ಬೆಟ್ಟದಲ್ಲಿ ಅಡಗಿ ಕುಳಿತಿದ್ದ ವೆಂಕಟೇಶ್ ಬಂಧಿಸಿದ ತುಮಕೂರು ಜಿಲ್ಲೆಯ ಪೊಲೀಸರು 
ತುಮಕೂರು

ಶಂಕಿತ ನಕ್ಸಲ್ ಕಡಮಲಕುಂಟೆ ವೆಂಕಟೇಶ್ ಬಂಧನ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ಬೆಟ್ಟದಲ್ಲಿ ಅಡಗಿ ಕುಳಿತಿದ್ದ ವೆಂಕಟೇಶ್ ಬಂಧಿಸಿದ ಪೊಲೀಸರು
  • ನಾಡಬಾಂಬ್ ಸ್ಪೋಟಿಸಿ ಭಯ ಮೂಡಿಸುತ್ತಿದ್ದ ಆರೋಪ
  • ನಕ್ಸಲ್ ಹೆಸರಿನಲ್ಲಿ ಹಣಕ್ಕೆ ಬೇಡಿಕೆಯಿಟ್ಟ ಅನುಮಾನ
ಪಾವಗಡ: ರೈತರ ಪಂಪ್ ಸೆಟ್ ಬಳಿ ಬಾಂಬ್ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ್ದ,  ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ  ಶಂಕಿತ ನಕ್ಸಲ್  ಉಪ್ಪಾರ ವೆಂಕಟೇಶ್ ನನ್ನು ಪೊಲೀಸರ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿ ಕಡಮಲಕುಂಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಹಿಂದೆ ತಾಲ್ಲೂಕಿನ ಕನಿಕಲಬಂಡೆ ಗ್ರಾಮದ ರೈತ ಕರಿಯಣ್ಣ ಹೊಲದಲ್ಲಿನ ಪಂಪ್ ಸೆಟ್ ಬಳಿ ನಾಡಬಾಂಬ್ ಸ್ಫೋಟಿಸಿ ಹತ್ಯೆಗೆ ಯತ್ನಿಸಿದ್ದ, ಸಿಪಿಐ ಮತ್ತು ಸಿಪಿಎಂ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ ದೇವನ್ನ ದಳಂ ಹೆಸರಿನಲ್ಲಿ ರೈತನಿಗೆ ಪತ್ರ ಬರೆದು 5 ಲಕ್ಷ ನೀಡದಿದ್ದರೆ ಪರಿಣಾಮ ಎದುರಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ಇದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರು, ಗ್ರಾಮಸ್ಥರು ನಿದ್ದೆ ಕೆಟ್ಟು ಆತಂಕದಲ್ಲಿ ಬದುಕುತ್ತಿದ್ದರು.
ಎಎಸ್ಪಿ ಗೋಪಾಲ್ ನೇತೃತ್ವದ ಜಿಲ್ಲಾ ಪೊಲೀಸ್ ತಂಡ ಭಾನುವಾರದಿಂದ ತೀವ್ರ ಪತ್ತೆ ಕಾರ್ಯಚರಣೆ ನಡೆಸಲಾಗುತ್ತಿತ್ತು. ಮಂಗಳವಾರ ರಾತ್ರಿ ಖಚಿತ ಮಹಿತಿ ಮೇರೆಗೆ ಮಧುಗಿರಿ ಡಿವೈಎಸ್ಪಿ ಮಂಜುನಾಥ, ಪಾವಗಡ ವೃತ್ತನಿರೀಕ್ಷಕಾರದ ಸುರೇಶ್, ಕೊಟ್ರೇಶ್, ಮಧುಗಿರಿ ಸಿಪಿಐ ಹನುಮಂತರಾಯಪ್ಪ, ಸಬ್ ಇನ್ಸ್ ಪೆಕ್ಟರ್ ಸುನೀಲ್ ಸೇರಿದಂತೆ ಪೋಲಿಸರ ತಂಡ ಕಾರ್ಯಚರಣೆ ನಡೆಸಿ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಅವಿತಿಕೊಂಡಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿ ನಕ್ಸಲ್ ಎನ್ನಾಲದ ಉಪ್ಪಾರ್ ವೆಂಕಟೇಶ್ ನನ್ನು ಕೊನೆಗೂ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಆರೋಪಿ ಉಪ್ಪಾರ ವೆಂಕಟೇಶ್ ಬಂಧನದಿಂದ ಕನಿಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯು ತಾನು ನಕ್ಸಲ್ ಸಂಘಟನೆಗೆ ಸೇರಿದ್ದೇನೆ ಎಂದು ಹೇಳಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದನೇ ಅಥವಾ ನಿಜವಾಗಿಯೂ ನಕ್ಸಲ್ ನಂಟು ಹೊಂದಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.