ತುಮಕೂರಿನ ಎನ್ ಆರ್ ಕಾಲನಿಯ ನಿವಾಸಿಗಳು ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಡಿಸಿ ಶುಭಕಲ್ಯಾಣ್ಗೆ ಮನವಿ ಸಲ್ಲಿಸಿದರು. ಕೆ.ದೊರೈರಾಜ್, ಎ. ನರಸಿಂಹಮೂರ್ತಿ, ವಾಲೆ ಚಂದ್ರಯ್ಯ, ರೂಪಶ್ರೀ, ಹನುಮಂತರಾಯಪ್ಪ, ನರಸೀಯಪ್ಪ, ಶ್ರೀನಿವಾಸ್, ನಾರಾಯಣಮೂರ್ತಿ, ಜಯಮೂರ್ತಿ, ಕಿರಣ್, ನರಸಿಂಹಯ್ಯ, ನರಸಿಂಹರಾಜು, ಜಿ. ವೆಂಕಟೇಶ್, ಬಿ.ಪಿ. ಅಂಜನಮೂರ್ತಿ, ಶೆಟ್ಟಳ್ಳಯ್ಯ, ಕೇಬಲ್ ರಘು, ಕಿಶೋರ್, ಎನ್. ರಾಜಣ್ಣ, ಅನ್ನಪೂರ್ಣಮ್ಮ, ನಾಗಮ್ಮ, ಇಂದಿರಮ್ಮ ಮತ್ತಿತರರು ಇದ್ದರು.
- ತುಮಕೂರಿನ ಎನ್ ಆರ್ ಕಾಲನಿ ನಿವಾಸಿಗಳ ಪ್ರತಿಭಟನೆ
- ಸುಳ್ಳು ದಾಖಲೆ ಸೃಷ್ಟಿಸಿ ಲೇಔಟ್ ನಿರ್ಮಾಣ
- ಡಿಸಿ ಕಚೇರಿ ವರೆಗೆ ಪಾದಯಾತ್ರೆ
ಎನ್.ಆರ್. ಕಾಲನಿಯ ಮಾದಿಗ ಜನಾಂಗದ ಹರಿಜನ ಸ್ಮಶಾನ ಭೂಮಿ ಅಕ್ರಮ ಪರಭಾರೆ ಖಂಡಿಸಿ ಎನ್ಆರ್ ಕಾಲನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಎನ್ಆರ್ ಕಾಲನಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿದ ಸ್ಥಳಿಯ ನಿವಾಸಿಗಳು ಸ್ಮಶಾನ ಭೂಮಿ ಅಕ್ರಮ ಪರಭಾರೆ ಮಾಡಿರುವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಸ್ಮಶಾನಭೂಮಿ ಉಳಿಸುವಂತೆ ಒತ್ತಾಯಿಸಿದರು. ಪಾಲಿಕೆ ವ್ಯಾಪ್ತಿಯ 19 ಹಾಗೂ 20ನೇ ವಾರ್ಡ್ನ ಎನ್ಆರ್ ಕಾಲನಿ ದೊಡ್ಡಟ್ಟಿ, ಪಿಕೆಎಸ್ ಕಾಲನಿ (ನಿರ್ವಾಣಿ ಲೇಔಟ್) ಮತ್ತು ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ ಸರ್ವೇ ನಂ. 299/1 ರ ಹರಿಜನ ಸ್ಮಶಾನದ ಭೂಮಿಯನ್ನು ಅಕ್ರಮ ಪರಭಾರೆ ಮಾಡಲಾಗಿದ್ದು ಈ ಜಾಗದಲ್ಲಿದ್ದ ಪೂರ್ವಜರ ಸಮಾಧಿಗಳನ್ನು ನೆಲಸಮಗೊಳಿಸಿ ಚಿದಾನಂದ್ ಹಾಗೋ ಕೋಮಾರಯ್ಯ ಮಕ್ಕಳು ಲೇಔಟ್ ನಿರ್ಮಿಸಿರುವುದನ್ನು ಖಂಡಿಸಿದ್ದಲ್ಲದೆ, ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
ಎನ್ಆರ್ ಕಾಲನಿ, ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ 2 ಸಾವಿರಕ್ಕು ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಅಲ್ಲದೆ, ಬಟವಾಡಿ, ದೇವರಾಯಪಟ್ಟಣ ಹಾಗೂ ಕುರಿಪಾಳ್ಯದ ಸೋದರ ಸಂಬಂಧಿಗಳು ಯಾರಾದರು ಸತ್ತರೆ ಹೂಳಲು ಇದ್ದ ಹರಿಜನ ಸ್ಮಶಾನವನ್ನೇ ಕಬಳಿಸಲಾಗಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲೇಔಟ್ ನಿರ್ಮಿಸಿದ್ದು ಇದನ್ನು ವಜಾಗೊಳಿಸಿ ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಮನವಿಪತ್ರ ನೀಡಿದರು.
