- ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಬದುಕು- ಬರಹ ಕುರಿತ ವಿಚಾರ ಸಂಕಿರಣ
- ಕಸಾಪ ವತಿಯಿಂದ ದತ್ತಿ ಪ್ರಶಸ್ತಿ
- ಪ್ರೊ.ಎಸ್.ಜಿ.ಸಿದ್ದರಾಮಯ್ಯರಿಂದ ಪ್ರಶಸ್ತಿ ಪ್ರದಾನ
ತುಮಕೂರು: ಸಾಹಿತ್ಯ ಪರಿಷತ್ತಿಗೆ ಚುನಾವಣೆಯನ್ನು ತಪ್ಪಿಸಿ, ಪರ್ಯಾಯ ದಾರಿಯನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯಕಾಲೇಜಿನ ಡಾ.ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ಬದುಕು- ಬರಹ ಕುರಿತ ವಿಚಾರ ಸಂಕಿರಣ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಕಲ್ಪನೆಗೆ ವಿರುದ್ಧವಾಗಿ ಕಸಾಪ ನಡೆದುಕೊಳ್ಳುತ್ತಿದೆ. ಚುನಾವಣೆ ಎಂಬ ಭೂತ ಇನ್ನಿಲ್ಲದಂತೆ ಜಾತಿ, ಧರ್ಮ, ಭ್ರಷ್ಟಾಚಾರ ಎಲ್ಲವನ್ನು ಸಹ ಸಾಹಿತ್ಯ ಪರಿಷತ್ತಿಗೆ ಎಳೆದುತಂದಿದೆ. ಇದರ ಪರಿಣಾಮ ಸಾಹಿತಿಗಳಲ್ಲದವರು ಅಧಿಕಾರ ಹಿಡಿದು ಪರಿಷತ್ತನ್ನು ಅದೋಗತಿಯತ್ತ ತೆಗೆದುಕೊಂಡು ಹೋಗುತಿದ್ದಾರೆ. ಹಾಗಾಗಿ, ಪರಿಷತ್ ಅನ್ನು ಚುನಾವಣೆಯಿಂದ ಮುಕ್ತಗೊಳಿಸಬೇಕು ಎಂದರು.
ಸಾಹಿತಿಯಾಗಿ, ವಿಮರ್ಶಕರಾಗಿ, ಆಡಳಿತಾಧಿಕಾರಿಯಾಗಿ, ಉಪನ್ಯಾಸಕರಾಗಿ ಬಹುಮುಖ ವ್ಯಕ್ತಿತ್ವದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ತಾಯಿಯ ಅಂತ@ಕರಣ ಹೊಂದಿದ್ದವರು. ಕ್ರಿಯೆ ಇಲ್ಲದ ಅರಿವು ಪ್ರಯೋಜನಕ್ಕೆ ಬಾರದು. ಆದರೆ, ನಿರಂತರ ಅಧ್ಯಯನ ಶೀಲರಾಗಿದ್ದ ಸಿದ್ದಲಿಂಗಯ್ಯ ಅವರ ಭಾಷಾ ಪಾಂಡಿತ್ಯ, ವಿದ್ವತ್, ಆಧ್ಯಾಪನಕ್ರಮ ಎಲ್ಲವೂ ಇಂದಿನವರಿಗೆ ಮಾದರಿ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆವಹಿಸಿದ್ದರು. ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಸಾಹಿತಿ ಪ್ರೊ.ಲಕ್ಷಿ$್ಮನಾರಾಯಣ, ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಿ.ನಿಜಲಿಂಗಪ್ಪ, ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ದಕ್ಷಿಣಮೂರ್ತಿ, ಕಸಾಪ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಸಿದ್ದಗಂಗಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೈ.ಎಂ.ಪದ್ಮಜ, ಡಾ.ಸಿ.ವಿ.ಶಕುಂತಲಾ ಮತ್ತಿತರರು ಉಪಸ್ಥಿತರಿದ್ದರು.