ಕನ್ನಡ ರಾಜ್ಯೋತ್ಸವ ಆಚರಣೆ  
ತುಮಕೂರು

ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿ

ಪ್ರಮುಖ ಮುಖ್ಯಾಂಶಗಳು

  • ಶಾಲೆಯ ಮುಖ್ಯಶಿಕ್ಷಕ ಎಸ್​.ಆರ್​.ಪ್ರದಿಪ್ ಹೇಳಿಕೆ
  • ಕನ್ನಡ ರಾಜ್ಯೋತ್ಸವ ಆಚರಣೆ
ಹುಳಿಯಾರು: ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹುಳಿಯಾರು ವತಿಯಿಂದ ನಡೆಯುತ್ತಿರುವ ಕಿಡ್ನಿ ಮತ್ತು ವಿವೇಕಾನಂದ ಇಂಟರ್​ ನ್ಯಾಷನಲ್​ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮವು ಪುಟ್ಟ ಮಕ್ಕಳ ಭಾಷಣದಿಂದ ಪ್ರಾರಂಭವಾಗಿ, ಕನ್ನಡದ ಕಟ್ಟಾಳುಗಳ ವೇಷಭೂಷಣ ಪ್ರದರ್ಶಿಸುತ್ತ ಅವರ ಅಂಕಿತ ನಮಗಳನ್ನೂ ಹೇಳುತ್ತಾ, ಕನ್ನಡ ಸಂಸತಿಯ ಸಾಂಸತಿಕ ಕಾರ್ಯಕ್ರಮವನ್ನು ಪ್ರದರ್ಶಿಸುತ್ತ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಲೆಯ ಮುಖ್ಯಶಿಕ್ಷಕ ಎಸ್​.ಆರ್​.ಪ್ರದಿಪ್​ ಮಾತನಾಡಿ, ಕನ್ನಡ ರಾಜ್ಯೋತ್ಸವದ ಮಹತ್ವ, ಕನ್ನಡ ಭಾಷೆಯ ಶಾಸಿಯ ಸ್ಥಾನಮಾನ, ಎದೆ ತಟ್ಟಿ ಹೇಳಬೇಕು. ನಾವು ಭಾರತೀಯರೆಂದು ಗರ್ವದಿಂದ ಬಾಳಬೇಕು, ನಾವು ಕನ್ನಡಿಗರೆಂಬ ಹೆಮ್ಮೆಯಿಂದ, ಭಾಷೆಯ ಗೌರವವೇ ನಾಡಿನ ಗೌರವ ಎಂದು ತಿಳಿಸಿದರು. 
ಸಂಸ್ಥೆ ಅಧ್ಯಕ್ಷ ಅಶೋಕ್​ ಜಿ.ಎಚ್​.ಮೂರ್ತಿ ಮಾತನಾಡಿ, ಕನ್ನಡಮ್ಮನ ಕಂದ ಕನ್ನಡ ನುಡಿದರೆ ಚಂದ, ಕರ್ನಾಟಕ ನಾಡು ಜಾನಪದ, ಸಾಹಿತ್ಯ ಮತ್ತು ಸಂಸತಿಗೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತದೆ. ಕನ್ನಡ ಭಾಷೆಯ ಜತೆಯಾಗಿ ಬೇರೆ ಭಾಷೆಗಳನ್ನು ಕಲಿತರೆ ತಪ್ಪಲ್ಲ. ಆದರೆ ಕನ್ನಡ ಭಾಷೆಯನ್ನು ನಮ್ಮ ಆತ್ಮದ ಧ್ವನಿಯಾಗಿಸಬೇಕು ಎಂದು ತಿಳಿಸಿದರು.
 ಶಿಕ್ಷಕಿ ನಿಖಿತಾ ಅವರು ಕಲಿಯೋಕೆ ಕೋಟಿ ಭಾಷೆ ಇದ್ದರೂ ಸಹ ನಾವು ಮಾತನಾಡುವ ಭಾಷೆ ನಮ್ಮ ಕನ್ನಡ ಎಂದು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಸಂಯೋಜಕಿ ಪ್ರೇಮಲತಾ, ಶಿಕ್ಷಕರಾದ ರಜನಿ, ರಿಜ್ವಾನ ಬಾನು, ಮೇನಾ, ನಂದಿನಿ, ಸಮೀನಾ ಕಾನಂ, ತಸ್ಮೀಯ, ಸತೀಶ್​, ಕುಸುಮ, ಪೂಜಾ, ಲಕ್ಷಿ$್ಮ, ವಿದ್ಯಾ, ಅನಿತಾ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.