ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳು ಬಣಗುಟ್ಟಿದವು 
ತುಮಕೂರು

ಕಳೆಗಟ್ಟದ ಸಮ್ಮೇಳನದಲ್ಲಿ ಕಾರಣಗಳಿಗೆ ಹುಡುಕಾಟ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ಸಾಹಿತ್ಯಾಸಕ್ತರ ಬರ ನೀಗಿಸಲು ವಿದ್ಯಾರ್ಥಿಗಳ ಮೊರೆ
  • ಜಾತ್ರೆಯಂತೆ ಮುಗಿದ ಸಮ್ಮೇಳನದಲ್ಲಿ ಉಳಿದಿದ್ದು ಕಸ
ತುಮಕೂರು: ಸತತ ನಾಲ್ಕು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ತುಮಕೂರಿನ ಗಾಜಿನಮನೆಯಲ್ಲಿ ಯಶಸ್ವಿಯಾಗಿ ಸಂಟಿಸಿರುವುದಾಗಿ ಬೀಗುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಈಗ ಎರಡು ದಿನ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಟನೆಯಲ್ಲಿ ಎಡವಿಬಿದ್ದಿದೆ. ಜಿಲ್ಲಾಡಳಿತದ ಮೇಲಿನ ಅತಿಯಾದ ಅವಲಂಭನೆಯಿಂದ ಸಾಮಾನ್ಯ ಜನರು ಅಕ್ಷರ ಜಾತ್ರೆಯಿಂದ ದೂರ ಉಳಿಯುವಂತಾಗಿದೆ.
ಶಾಲಾ ವಾರ್ಷಿಕೋತ್ಸವ ಮಾದರಿಯಲ್ಲಿ ಸಾಂಸತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಮೂಲಕ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನೆಪಮಾತ್ರಕ್ಕೆ ನಡೆಸಲಾಗಿದೆ. ಅವಕಾಶವಿದ್ದ 7 ಗೋಷ್ಠಿಗಳಲ್ಲಿ ಶಾಲಾ ಮಕ್ಕಳು ಕೂರುವಂತೆ ಮಾಡಿದ್ದ ಮಾಸ್ಟರ್​ ಪ್ಲಾನ್​ ಹಿಂದಿನಂತೆ ಸಾಹಿತ್ಯ ಸಮ್ಮೇಳನಗಳ ಗಾಂಭೀರ್ಯದ ಸ್ವರೂಪ ಬದಲಿಸಿ ಜಾತ್ರೆಗಳಂತೆ ಭಾಸವಾಯಿತು.
ಜಿಲ್ಲಾ ಕಸಾಪ ಕೆಲವು ಪದಾಧಿಕಾರಿಗಳ ಸ್ವಾರ್ಥ, ರಾಜಕೀಯ ಪಕ್ಷಗಳೊಂದಿಗಿನ ಒಡನಾಟ ನೈಜ ಭಾಷಾಭಿಮಾನದ ಜನ ಸಮ್ಮೇಳನದಿಂದ ದೂರು ಉಳಿಯಲು ಮತ್ತೊಂದು ಕಾರಣ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿಯೊಬ್ಬರು ಅಸಮಧಾನ ಹೊರಹಾಕಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದೇಣಿಗೆ ನೀಡುವ ಸಿರಿವಂತರನ್ನು ಮಾತ್ರ ಮೆಚ್ಚಿಸಲು ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟು ಸಮ್ಮೇಳನ ಆಯೋಜಿಸಿದಂತಾಯಿತು.
ಆಹ್ವಾನ ಪತ್ರಿಕೆಯಲ್ಲಿದ್ದ ಹೆಸರುಗಳ ಸಾಲಿನಲ್ಲಿ ತುಂಬಿ ತುಳುಕಿದ್ದ ಜನಪ್ರತಿನಿಧಿಗಳು ಸಮ್ಮೇಳನದಲ್ಲಿ ಕಾಣಿಸಲೇ ಇಲ್ಲ, ಗೋಷ್ಠಿಗಳಲ್ಲಿಯೂ ತುಮಕೂರು ಜಿಲ್ಲೆಯ ದೇಸಿಯತೆ, ಕೃಷಿ, ಮಹಿಳೆಯರು, ನೆಲ, ನಿಲುವುಗಳನ್ನು ಕಡೆಗಣಿಸಲಾಗಿತ್ತು. ಆಯೋಜಿಸಿದ್ದ ಏಳೆಂಟು ಗೋಷ್ಠಿಗಳಲ್ಲಿಯೂ ಪ್ರೇಕ್ಷಕರಂತೆಯೇ ವಿಷಯ ಪ್ರೌಢಿಮೆಯ ಕೊರತೆಯೂ ಕಾಣಿಸಿತು.
