ಅಂತರಾಜ್ಯ ಖದೀಮರ ಬಂಧಿಸಿದ ತುಮಕೂರು ನಗರ ಠಾಣೆ ಪೊಲೀಸರು
- ಮನೆಗೆ ನುಗ್ಗಿ ಚಿನ್ನದ ಸರ ಕಳವು ಮಾಡಿದ್ದ ಖದೀಮರು
- ತುಮಕೂರು ನಗರ ಪೊಲೀಸರ ಕಾರ್ಯಾಚರಣೆ
- ಗಾಂಜಾ ಮಾರುತ್ತಿದ್ದ ಆರೋಪಿಗಳು ಅಂದರ್
ತುಮಕೂರು: ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಬುಧವಾರ ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹೆಚ್ಚಿರುವುದನ್ನು ತಿಳಿಸಿದರು.
ತುಮಕೂರಿನ ಆದರ್ಶ ನಗರದ ಮೋಹನ್ಕುಮಾರ್ ಎಂಬುವವರ ಮನೆಯಲ್ಲಿ ಕಳೆದ ಏಪ್ರಿಲ್ 27ರಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಅಂತರಾಜ್ಯ ಖದೀಮನನ್ನು ನಗರಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರೋಪಿಯನ್ನು ತಮಿಳುನಾಡು ರಾಜ್ಯದಲ್ಲಿ ದಸ್ತಗಿರಿ ಮಾಡಿ ಆರೋಪಿ ಕಡೆಯಿಂದ ಕಳವು ಮಾಡಿದ್ದ 40 ಗ್ರಾಂ ಚಿನ್ನದ ಸರ
ನಗರದ ಕೋತಿತೋಪು ಸರ್ಕಲ್ ಬಳಿ ಇರುವ ಚೈತನ್ಯ ಟೆಕ್ನೋ ಶಾಲೆ ಹಿಂಭಾಗದ ಅಮಾನಿಕೆರೆ ಮಣ್ಣಿನ ರಸ್ತೆಯಲ್ಲಿ ಆರೋಪಿಗಳಾದ ಆರ್.ಆದಿತ್ಯ(23) ಹಾಗೂ ಮತ್ತು ಜಿ.ಪ್ರತಾಪ(33) ಗಾಂಜಾ ಮಾರಾಟ ಮಾಡುವಾದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಗಳಿಂದ 4.20 ಲಕ್ಷ ರೂ. ಮೌಲ್ಯದ 8.385ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.