ಮಧುಗಿರಿ ಯಾದವ ಸಮುಧಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ತಾಪಂ ಇಒ ಬಿ.ಕೆ. ಉತ್ತಮ್ ಉದ್ಘಾಟಿಸಿದರು. ಬಿಇಒ ಹನುಮಂತರಾಯಪ್ಪ, ಬಿಆರ್‌ಸಿ ಪವನ್ ಕುವಾರ್ ರೆಡ್ಡಿ, ಸರ್ಕಾರಿ ನೌಕರ ಸಂದ ಜಿಲ್ಲಾಧ್ಯಕ್ಷ ರಂಗಪ್ಪ ಇದ್ದರು.
ಮಧುಗಿರಿ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 5 ಸ್ಮಾರ್ಟ್ ಕ್ಲಾಸ್‌ಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಾಪಂ ಇಒ ಬಿ.ಕೆ.ಉತ್ತಮ್ ತಿಳಿಸಿದರು.
ತಾಲೂಕಿನ ಯಾದವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಾತನಾಡಿ, ತಾಪಂನಿಂದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಅತೀ ಹೆಚ್ಚು ದಾಖಲಾತಿ ಇರುವ ಶಾಲೆಗಳ ಪಟ್ಟಿ ನೀಡಿದರೆ, ಈ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೋ.ಮುನೇಂದ್ರ ಕುವಾರ್ ವಾತನಾಡಿ, ಶಿಕ್ಷಕರು ಜ್ಞಾನ ಶಿಖರದ ಅಧ್ಯಯನಶೀಲರಾಗಬೇಕು. ಸ್ವಾತಂತ್ರ ಬಂದು 80 ವರ್ಷಗಳಾದರೂ ಏಕೋಪಾಧ್ಯಾಯ ಶಾಲೆಗಳು ಇರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ವಲಯ ಅರಣ್ಯಾಧಿಕಾರಿ ಸುರೇಶ್, ಶಿಕ್ಷಕರ ಸಂದ ಪದಾಧಿಕಾರಿಗಳಾದ ತೋಟದಪ್ಪ, ವೆಂಕಟೇಶ್, ನರಸೇಗೌಡ, ಜಗದೀಶ್, ಲತಾಮಣಿ, ಉಪನ್ಯಾಸಕ ಮಂಜುನಾಥ್, ಸರ್ಕಾರಿ ನೌಕರ ಸಂದ ವಾಜಿ ಅಧ್ಯಕ್ಷ ಸಿದ್ದೇಶ್ ಇದ್ದರು.
ಶಿಕ್ಷಕರನ್ನು ಕಲಿಕೆಯ ಜತೆಗೆ ಇತರೆ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದು, ದಿನೇ ದಿನೆ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಶಿಕ್ಷಕರನ್ನು ಕಲಿಕೆಗೆ ವಾತ್ರ ತೊಡಗಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಮುಂದಿನ ಆರು ತಿಂಗಳ ಒಳಗೆ ಗುರುಭವನಕ್ಕೆ ಕಾಯಕಲ್ಪ ನೀಡಲು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಭರವಸೆ ನೀಡಿದ್ದು, ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ವಾಡುತ್ತಿರುವ 996 ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ ಮತ್ತು ಶೂ ವಿತರಣೆಗೆ ಶಾಸಕ ಕೆ.ಎನ್. ರಾಜಣ್ಣ ಅವರು ಕ್ರಮ ಕೈಗೊಂಡಿದ್ದು, ಇನ್ನೊಂದು ವಾರದೊಳಗೆ ಸಮವಸ ವಿತರಣೆಯಾಗಲಿದೆ.