ರಾಷ್ಟ್ರಪತಿ ದ್ರೌಪದಿ ಮುರ್ಮು 
ತುಮಕೂರು

ಮಕ್ಕಳನ್ನು ಕಂಡು ಬೆರಗಾದ ಮುರ್ಮು

ಪ್ರಮುಖ ಮುಖ್ಯಾಂಶಗಳು

  • ಶಿವಕುಮಾರ ಶ್ರೀಗಳ ಗುರುವಂದನಾ ಮಹೋತ್ಸವ
  • ಮಠದ ಮಕ್ಕಳತ್ತ ಕೈಬೀಸಿದ ರಾಷ್ಟ್ರದ ಪ್ರಥಮಪ್ರಜೆ
  • ಶ್ರೀಗಳ ಮೂರ್ತಿ ಮುಂದೆ ಧ್ಯಾನಸ್ತ ರಾಷ್ಟ್ರಪತಿ
ತುಮಕೂರು: ರಾಷ್ಟ್ರದ ಪ್ರಥಮಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನವು ಶ್ರೀಗಳ ಗುರುವಂದನ ಮಹೋತ್ಸವವನ್ನು ಕಳೆಗಟ್ಟಿಸಿತು. ಶಿವಕುಮಾರ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಪ್ರಾರ್ಥನಾ ಸಭಾಂಗಣದಲ್ಲಿ ಶ್ರೀಗಳ ಮೂರ್ತಿಯ ಮುಂದೆ ಕುಳಿತು ಧ್ಯಾನಸ್ತರಾದ ರಾಷ್ಟ್ರಪತಿಗಳು ಆ ಬಳಿಕ ಮಠದ ಆವರಣದಲ್ಲಿ ಪೂಜ್ಯರ, ಮುರ್ಮು ಭಾವಚಿತ್ರಗಳನ್ನು ಹಿಡಿದು ಕಾಯುತ್ತಿದ್ದ ಸಹಸ್ರಾರು ಮಕ್ಕಳನ್ನು ಕಂಡು ಬೆರಗಾದರು. ಅವರತ್ತ ಕೈಬೀಸಿ ಮುಮುರ್ ವಿಶೇಷ ಪ್ರೀತಿ ತೋರಿದರು.
ಈ ವೇಳೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ, ಥಾವರ್​ ಚಂದ್​ ಗೆಹಲೋತ್​, ಕೇಂದ್ರ ಸಚಿವರಾ ಪ್ರಲ್ಹಾದಜೋಶಿ, ವಿ.ಸೋಮಣ್ಣ, ರಾಜ್ಯದ ಗೃಹಸಚಿವ ಡಾ.ಜಿ.ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​, ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​ ಉಪಸ್ಥಿತರಿದ್ದರು.
ನಂತರ ಸಿದ್ದಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆದ ಡಾ.ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಸಮಾರಂಭ ರಾಷ್ಟ್ರಪತಿ ಮುರ್ಮು ಉದ್ಘಾಟಿಸಿದರು.
ಅನ್ನಗಂಗೆ, ಕರುಣಾಶ್ರಯಗಂಗೆ ಹಾಗೂ ಶಿಕ್ಷಣಗಂಗೆ ಈ ಮೂರು ಪವಿತ್ರ ಧಾರೆಗಳು ಸಿದ್ದಗಂಗೆಯಲ್ಲಿ ನಿರಂತರವಾಗಿ ಹರಿಯುತ್ತಲೇ ಇವೆ. ಶಿವಕುಮಾರ ಸ್ವಾಮೀಜಿ ಆಧ್ಯಾತ್ಮಿಕ ಸೇವೆ, ಮಾನವೀಯ ಕಾರ್ಯಗಳಿಂದ ಸಮಾಜವನ್ನು ಶ್ರೀಮಂತಗೊಳಿಸಿದ ಸಂತರು. ಬಡವರ, ವಂಚಿತರ ಸೇವೆಯಲ್ಲಿ ಅವರ ಇಡೀ ಜೀವನ ಮುಡಿಪಿಟ್ಟಿದ್ದರು.
ದ್ರೌಪದಿ ಮುರ್ಮು
ರಾಷ್ಟ್ರಪತಿ