ಚಿಂತಕ ಕೆ. ದೊರೈರಾಜ್, ಕೊಳಗೇರಿ ಹಿತರಕ್ಷಣಾ ಸಮಿತಿಯ ಎ. ನರಸಿಂಹಮೂರ್ತಿ, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ, ಮಾಜಿ ಉಪ ಮೇಯರ್ ರೂಪಶ್ರೀ, ಮಾಜಿ ಕಾಪೋರ್ರೇಟರ್ಗಳಾದ ಹನುಮಂತರಾಯಪ್ಪ, ನರಸೀಯಪ್ಪ, ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ನಾರಾಯಣಮೂರ್ತಿ, ಮುಖಂಡರಾದ ಜಯಮೂರ್ತಿ, ಕಿರಣ್, ಡಿಎಸ್ಎಸ್ ನರಸಿಂಹಯ್ಯ, ನರಸಿಂಹರಾಜು, ಜಿ. ವೆಂಕಟೇಶ್, ಬಿ.ಪಿ.ಅಂಜನಮೂರ್ತಿ, ಶೆಟ್ಟಳ್ಳಯ್ಯ, ಕೇಬಲ್ ರಘು, ಚಂದ್ರಯ್ಯ, ಕಿಶೋರ್, ಮೋಹನ್ಕುಮಾರ್, ಗಂಗಾಧರ್, ಎನ್. ರಾಜಣ್ಣ, ಅನ್ನಪೂರ್ಣಮ್ಮ, ನಾಗಮ್ಮ, ಇಂದಿರಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
ವಿವಾದಿತ ಸ್ಥಳಕ್ಕೆ ಎಸಿ ಭೇಟಿ
ಎನ್ ಆರ್ ಕಾಲನಿಯ ಸ್ಮಶಾನ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಹಿನ್ನೆಲೆ ಪ್ರತಿಭಟನೆಗೆ ಸ್ಥಳಿಯರು ಮುಂದಾಗುತ್ತಿದ್ದಂತೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಸ್ಥಳಿಯ ನಿವಾಸಿಗಳ ಅಹವಾಲು ಕೇಳಿದರು. ಮೂಲ ದಾಖಲೆಗಳನ್ನು ಸಹ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಸ್ಥಿಪಂಜರಗಳನ್ನು ಅಕ್ರಮವಾಗಿ ಹೊರಗೆ ಸಾಗಿಸಿರುವುದು, ಬೃಹತ್ ಮರಗಳನ್ನು ಕಡಿಯಲಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದಾಗಿ ಸ್ಥಳಿಯರು ಗಮನಸೆಳೆದರು. ನಂತರ ಅಲ್ಲಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಸ್ಮಶಾನ ಭೂಮಿ ಉಳಿಸುವಂತೆ ಮನವಿ ಮಾಡಿದರು.