Opposition to electricity privatization
ಪಾವಗಡ: ವಿದ್ಯುತ್ ಖಾಸಗಿಕರಣವನ್ನು ವಿರೋಧಿಸಿ ತಾಲೂಕಿನ ವಿವಿಧ ಸಂಟನೆಗಳೊಂದಿಗೆ ರಾಜ್ಯ ರೈತ ಸಂದ ಪದಾಧಿಕಾರಿಗಳು ಸೋಮವಾರ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಿ.ಎನ್ ವರದರಾಜು ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂದ ಜಿಲ್ಲಾಧ್ಯ ಪೂಜಾರಪ್ಪ ಮಾತನಾಡಿ, ಗಾಯದ ಮೇಲೆ ಬರೇ ಎಳೆದಂತೆ ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಒಂದೆಡೆಯಾದರೆ ವಿದ್ಯುತ್ ಖಾಸಗಿಕರಣ ಮಾಡಲು ಹೊರಟಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಾಗಿದೆ. ಸಾರ್ವಜನಿಕ ವಲಯದ ವಿದ್ಯುತ್ ೇತ್ರವು ಸಾಮಾಜಿಕ ಹಿತ ಮತ್ತು ಸೇವೆಗಳಿಗೆ ಆದ್ಯತೆ ನೀಡುತ್ತಿದ್ದು, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ದೊರೆಯುವ ರಿಯಾಯಿತಿ ಮತ್ತು ಸಬ್ಸಿಡಿ ವ್ಯವಸ್ಥೆಗಳು ನಾಶವಾಗುತ್ತವೆ ಎಂದು ತಿಳಿಸಿದರು.
ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ದಿ ಟಾಟಾ ಪವರ್ ಕಂಪನಿ ಲಿ ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ವಿದ್ಯುತ್ ಎಂಬುವುದು ಕೇವಲ ಒಂದು ವಾಣಿಜ್ಯ ವಸ್ತುವಲ್ಲ ಅದು ಕೃಷಿ, ಕೈಗಾರಿಕೆ, ಶಿಣ, ಆರೋಗ್ಯ ಮತ್ತು ಸಾಮಾನ್ಯ ಜನರ ಉಸಿರಾಟದ ಮೂಲ ಶಕ್ತಿಯಾಗಿದೆ. ವಿದ್ಯುತ್ ಖಾಸಗಿಕರಣದಿಂದ ಗೃಹ ಬಳಕೆದಾರರ, ಸಣ್ಣ ಕೈಗಾರಿಕೆಗಳ ಹಾಗೂ ನೇಕರಾರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಆತಂಕವಿದ್ದು, ವಿದ್ಯುತ್ ೇತ್ರದ ನೌಕರರ ಉದ್ಯೋಗ ಭದ್ರತೆ ಮತ್ತು ಕಾರ್ಮಿಕ ಹಕ್ಕುಗಳಿಗೆ ದಕ್ಕೆಯಾಗಲಿದೆ. ವಿದ್ಯುತ್ ೇತ್ರವನ್ನು ಸಾಮಾಜಿಕ ಹಿತ ಮತ್ತು ಸೇವೆಗಳ ಆಧ್ಯತೆಯಿಂದ ಸಾರ್ವಜನಿಕ ೇತ್ರದಲ್ಲಿಯೇ ಕಾಪಾಡಬೇಕು. ರೈತರು ಮತ್ತು ಬಡ ಗ್ರಾಹಕರಿಗೆ ನೀಡುತ್ತಿರುವ ರಿಯಾಯಿತಿಗಳನ್ನು ಮುಂದುವರಿಸಬೇಕು ವಿವಿಧ ಸಂಟನೆಗಳ ಪ್ರತಿಭಟನಕಾರರು ಒತ್ತಾಯಿಸಿದರು.
ರೈತ ಸಂದ ಪದಾಧಿಕಾರಿಗಳಾದ ಸದಾಶಿವಪ್ಪ, ನಾರಾಯಣಪ್ಪ, ವೆಂಕಟರಮಣಪ್ಪ ಪಕೀರಪ್ಪ, ಕಟ್ಟಡ ಕಾರ್ಮಿಕ ಸಂದ ಅಧ್ಯ ರಾಮಾಂಜಿನಪ್ಪ, ಕಾರ್ಯದರ್ಶಿ ನಾಗರಾಜು, ಎಪಿಎಂಸಿ ಹಮಾಲಿ ಸಂದ ಮದಲೇಟಪ್ಪ ಇದ್ದರು.