Rajanna becomes president of Yanjalagere VSSN
ಬರಗೂರು : ಶಿರಾ ತಾಲೂಕು ಯಂಜಲಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ರಾಜಣ್ಣ, ಉಪಾಧ್ಯಕ್ಷರಾಗಿ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾದರು. ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ.ರಾಜಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹನುಮಂತರಾಯಪ್ಪ ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶ್ರೀನಿವಾಸ್ ಘೋಷಿಸಿದರು.
ಸಂಘದ ನೂತನ ಅಧ್ಯಕ್ಷ ಕೆ.ಬಿ.ರಾಜಣ್ಣ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿ ಸಾಲ ಸೌಲಭ್ಯ ಹಾಗೂ ರಸಗೊಬ್ಬರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ ಮಾಡುತ್ತೇನೆ. ಎಲ್ಲರೂ ಒಗ್ಗೂಡಿ ಸಂಘವನ್ನು ಮುನ್ನಡೆಸಿದಾಗ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಹುಲಿಕುಂಟೆ ಗ್ರಾಪಂ ಮಾಜಿ ಅಧ್ಯಕ್ಷ ವೈ.ಕೆ.ತಿಪ್ಪೇಸ್ವಾಮಿ ಮಾತನಾಡಿ, ರೈತರ ಕೃಷಿಗೆ ಸಹಕಾರವಾಗುವ ರೀತಿ ಸಾಲ ಸೌಲಭ್ಯವನ್ನು ನಿಗದಿತ ಸಮಯದಲ್ಲಿ ನೀಡಬೇಕು. ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನಿರ್ದೇಶಕರಾದ ಅಂಬಿಕಾ, ನರಸಿಂಹಯ್ಯ, ಶಿವಲಿಂಗಪ್ಪ, ಕೆ.ತಿಪ್ಪೇಸ್ವಾಮಿ, ಸುರೇಶ್ ಕಾರ್ತಿಕ, ಎಂ.ಸಿದ್ದೇಶ್ವರ, ಓಬಣ್ಣ, ರಾಮಣ್ಣ, ಸುವರ್ಣಮ್ಮ, ಸಚಿನ್, ಹಟ್ಟಿ ಚಿನ್ನದ ಗಣಿ ಮಾಜಿ ನಿರ್ದೇಶಕ ಕೊಟ್ಟಿ ಆಶೋಕ್, ತಾಪಂ ಮಾಜಿ ಸದಸ್ಯ ವಸುಧಾ ತಿಪ್ಪೇಶ್ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ದೊಡ್ಡೇಗೌಡ ಮತ್ತಿತರರು ಇದ್ದರು.