- 6 ಮಂದಿ ಗ್ಯಾಂಗ್ ಬಂಧನ
- ಹೈಡ್ರೋವಿಡ್ ಗಾಂಜಾ ಸೊಪ್ಪು
- ಡ್ರಗ್ಸ್ ತಡೆಯಲು ಕ್ಯೂ ಆರ್ ಕೋಡ್
ತುಮಕೂರು: ನಗರದಲ್ಲಿ ಗಾಂಜಾ ಹಾಗೂ ಹೈಡ್ರೋವಿಡ್ ಗಾಂಜಾ ಅಕ್ರಮ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ನಗರದ ಶೇಷಾದ್ರಿಪುರಂ ಕಾಲೇಜು ಬಳಿ ಗಾಂಜಾ ಸೊಪ್ಪು ಹಾಗೂ ಮತ್ತು ಬರಿಸುವ ವಸ್ತು ಮಾರಾಟ ಮಾಡುತ್ತಿದ್ದ 6 ಮಂದಿ ಗ್ಯಾಂಗ್ ಅನ್ನು ಜು.11 ರಂದು ಮಾಲು ಸಮೇತ ಬಂಧಿಸಲಾಗಿದೆ. ಸತೀಶ್ (31), ಪ್ರಮೋದ್ ಕುಮಾರ್ (28), ದಿಶಾಂತ್ (21), ದರ್ಶನ್ (28), ಅಮೋ ನಾಗಭೂಷಣ್ (31) ಹಾಗೂ ಬೆಂಗಳೂರಿನ ಮಾರತ್ಹಳ್ಳಿಯ ಮಂಜುನಾಥ್ (35) ಬಂಧಿತರು. ಈ ಗ್ಯಾಂಗ್ನಲ್ಲಿ ಡಿಎಆರ್ ಪೇದೆ ಮಗ ದಿಶಾಂತ್ ಇದ್ದು ಬೆಂಗಳೂರಿನ ಡ್ರಗ್ ಪೆಡ್ಲರ್ ಮಂಜುನಾಥ್ ಗಾಂಜಾ, ಹೈಡ್ರೋವಿಡ್ ಗಾಂಜಾವನ್ನು ಈ ತಂಡಕ್ಕೆ ಪೂರೈಸುತ್ತಿದ್ದದು ತನಿಖೆ ವೇಳೆ ಬಯಲಾಗಿದೆ.
2 ಲಕ್ಷ ರೂ., ಬೆಲೆಬಾಳುವ 1 ಕೆಜಿ 655 ಗ್ರಾಂ ಗಾಂಜಾ ಸೊಪ್ಪು, 2.30 ಲಕ್ಷ ರೂ., ಮೊತ್ತದ 23 ಗ್ರಾಂನಷ್ಟು ಹೈಡ್ರೋವಿಡ್ ಗಾಂಜಾ ಸೊಪ್ಪು ಹಾಗೂ ಮಾರಾಟಕ್ಕೆ ಬಳಸುತ್ತಿದ್ದ 40 ಲಕ್ಷ ರೂ., ಮೌಲ್ಯದ ಫಾರ್ಚೂನರ್ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ತಡೆಯಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ
ಡ್ರಗ್ಸ್ ದಂಧೆ ತುಮಕೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ತಡೆಗೆ ಕ್ಯೂ ಆರ್ ಕೋಡ್ ಮಾದರಿ ರೂಪಿಸಿದ್ದಾರೆ. ಡ್ರಗ್ಸ್ ದಂಧೆ ಬಗ್ಗೆ ಯಾವುದೇ ಮಾಹಿತಿ ಇದ್ದರೂ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹತಿ ಹಂಚಿಕೊಳ್ಳಬಹುದು. ಮಾಹಿತಿದಾರರ ಹೆಸರು, ಇನ್ನಿತರ ವಿವಿರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್ಪಿ ಕೆ.ವಿ.ಅಶೋಕ್ ತಿಳಿಸಿದರು.