ರೋಟರಿ ತುಮಕೂರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಎನ್​.ಬಿ.ಪ್ರದಿಪ್​ ಕುಮಾರ್​ ಉದ್ಘಾಟಿಸಿದರು. ಡಾ.ಎಲಿಜಬೆತ್​ ಚೆರಿಯನ್​, ಭಾಗ್ಯಲಕ್ಷ್ಮಿ, ಸಿ.ನಾಗರಾಜ್​, ಸಿ.ಎನ್​.ಪ್ರಸನ್ನಕುಮಾರ್​, ಯಶಸ್ವಿನಿ, ಸರೋಜಮ್ಮ, ಡಾ.ಎಸ್​.ಎಲ್​.ಕಾಡದೇವರಮಟ್​, ಎಂ.ಎಸ್​.ಉಮೇಶ್​, ಡಾ.ಎ.ಎಸ್​.ಸುದರ್ಶನ್​, ಮಲ್ಲೇಶಯ್ಯ ಮತ್ತಿತರರು ಇದ್ದರು.  
ತುಮಕೂರು

ಸೇವೆಯ ಚಳವಳಿ ರೋಟರಿ

ಪ್ರಮುಖ ಮುಖ್ಯಾಂಶಗಳು

  • ರೋಟರಿ ತುಮಕೂರು
  • ನೂತನ ಪದಗ್ರಹಣ ಸಮಾರಂಭ
  • ಭಾಗ್ಯಲಕ್ಷ್ಮಿ ನೇತೃತ್ವದ ತಂಡ
ತುಮಕೂರು: ರೋಟರಿ ತುಮಕೂರು 2026-27ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ವಿದ್ಯಾನಿಧಿ ಕಾಲೇಜಿನ ವಿಜಿ ಸಭಾಂಗಣದಲ್ಲಿ ಭಾನುವಾರ ನಡೆಯಿತು. ನೂತನ ಅಧ್ಯೆ ಭಾಗ್ಯಲಕ್ಷ್ಮಿ ಮಾತನಾಡಿ, ರೋಟರಿ ಎಂದರೆ ಕೇವಲ ಒಂದು ಸಂಘಟನೆಯಲ್ಲ. ಅದು ಸೇವೆಯ ಚಳವಳಿ. ನಿಸ್ವಾರ್ಥ ಸೇವೆ ಹಾಗೂ ಮಾಡುವ ಕೆಲಸದಲ್ಲಿ ಶಾಶ್ವತ ಪರಿಣಾಮ ಸೃಸ್ಟಿಸೋಣ ಎಂಬ ನಮ್ಮ ಧೈಯ ವಾಕ್ಯ ಅನುಸರಿಸಿ ಸೇವೆ ಮಾಡಿದರೆ ಬದುಕಿಗೆ ಒಂದು ಅರ್ಥ ಬರುತ್ತದೆ .ನಾವು ಮಾಡಿದ ಕೆಲಸ ಮುಂದಿನ ಹತ್ತಾರು ವರ್ಷ ಉಳಿದು ಸಮಾಜಕ್ಕೆ ಉಪಯೋಗ ಆಗುವಂತಿರಬೇಕು ಎಂದರು.
ನಿಕಟಪೂರ್ವ ಜಿಲ್ಲಾ ರಾಜ್ಯಪಾಲರಾದ ಡಾ.ಎಲಿಜಬೆತ್​ ಚೆರಿಯನ್​ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೀಡಿ ಶುಭ ಕೋರಿದರು.
ವಿದ್ಯಾವಾಹಿನಿ ಸಮೂಹ ಸಂಸ್ಥೆ ಕಾರ್ಯದರ್ಶಿ ಎನ್​.ಬಿ. ಪ್ರದಿಪ್​ಕುಮಾರ್​, ಜೆಐಸಿ ರಾಷ್ಟ್ರೀಯ ಉಪಾಧ್ಯಕ್ಷೆ ಯಶಸ್ವಿನಿ, ಸಹಾಯಕ ಗೌರ್ನರ್​ ಸಿ. ನಾಗರಾಜ್​, ಜಿಲ್ಲಾ ಕಾರ್ಯದರ್ಶಿ ಸಿ.ಎನ್​. ಪ್ರಸನ್ನಕುಮಾರ್​, ಸಹಾಯಕ ಗೌರ್ನರ್​ ಸರೋಜಮ್ಮ, ರೋಟರಿ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಡಾ.ಎಸ್​.ಎಲ್​. ಕಾಡದೇವರಮಠ್​, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಎಸ್​. ಉಮೇಶ್​, ನಿಕಟಪೂರ್ವ ಅಧ್ಯಕ್ಷ ಡಾ.ಎ.ಎಸ್​. ಸುದರ್ಶನ್​, ನಿಕಟಪೂರ್ವ ಕಾರ್ಯದರ್ಶಿ ಮಲ್ಲೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷೆ ಭಾಗ್ಯಲಕ್ಷ್ಮಿ ಜತೆ ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ಹೇಮಾ ಮಲ್ಲಿಕ್​, ರಾಧಾ, ಅನಿತಾ, ಐ.ಆರ್​. ಚಂದ್ರಶೇಖರ್​, ಎಸ್​. ರವಿಶಂಕರ್​, ವಿ.ಎಸ್​. ಶಿವಶಂಕರಸ್ವಾಮಿ, ಎನ್​.ಸಿ. ಉಮೇಶ್​, ಡಿ.ಎನ್​. ಲಕ್ಕಪ್ಪ, ಅನಿತಾ ನಾಗೇಶ್​, ಎಂ.ಆರ್​. ರಘು, ನಾಗಮಣಿ ಅಧಿಕಾರ ಸ್ವೀಕರಿಸಿದರು.