Prayer for peace and prosperity
ತಿಪಟೂರು: ನಗರದ ಈದ್ಗಾ ಮೈದಾನದಲ್ಲಿ ಗುರುವಾರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ಬಿಲಾಲ್ ಮಸೀದಿ ಮುತುವಲ್ಲಿ ಷಫಿ ಉಲ್ಲಾ ಷರೀಫ್ಮಾತನಾಡಿ, ಬಕ್ರೀದ್ ತ್ಯಾಗ ಮತ್ತು ಬಲಿದಾನದ ಪ್ರತಿಕ. ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸಿದ್ದೇವೆ ಎಂದರು. ಜಮಾಅತ್ ಉಲ್- ಉಲ್ಮಾ-ಎ- ಹಿಂದ್ ರಾಷ್ಟ್ರೀಯ ಅಧ್ಯಕ್ಷ ಹರ್ಷದ್ ಮದನಿ, ವಕ್ಫ್ ಬೋರ್ಡ್ ಮಾಜಿ ಜಿಲ್ಲಾಧ್ಯಕ್ಷ ಸಮೀವುಲ್ಲಾ ಖಾನ್ ಮಾತನಾಡಿ, ಹಿಂದೂ- ಮುಸ್ಲಿಮರು ಒಗ್ಗಟ್ಟಿನಿಂದ ಬದುಕಬೇಕು. ಸಹಬಾಳ್ವೆಯಿಂದ ಜೀವನ ಸಾಗಿಸೋಣ ಎಂದರು. ಪ್ರಾರ್ಥನಾ ಸಭೆಯಲ್ಲಿ ಮದೀನಾ ಮಸೀದಿ ಮುತುವಲ್ಲಿ ಮಹಮ್ಮದ್ ದಸ್ತಗಿರ್, ಜಾಮಿಯಾ ಮಸೀದಿ ಮುತುವಲ್ಲಿ ಸಲೀಂ ಅಹಮದ್, ನೂರಾನಿ ಮಸೀದಿಯ ತನ್ವೀರ್ ಉಲ್ಲಾ ಷರೀಫ್, ವಕ್ಫ್ ಬೋರ್ಡ್ಮಾಜಿ ಜಿಲ್ಲಾಧ್ಯಕ್ಷ ಸಮೀವುಲ್ಲಾ ಖಾನ್, ಡಿಎಸ್ಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪರ್ವೇಜ್ಖಾನ್ ಮತ್ತಿತರರು ಇದ್ದರು.