ಕಸಾಪ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಲ್ಲ., ಶಾಶ್ವತ ಸದಸ್ಯರನ್ನು ಕರೆಯುವ ಔದಾರ್ಯ ತೋರಿಲ್ಲ. ಇಂತಹ ಅಸಡ್ಡೆಗಳಿಂದ ಬೇಸತ್ತು ಕನ್ನಡ ಪ್ರೇಮಿಗಳು ಸಮ್ಮೇಳನ ಬಹಿಷ್ಕರಿಸಿದ್ದಾರೆ ಎಂಬ ಮಾತೂ ಕೇಳಿಬಂತು. ಜಿಲ್ಲೆಯಲ್ಲಿಯೂ ಚಿರಪರಿಚಿತರಾಗಿರುವ ಸಾಹಿತಿಗಳು, ಸಾಧಕರು ಎರಡೂ ದಿನ ಸಮ್ಮೇಳದ ಕಡೆ ಸುಳಿಯದಿರುವುದು ಸಾಹಿತ್ಯಾಸಕ್ತರಲ್ಲಿ ಸಮ್ಮೇಳನದತ್ತ ಮುಖಮಾಡದಂತೆ ಪರಿಸ್ಥಿತಿ ಸೃಷ್ಟಿಸಿತು.
ಶಿಕ್ಷಣ ಇಲಾಖೆಯಿಂದ ನಿವೃತ್ತರಾಗಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುವ ಕೆ.ಎಸ್​.ಸಿದ್ದಲಿಂಗಪ್ಪ ಸಂಟನೆಗೆ ಕೆಲವು ಶಿಕ್ಷಕರ ಪಡೆ ಕಟ್ಟಿಕೊಂಡಿದ್ದು ಅವರನ್ನಷ್ಟೇ ಬಳಸಿಕೊಂಡು ಸಮ್ಮೇಳನ ಮಾಡುವಂತಾಯಿತು. ಸಮ್ಮೇಳನದಲ್ಲಿ ಜವಬ್ಧಾರಿ ಹೊತ್ತಿದ್ದವರೆಲ್ಲರೂ ಅವರವರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಊಟ, ಉಪಚಾರ, ವೇದಿಕೆಯಲ್ಲಿ ಯಾವುದೇ ಲೋಪಗಳಾಗದಂತೆ ನೋಡಿಕೊಂಡರು.
ಸಾಹಿತ್ಯ ಪರಿಷತ್​ ಜಾತಿ, ಧರ್ಮದ ಆಧಾರದ ಮೇಲೆ ನಡೆಯುತ್ತಿವೆ. ಸಾಮಾನ್ಯ ಜನರು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರಬೇಕು. ಗೋಷ್ಠಿಗಳಲ್ಲಿ ಜನರು ಬದುಕಿಗೆ ಹತ್ತಿರವಾದ ವಿಷಯಗಳಿರಬೇಕು, ಪ್ರಬಂಧ ಮಂಡಿಸುವವರು ಪ್ರೌಢಿಮೆ ಹೊಂದಿರಬೇಕು, ಜಾತ್ರೆಯಂತೆ ಜನರನ್ನು ಸೇರಿಸುದಷ್ಟೇ ಸಮ್ಮೇಳನದ ಆಶಯವಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿರುವ ಅನೇಕ ಗಣ್ಯರನ್ನು ಗುರುತಿಸಿ ಆಹ್ವಾನ ಪತ್ರಿಕೆ ತಲುಪಿಸುವ ಕೆಲಸವನ್ನು ಜಿಲ್ಲಾ ಹಾಗೂ ತಾಲೂಕು ಕಸಾಪ ಮಾಡಿಲ್ಲ ಎಂಬ ದೂರು ಸಮ್ಮೇಳನದ ಪಡಸಾಲೆಯಲ್ಲಿ ಕೇಳಿಬರುತಿತ್ತು. ಮುಂದಿನ ವರ್ಷದ ಕಸಾಪ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ತುಮಕೂರನ್ನು ಕೇಂದ್ರವಾಗಿಸಿಕೊಂಡು ಯಾವುದೊ ಒಂದು ವರ್ಗವನ್ನು ತೃಪ್ತಿಪಡಿಸಲು ಜಿಲ್ಲಾ ಕಸಾಪ ಅಧ್ಯಕ್ಷರು ಸಮ್ಮೇಳನಕ್ಕೆ ಒತ್ತುಕೊಟ್ಟಂತಿತ್ತು ಎಂದು ಹೆಸರು ಹೇಳಲಿಚ್ಛಿಸದ ಸಾಹಿತಿಯೊಬ್ಬರು ವಿಜಯವಾಣಿಗೆ ತಿಳಿಸಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ನಾಲ್ಕು ರ್ನಿಣಯಗಳು
1.ವಿದ್ಯಾರ್ಥಿಗಳ ಕೊರತೆಯಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದೆ, ಬಲಪಡಿಸಬೇಕು
2.ತುಮಕೂರಿನಲ್ಲಿ ಜನಪದ ಲೋಕ ಸಂಗ್ರಹಾಲಯ ನಿರ್ಮಾಣ, ಕಲಾಗ್ರಾಮಕ್ಕಾಗಿ ಕಸಾಪಗೆ 5 ಎಕರೆ ಭೂಮಿಗೆ ಮನವಿ
3.ಆಯಾ ವರ್ಷ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಖರೀದಿ ಹಾಗೂ ಸಕಾಲದಲ್ಲಿ ಹಣ ಬಿಡುಗಡೆ ಮೂಲಕ ಪುಸ್ತಕ ಸಂಸತಿಗೆ ಪ್ರೋತ್ಸಾಹ
4.ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣೆ, ಮೂರ್ತಿಶಿಲ್ಪ, ಸ್ಮಾರಕ ಶಿಲ್ಪಗಳ ರಕ್ಷಣೆಗೆ ಸಂಗ್ರಹಾಲಯ ನಿಮಿಸಬೇಕು.