ವಿಜಯವಾಣಿ ಸುದ್ದಿಜಾಲ ಮಧುಗಿರಿ
ಶಾಸಕ ಕೆ.ಎನ್.ರಾಜಣ್ಣ ಬದ್ಧತೆ ಇರುವ ರಾಜಕಾರಣಿ. ತಾಲೂಕಿನ ಅಭಿವೃದ್ಧಿಯಲ್ಲಿ ಸಾ ಗುಡ್ಡೆ ಬಿಟ್ಟಿದ್ದಾರೆ. ಆದರೆ, ನಿಮ್ಮ ೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಸಚಿವ ಎಚ್.ಸಿ ಬಾಲಕೃಷ್ಣ ವಿರುದ್ಧ ಟಿಎಪಿಸಿಎಂಎಸ್ ಅಧ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ ವಾಗ್ದಾಳಿ ನಡೆಸಿದರು.
ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಣ್ಣ ಅವರಂತಹ ಹಿರಿಯ ನಾಯಕರ ವಿರುದ್ಧ ಸಚಿವ ಬಾಲಕೃಷ್ಣ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ರಾಜಣ್ಣ ಸತ್ಯ ಹೇಳಿದ್ದಾರೆಯೇ ಹೊರತು ಪಕ್ಷಕ್ಕೆ ಹಿನ್ನಡೆಯಾಗುವ ಯಾವುದೇ ಹೇಳಿಕೆ ನೀಡಿಲ್ಲ. ಸಾಮಾನ್ಯ ೇತ್ರದಲ್ಲಿ ದಲಿತರೊಬ್ಬರು ಜಯಗಳಿಸಲು ರಾಜಣ್ಣ ಅವರಿಂದ ಮಾತ್ರ ಸಾಧ್ಯ. ಬಾಲಕೃಷ್ಣ ಅವರಿಗೆ ಇದು ಸಾಧ್ಯವಾ?. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯ ಎನ್.ಗಂಗಣ್ಣ ಮಾತನಾಡಿ, ೇತ್ರಕ್ಕೆ ಕೈಗಾರಿಕೆ ತರುವ ಉದ್ದೇಶದಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರ್.ರಾಜೇಂದ್ರ ಮನವಿ ಮಾಡಿದ್ದಾರೆ. ಇದರಲ್ಲಿ ತಪ್ಪೇನು...? ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದ ನಿಮಗೆ ರಾಜಣ್ಣ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ರಾಜಣ್ಣ ಅವರ ವಿರುದ್ಧ ತುತ್ತೂರಿ ಊದಿ ಸಚಿವ ಸ್ಥಾನ ಕಳೆದಿದ್ದೀರಾ, ಈಗಲೂ ಕಂಪ್ಲೆಂಟ್ ಹೇಳಿ...ಬೇಡ ಅಂದವರ್ಯಾರು ಎಂದು ಲೇವಡಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯ ಆದಿನಾರಾಯಣ ರೆಡ್ಡಿ ಮಾತನಾಡಿ, ರಾಜಣ್ಣ ಅವರ ಮೂಲ ಮಾಗಡಿ. ಇಲ್ಲಿ ಅವರ ಸಮುದಾಯದ 20 ಸಾವಿರ ಮತಗಳಿವೆ. ಅವರ ವಿರುದ್ಧ ಹೇಳಿಕೆ ನೀಡಿದರೆ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ ಎಂದರು.
ಪುರಸಭೆ ಮಾಜಿ ಅಧ್ಯರಾದ ಎಂ.ಕೆ.ನಂಜುಂಡಯ್ಯ, ಕೆ.ಪ್ರಕಾಶ್, ಆಯುಬ್, ಎಪಿಎಂಸಿ ಮಾಜಿ ಅಧ್ಯ ಪಿ.ಟಿ.ಗೋವಿಂದಪ್ಪ, ತಾಪಂ ಮಾಜಿ ಅಧ್ಯ ಎಂ.ಬಿ.ಮರಿಯಣ್ಣ, ಕೆಎಂಎಫ್ ಮಾಜಿ ನಿರ್ದೇಶಕ ಮೈದುನಳ್ಳಿ ಕಾಂತರಾಜು, ಪುರಸಭೆ ಮಾಜಿ ಸದಸ್ಯರಾದ ಶ್ರೀಧರ್, ಅಲೀಮ್, ಮುಖಂಡರಾದ ಡಿ.ಎಚ್.ನಾಗರಾಜು, ಕಲ್ಲಹಳ್ಳಿ ದೇವರಾಜು, ನಾರಾಯಣಗೌಡ, ಸಿದ್ದಪುರ ರಂಗಶಾಮಣ್ಣ, ಶ್ರೀನಿವಾಸ ರೆಡ್ಡಿ, ರಾಜ್ಮೋಹನ್ ಇತರರಿದ್ದರು.