- ರೈತರಿಗೆ ಸುಲಭ ಆ್ಯಪ್ ಪರಿಚಯಿಸಿದ ಕೃಷಿ ಇಲಾಖೆ
- ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕ ಜಾರಿ
ತುಮಕೂರು: ರಾಜ್ಯದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿರುವ ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಖರೀದಿಸುವ ಕುರಿತು ಕೃಷಿ ಇಲಾಖೆ ರೈತರಿಗೆ ಮಾಹಿತಿ ನೀಡಿದೆ.
ರೈತರು ತಾವಿರುವ ಸ್ಥಳದಿಂದಲೇ "ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ ಸೇಲ್' ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಕಾಯ್ದಿರಿಸುವ ವಿನೂತನ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಆಯ್ದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಪ್ರಾಯೋಗಿಕ ಜಾರಿಗೆ ಮುಂದಾಗಿದೆ.
ರಸಗೊಬ್ಬರ ಖರೀದಿ ಪ್ರಕ್ರಿಯೆ ಸರಳವಾಗಿಸಲು ಕೇಂದ್ರ ಸರ್ಕಾರ "ಫರ್ಟಿಲೈಸರ್ಸ್ ಸೇಲ್ಸ್ ಅಪ್ಲಿಕೇಫಿನ್ ಸಿಸ್ಟಮ್' ಎಂಬ ವಿನೂತನ ವ್ಯವಸ್ಥೆ ಜಾರಿಗೊಳಿಸಿ, "ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ ಸೇಲ್' ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅನುಷ್ಠಾನಗೊಳಿಸುತ್ತಿದೆ.
ಜೂನ್ 17ರಂದು ಮೊಬೈಲ್ ಆ್ಯಪ್ ಬಳಕೆಗೆ ಅಧಿಕೃತ ಚಾಲನೆ ದೊರೆಯಲಿದ್ದು ರೈತರು ತಮ್ಮೆಲ್ಲ ಕೆಲಸ ಬಿಟ್ಟು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಮುಂದಿರುವುದಿಲ್ಲ. ಮೊಬೈಲ್ ಆ್ಯಪ್ ಮೂಲಕ ರೈತರು ಹತ್ತಿರದ ಗೊಬ್ಬರದ ಅಂಗಡಿಗೆ ಬುಕ್ ಮಾಡಿದಾಗ ಮೊಬೈಲ್ ಆ್ಯಪ್ನಲ್ಲಿ ಕ್ಯೂ ಆರ್ ಕೋಡ್ ಸೃಜನೆಯಾಗಲಿದ್ದು ಈ ಕೋಡ್ ಬಳಸಿ ಗೊಬ್ಬರ ಖರೀದಿಸಬಹುದು.
ರೈತ ಬಯಸಿದ 3 ದಿನದೊಳಗೆ ಗೊಬ್ಬರ ಖರೀದಿಸಬಹುದು, ಇದರಿಂದ ರೈತರಿಗೆ ದೊರೆಯುವ ಗೊಬ್ಬರ ಅನ್ಯರ ಪಾಲಾಗುವುದಿಲ್ಲ. ಕೈಗಾರಿಕೆ ಉದ್ದೇಶ ಸೇರಿ ಯೂರಿಯಾ ಮತ್ತಿತರ ಗೊಬ್ಬರಗಳ ದುರ್ಬಳಕೆ, ಕಾಳಸಂತೆ ಮಾರಾಟಕ್ಕೆ ಈ ವ್ಯವಸ್ಥೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ. ರೈತರು ಕಾಮನ್ ಸರ್ವಿಸ್ ಸೆಂಟರ್(ಸಿಎಸ್ಸಿ) ಮೂಲಕ ರಸಗೊಬ್ಬರ ಕಾಯ್ದಿರಿಸಬಹುದು. ರಸಗೊಬ್ಬರ ಅಂಗಡಿ ಮಾಲೀಕರು ಸಹ ಸ್ವಯಂಪ್ರೇರಿತವಾಗಿ ರಸಗೊಬ್ಬರಗಳನ್ನು ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಲು ಸಹಕರಿಸಬೇಕು.
