Religion is the symbol of parliament 
ತುಮಕೂರು

ಧರ್ಮ, ಸಂಸತಿಯ ಪ್ರತಿಕ ದೇಗುಲ

ಬುಕ್ಕಾಪಟ್ಟಣ: ದೇವಸ್ಥಾನಗಳು ಧರ್ಮ, ಸಂಸತಿಯ ಹೆಸರಿನಲ್ಲಿ ಜನರನ್ನು ಒಂದು ಗುಡಿಸುವ ಕಾರ್ಯಕ್ರಮಗಳಾಗಿವೆ ಎಂದು ಶಾಸಕ ಸಿ.ಬಿ. ಸುರೇಶ್​ಬಾಬು ತಿಳಿಸಿದರು.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕೆಂಚಪ್ಪನಹಳ್ಳಿ ವಡ್ಡರಹಟ್ಟಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜದ ಜನರನ್ನು ಏಕತೆಯತ್ತ ಒಂದುಗೂಡಿಸುವ ಏಕೈಕ ಸ್ಥಳ ದೇವಸ್ಥಾನಗಳು ಎಂದರು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಕ್ತಿ ಶ್ರದ್ಧೆಗಳು ಕಡಿಮೆಯಾಗುತ್ತಿರುವುದು ವಿಪರ್ಯಾಸ. ಆದರೆ, ಕೆಂಚಪ್ಪನಹಳ್ಳಿ ವಡ್ಡರಹಟ್ಟಿಯ ಜನರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಕಳಶ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಿರುವುದನ್ನು ಶ್ಲಾಘಿಸಿದರು.