Sharana Literature: A Mine of Life Values 
ತುಮಕೂರು

ಜೀವನ ಮೌಲ್ಯಗಳ ಗಣಿ ಶರಣ ಸಾಹಿತ್ಯ

ತಿಪಟೂರು: ಶರಣ ಸಾಹಿತ್ಯ ಜೀವನ ಮೌಲ್ಯಗಳ ಗಣಿಯಾಗಿದೆ ಎಂದು ಚಿಕ್ಕನಾಯಕನಹಳ್ಳಿ ನವೋದಯ ಪ್ರಥಮದರ್ಜೆ ಕಾಲೇಜು ಪ್ರಭಾರ ಪ್ರಾಚಾರ್ಯ ಡಾ.ಸಿ.ರವಿಕುಮಾರ್​ ಬಣ್ಣಿಸಿದರು.
ನಗರದ ಸಿಡ್ಲೇಹಳ್ಳಿ ಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದಲ್ಲಿ ಆಯೋಜಿಸಿದ್ದ 354ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ನಡೆದ ಶರಣ ಚಳುವಳಿಯಿಂದ ಮೂಡಿ ಬಂದ ಶರಣರ ಸಾಹಿತ್ಯವಾದ ವಚನಗಳು ಜೀವನ ಮೌಲ್ಯಗಳ ಗಣಿಯಾಗಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ಚಿಂತನೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ವಿದ್ಯಾರ್ಥಿಗಳ ಸರ್ವತೋಮುಖ ಸಾಧನೆಗೆ ಏಕಾಗ್ರತೆಯೇ ದಾರಿ ದೀಪವಾಗಿದೆ. ಶಿವ ಶರಣರು ಕಾಯಕ, ದಾಸೋಹದೊಂದಿಗೆ ಶಿವಯೋಗ ಸಾಧನೆ ಮಾಡಿ ಸತ್ಯ ಸಾಾತ್ಕಾರ ಮಾಡಿಕೊಂಡಿದ್ದರು ಎಂದು ತಿಳಿಸಿದರು.
ಶ್ರೀ ಗುರುಕುಲ ಹಿರಿಯ ವಿದ್ಯಾರ್ಥಿ ಸಂದ ಸಂಚಾಲಕರೂ ಆದ ಎಸ್​.ಚನ್ನಬಸವಯ್ಯ ತಮ್ಮ ತಂದೆ ಲಿಂಗೈಕ್ಯ ಶಿವನಂಜಪ್ಪ, ತಾಯಿ ಬೋರಮ್ಮ, ಪತ್ನಿ ಲಿಂಗೈಕ್ಯ ಶಶಿಕಲಾ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಿದ್ದರು.