ವೆಂಕಟರಮಣಪ್ಪ  
ತುಮಕೂರು

ಮಾಜಿ ಸಚಿವ ಪಾವಗಡ ವೆಂಕಟರಮಣಪ್ಪ ನಿಧನ

ತುಮಕೂರು: ಮಾಜಿ ಸಚಿವ, ಪಾವಗಡ ಕ್ಷೇತ್ರದ ಮಾಜಿ ಶಾಸಕ ವೆಂಕಟರಮಣಪ್ಪ(78) ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾದರು.
1984 ರಲ್ಲಿ ಮಂಡಲ ಪಂಚಾಯತಿ ಮೆಂಬರ್. ಮೂಲತಃ ಗುತ್ತಿಗೆದಾರರಾಗಿದ್ದ ವೆಂಕಟವಣಪ್ಪ ಮೊದಲ ಬಾರಿ 1989 ರಲ್ಲಿ ಕಾಂಗ್ರೆಸ್ ನಿಂದ ವಿಧಾನಸಭೆಗೆ ಪಾವಗಡ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಶಕ್ತಿ ಸೌಧ ಪ್ರವೇಶಿದ್ದರು.
1999 ರಲ್ಲಿ ಕಾಂಗ್ರೆಸ್ ನಿಂದ ಮರು ಆಯ್ಕೆಗಿದ್ದ ಅವರು 2008 ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರರಾಗಿ ಸ್ಫರ್ಧೆ, ಗೆಲುವು ಪಡೆದು ಬಿಜೆಪಿ‌ ಸರ್ಕಾರ ಬೆಂಬಲಿಸಿ ಸಚಿವರಾಗಿದ್ದರು.
2008ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಿಜೆಪಿ ಸರ್ಕಾರ ರಚನೆ ಆಗಲು ಕಾರಣದವರಲ್ಲಿ ವೆಂಕಟರವಣಪ್ಪ ಕೂಡ ಒಬ್ಬರು. ಅದರ, ಪ್ರತಿಫಲವಾಗಿ ಸಚಿವ ಭಾಗ್ಯ ಸಿಕ್ಕಿತ್ತು. ಸಣ್ಣ ನೀರಾವರಿ ಖಾತೆ ಜವಾಬ್ದಾರಿ ನಿರ್ವಹಿಸಿದ್ದರು.
2013 ರಲ್ಲಿ ವೆಂಕಟರವಣಪ್ಪ ಬದಲು ಅವರ ಪುತ್ರ ಎಚ್.ವಿ.ವೆಂಕಟೇಶ್ ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿದ್ದರೂ ಪುತ್ರನ ಸೋಲು ಕಂಡಿದ್ದರಿಂದ ಮತ್ತೆ 2018ರಲ್ಲಿ ಪುತ್ರನ ಬದಲು ಕಾಂಗ್ರೆಸ್ ನಿಂದ ಮತ್ತೆ ಅಖಾಡಕ್ಕಿಳಿದ ವೆಂಕಟರವಣಪ್ಪ , ಗೆಲುವು.
ಅಂದು ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು.
1994, 2004 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು. ಪುತ್ರ ಎಚ್.ವಿ.ವೆಂಕಟೇಶ್ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದರು ವೆಂಕಟರಮಣಪ್ಪ ಕ್ಷೇತ್ರದಲ್ಲಿ ಜನರೊಂದಿಗೆ ಇದ್ದರು.