ಶಿರಾ ತಾಲೂಕು ಗಾಣದಹುಣಸೆಯಲ್ಲಿದ್ದ ನಕಲಿ ಅನಾಥಾಶ್ರಮ
- ಅಕ್ರಮ ಅನಾಥಾಶ್ರಮದಲ್ಲಿ ವೃದ್ಧರಿಗೆ ಕಿರುಕುಳ
- ಶಿರಾ ತಾಲೂಕು ಗಾಣದಹುಣಸೆಯಲ್ಲಿ ದಂಧೆ
- ಅನಾಥರನ್ನು ರಕ್ಷಿಸಿದ ಅಧಿಕಾರಿಗಳಿಂದ ಪೊಲೀಸ್ ದೂರು
ತುಮಕೂರು: ಅನಾಥಾಶ್ರಮ ಹೆಸರಿನಲ್ಲಿ ದಂಧೆ ನಡೆಸುತ್ತಿರುವ ಅಕ್ರಮವನ್ನು ಮಹಿಳಾ ರಕ್ಷಣಾ ಇಲಾಖೆ ಭೇದಿಸಿದೆ.
ಶಿರಾ ತಾಲೂಕು, ಗಾಣದಹುಣಸೆ ಗ್ರಾಮದ ತೋಟದಲ್ಲಿ ಅಕ್ರವಾಗಿದ್ದ ಅನಾಥಾಶ್ರಮ. ವಿವಿಧ ವಯೋಮಾನ 64 ಮಹಿಳೆಯರು, ಪುರುಷರ ರಕ್ಷಣೆ ಮಾಡಲಾಗಿದೆ.
ರಾತ್ರಿ 11ಗಂಟೆವರೆಗೂ ತಹಸೀಲ್ದಾರ್, ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದ್ದರು.
ಸಾರ್ವಜನಿಕರಿಗೆ ನಿಷೇಧವಿಟ್ಟು, ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದ ಅನಾಥಾಶ್ರಮದ ಮಾಲಿಕಿ. ಸಾವು ಸಂಭವಿಸುತ್ತಿದ್ದಂತೆ ಮೃತದೇಹ ನಿಗೂಢವಾಗಿ ಬೇರೆಡೆಗೆ ಸಾಗಿಸುತ್ತಾರೆಂದು ದೂರು ದಾಖಲಿಸಲಾಗಿದೆ.
ಸಾಧನ ಮಹಿಳಾ ಸಂಘದ ದೂರಿನ ಮೇರೆಗೆ ಸಿರಾ ತಾಲ್ಲೂಕಿನ ಗಾಣದ ಹುಣಸೆ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಭೇದಸ್ಥ ನಿರಾಶ್ರಿತರ ಆಶ್ರಯ ಮನೆಗೆ ಭೇಟಿ ನೀಡಲಾಯಿತು.
ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ 64 ಜನರನ್ನು ಬಲವಂತವಾಗಿ ಇಟ್ಟುಕೊಂಡಿದ್ದು, ಎಲ್ಲರನ್ನೂ ತಹಸೀಲ್ದಾರರು ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕೋರದಲ್ಲಿ ಇರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಅವರ ವಾರಸುದಾರರನ್ನು ಪತ್ತೆ ಹಚ್ಚಿ ಅವರೊಂದಿಗೆ ಕಳುಹಿಸಿಕೊಡುವ ಕ್ರಮವನ್ನು ವಹಿಸಲಾಗುವುದು
ಈ ಸಂಬಂಧ ಶಿರಾ ಪೊಲೀಸ್ ನಗರ ಠಾಣೆಯಲ್ಲಿ ದೂರನ್ನು ಮಹಿಳಾ ಇಲಾಖೆ ದಾಖಲಿಸಲಿದೆ.