಜವಾದ ಅರ್ಹ ವ್ಯದ್ಯರು, ವಿಧವೆಯರು ಮತ್ತು ವಿಕಲಚೇತನರಿಗೆ ನೆರವಾಗಲು ಸರ್ಕಾರ ಸಂಬಂಧಪಟ್ಟವರಿಗೆ ಸೂಚಿಸಬೇಕಿದೆ.
ತಾಲೂಕು ತಹಸೀಲ್ದಾರ್ ನಿಯಮಾನುಸಾರ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರೆಸಲು ಕ್ರಮ ವಹಿಸಲಾಗಿದೆ. ತಹಸೀಲ್ದಾರ್ ಅನುಮೋದನೆ ಪಡೆದ ಪ್ರಕರಣಗಳಿಗೆ ಬಾಕಿ ಪಿಂಚಣಿ ಸಹಿತವಾಗಿ ನಿಯಮಿತಿವಾಗಿ ಪಾವತಿಸಲಾಗುವುದು. ಬಿಎಂಎಸ್ ತಂತ್ರಾಂಶದ ಲಾಗಿನ್ ಮೂಲಕ ಅವಕಾಶ ಕಲ್ಪಿಸಿ ಅರ್ಹ ಫಲಾನುಭವಿಗಳ ಪಿಂಚಣಿ ನೀಡಲಾಗುವುದು.
ರಾಜ್ಯದಲ್ಲಿ ಸಂದೇಹಪಟ್ಟು ಸ್ಥಗಿತವಾಗಿರುವ ಪ್ರಕರಣಗಳು