ದೇಶಾದ್ಯಂತ ಗೊಬ್ಬರಕ್ಕೆ ಇರುವ ಬೇಡಿಕೆ ಈ ವ್ಯವಸ್ಥೆಯಡಿ ಸರ್ಕಾರಗಳ ಗಮನಕ್ಕೆ ಬರಲು ಈ ಮೊಬೈಲ್ ಆ್ಯಪ್ ಸಹಕಾರಿಯಾಗಲಿದೆ. ಇದರಿಂದ ಯೋಜಿತ ಬೇಡಿಕೆಯನ್ವಯ ದೇಶಾದ್ಯಂತ ಗೊಬ್ಬರದ ಸುಸ್ಥಿರ ಪೂರೈಕೆ ಸಾಧ್ಯವಾಗಲಿದೆ. ಆಹಾರ ಭದ್ರತೆಗೂ ಇದು ನೆರವಾಗಲಿದೆ. ಗೊಬ್ಬರದ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲು ಅನುವಾಗಲಿದೆ. ಪ್ರತಿ ವಹಿವಾಟು ಡಿಜಿಟಲೀಕರಣ ರೂಪದಲ್ಲಿದ್ದು, ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕ ಸಿಗಲಿದೆ. ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಕಡಿವಾಣ ಹಾಕುವ ನಿರೀೆಯಿದೆ.
ಮೊಬೈಲ್ ಆ್ಯಪ್ ಬಳಸುವುದು ಹೀಗೆ...
ರೈತರು ಆಂಡ್ರಾಯ್ಡ್ ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ನಲ್ಲಿ ಆಧಾರ್ ಸಂಖ್ಯೆ ಅಥವಾ ಎಫ್ಐಡಿ ನಮೂದಿಸಿದಾಗ ಆಧಾರ್ಗೆ ಲಿಂಕ್ ಆದ ಮೊಬೈಲ್ಗೆ ಬರುವ ಒಟಿಪಿ ದಾಖಲಿಸಿದರೆ ಆ್ಯಪ್ನಲ್ಲಿ ಹಿಡುವಳಿ ವಿಸ್ತೀರ್ಣದ ಮಾಹಿತಿ ಲಭ್ಯವಾಗುತ್ತದೆ. ಬಟನ್ ಒತ್ತಿದಾಗ ಬೆಳೆ ವಿವರ ಲಭ್ಯವಾಗುತ್ತವೆ. ಬೆಳೆ ವಿವರ ದಾಖಲಿಸಿದ ನಂತರ ಅಪ್ಲೆ ಾರ್ ರ್ಟಿಲೈಸರ್ ಬಟನ್ ಒತ್ತಿದಾಗ ಗ್ರೇಡ್ ವಾರು ರಸಗೊಬ್ಬರದ ವಿವರ ಲಭ್ಯವಾಗುತ್ತದೆ. ರಸಗೊಬ್ಬರದ ವಿವರವನ್ನು ದಾಖಲಿಸಿದ ನಂತರ ಹತ್ತಿರದ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಯನ್ನು ಆಯ್ಕೆ ಮಾಡುವುದು. ಆಯ್ಕೆ ಮಾಡಿದ ನಂತರ ಸಬ್ಮಿಟ್ ಬಟನ್ ಒತ್ತಿದಾಗ ಕ್ಯೂ ಆರ್ ಕೋಡ್ ಆಗುವುದರ ಮೂಲಕ ರಸಗೊಬ್ಬರವನ್ನು ಕಾಯ್ದಿರಿಸಲಾಗುತ್ತದೆ.
ಬುಕಿಂಗ್ ಬಳಿಕ ಬರುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿಯವರು ಸ್ಕ್ಯಾನ್ ಮಾಡಿ ಗೊಬ್ಬರ ನೀಡುತ್ತಾರೆ. ರೈತರು ಖುದ್ದಾಗಿ ಹೋಗಲು ಆಗದಿದ್ದರೆ ರೈತರ ಪರ ಬೇರೊಬ್ಬ ವ್ಯಕ್ತಿ ಹೋಗಬಹುದು. ಆ ಬೇರೊಬ್ಬ ವ್ಯಕ್ತಿ ಒಟಿಪಿ, ಕ್ಯೂಆರ್ ಕೋಡ್ ಹಾಗೂ ತನ್ನ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಯುಪಿಐ ಮೂಲಕ ರಸಗೊಬ್ಬರ ಮಾರಾಟಗಾರರಿಗೆ ಹಣ ಪಾವತಿಸಿ ರಸಗೊಬ್ಬರವನ್ನು ಪಡೆಯಬಹುದು