ತುಮಕೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಂಸ್ಮರಣೆ ದತ್ತಿ ಉಪನ್ಯಾಸವನ್ನು ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಡಾ. ಗೊ.ರು.ಚನ್ನಬಸಪ್ಪ, ಡಾ. ಎಸ್. ಪರಮೇಶ್, ಕೆ.ಎಸ್. ಸಿದ್ಧಲಿಂಗಪ್ಪ, ಎಚ್.ಸಿ. ಪರಮಶಿವಯ್ಯ, ಜೈಪ್ರಕಾಶ್, ಎಂ.ಜಿ.ಸಿದ್ಧರಾಮಯ್ಯ, ರಾಜಶೇಖರ್, ರೂಪ ಮತ್ತಿತರರು ಇದ್ದರು.
- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ
- ಶರಣ ಸಾಹಿತ್ಯ ಪರಿಷತ್ ಸಹಯೋಗ
- ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಂಸ್ಮರಣೆ
ತುಮಕೂರು: ಸ್ವಾರ್ಥ ರಹಿತ ಸೇವೆಯಿಂದ ನಿಸ್ವಾರ್ಥವಾಗಿ ದುಡಿದ ಪರಮಪೂಜ್ಯ ಶಿವಕುಮಾರ ಶ್ರೀಗಳು ನಾಡಿನ ಭುವನದ ಭಾಗ್ಯವಾಗಿದ್ದಾರೆ. ಅವರನ್ನು ನೆನೆಯುವುದೇ ಒಂದು ಸೌಭಾಗ್ಯ ಎಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗಮಕ ಭಾರತೀ ಚಾರಿಟಬಲ್ ಟ್ರಸ್ಟ್ ಹಾಗೂ ಎಸ್ಪಿವೈಎಸ್ಎಸ್ ಗ್ಲೋಬಲ್ ಪೀಸ್ ಸಹಯೋಗದಲ್ಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಂಸ್ಮರಣೆ ಮತ್ತು ಲಿಂಗೈಕ್ಯ ಚನ್ನಬಸಮ್ಮ, ಲಿಂಗೈಕ್ಯ ಎಸ್.ಜಿ. ಶಿವಣ್ಣ ಸಂಸ್ಮರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ, ವಚನ ಗಾಯನ, ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮರು ಅಪರೂಪಕ್ಕೊಮ್ಮೆ ಜನಿಸುತ್ತಾರೆ. ಅವರಿಂದ ಲೋಕ ಪಾವನವಾಗುತ್ತದೆ ಎಂದರು.
ಶಿವಕುಮಾರ ಸ್ವಾಮೀಜಿ ಕೇವಲ ಒಂದು ವ್ಯಕ್ತಿಯಲ್ಲ ಅದೊಂದು ಶಕ್ತಿ. ಅವರೊಬ್ಬ ತಪಸ್ವಿ, ಅವರೊಬ್ಬ ಯೋಗಿ, ಅವರೊಬ್ಬ ಕರುಣಾಮಯಿ, ಅವರೊಬ್ಬ ನಡೆದಾಡುವ ದೇವರು. ಸಹಸ್ರ ಸಹಸ್ರ ವರ್ಷಕ್ಕೊಮ್ಮೆ ಇಂತಹ ಋಷಿ ಸದೃಶ ವ್ಯಕ್ತಿಗಳು ಜನಿಸಿ ನಾಡನ್ನು ಪಾವನ ಮಾಡಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಹೇಳಿದರು.
ಸಿದ್ದಗಂಗಾ ಆಸ್ಪತ್ರೆಯ ವೈದ್ಯ ಡಾ. ಎಸ್. ಪರಮೇಶ್ ಮಾತನಾಡಿ, ನಮ್ಮ ತಂದೆ ತಾಯಿ ಎಷ್ಟು ಕಷ್ಟಪಟ್ಟು ನಮಗೆಲ್ಲ ವಿದ್ಯಾಭ್ಯಾಸ ಕೊಡಿಸಿದರು. ಅವರ ಸ್ಮರಣೆ ನಮಗೆ ಪ್ರೇರಣೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಅನಂತರಾಮಯ್ಯ, ಎಚ್.ಸಿ.ಪರಮಶಿವಯ್ಯ, ಜೈಪ್ರಕಾಶ್, ಎಂ.ಜಿ.ಸಿದ್ಧರಾಮಯ್ಯ, ರಾಜಶೇಖರ್, ಪರಮಶಿವಮೂರ್ತಿ, ಶಿವಲಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಮುದ್ದೇನಹಳ್ಳಿ ನಂಜಯ್ಯ ವಿರಚಿತ "ಶ್ರೀ ಶಿವಕುಮಾರ ಚರಿತ' ಷಟ್ಪದಿ ಕಾವ್ಯಕ್ಕೆ ಲಕ್ಷಿ$್ಮ ಜೈಪ್ರಕಾಶ್, ಸೀತಾಲಕ್ಷಿ$್ಮ ಶರ್ಮ, ವಿಭವ್ ವಾಚನ ಮಾಡಿದರೆ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ವ್ಯಾಖ್ಯಾನ ಮಾಡಿದರು.
ಶರಣ ಸೇವಾ ಗೌರವ ನೀಡಿ ಬಿ.ಎನ್. ಸಿದ್ದಲಿಂಗಯ್ಯ ಮಲ್ಲಸಂದ್ರ, ಗದ್ದುಗೆ ಬಸವರಾಜು ಶ್ರೀ ಸಿದ್ದಗಂಗಾ ಮಠ, ನಟರಾಜು ಕುಂದರನಹಳ್ಳಿ ಅವರನ್ನು ಶಿವಸಿದ್ದೇಶ್ವರ ಸ್ವಾಮೀಜಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಿದ್ದಗಂಗಾ ಆಸ್ಪತ್ರೆಯ ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣೆ ನಡೆಸಿದರು.
ಎಸ್.ವಿ.ರವೀಂದ್ರನಾಥ ಟ್ಯಾಗೂರ್ ಸ್ವಾಗತಿಸಿದರು. ರೂಪ ಈಶ್ವರ್ ವಂದಿಸಿದರು.