ಕೆ.ವಿ.ಅಶೋಕ್​ 
ತುಮಕೂರು

ನಾಮದಚಿಲುಮೆ, ದೇವರಾಯನದುರ್ಗ ಪ್ರವೇಶ ರ್ನಿಬಂಧ

ಪ್ರಮುಖ ಮುಖ್ಯಾಂಶಗಳು

  • 31 ರ ಸಂಜೆ 6 ರಿಂದ ಜ.1 ಬೆಳಗ್ಗೆ 8ರವರೆಗೆ ಸಂಚಾರ ನಿಷೇಧ
  • ಹೊಸ ವರ್ಷಾಚರಣೆಗೆ ಕಟ್ಟಾಜ್ಞೆ
  • ಪೊಲೀಸರ ಕಟ್ಟೆಚ್ಚರ
ತುಮಕೂರು: ಹೊಸ ವರ್ಷಾಚರಣೆ ಹಿನ್ನೆಲೆ ನಾಮದ ಚಿಲುಮೆ, ದೇವರಾಯದುರ್ಗ ಹಾಗೂ ಬಸದಿಬೆಟ್ಟ ಸೇರಿದಂತೆ ಸಂರತ ಅರಣ್ಯ ಪ್ರದೇಶಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1 ಬೆಳಗ್ಗೆ 8ರವರೆಗೆ ಸಾರ್ವಜನಿಕರು ಹಾಗೂ ವಾಹನಗಳ ಪ್ರವೇಶಕ್ಕೆ ರ್ನಿಬಂಧ ಹೇರಿ ಜಿಲ್ಲಾ ಪೊಲೀಸ್​ ಇಲಾಖೆ ಆದೇಶ ಹೊರಡಿಸಿದೆ.
ಜ.1ರ ಸಂಜೆ 6 ಗಂಟೆಯಿಂದ ಜ.2 ಬೆಳಗ್ಗೆ 8ರವರೆಗೆ ಈ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟ, ವಾಹನ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶವನ್ನು ರ್ನಿಬಂಧಿಸಲು ಕಲಂ 163 ಬಿಎನ್​ಎಸ್​ಎಸ್​ ರೀತ್ಯಾ ಕ್ರಮ ಕೈಗೊಳ್ಳಲಾಗಿದೆ. ಪಿಕೇಟಿಂಗ್​ ಪಾಯಿಂಟ್​ಗಳನ್ನು ಹಾಕಲಾಗಿದೆ.
ವ್ಹೀಲಿಂಗ್​, ರೇಸಿಂಗ್​ಗೆ ಬ್ರೇಕ್​: ರಸ್ತೆಯಲ್ಲಿ ಮೋಟಾರ್​ ಸೈಕಲ್​ ಮತ್ತು ಕಾರನ್ನು ಚಾಲನೆ ಮಾಡುವವರು ಅಪಾಯಕಾರಿ ಮತ್ತು ಮೈಮರೆತು ವಾಹನವನ್ನು ಚಾಲನೆ ಮಾಡುವಂತಿಲ್ಲ. ವರ್ಷಾಚರಣೆ ಅಮಲಿನಲ್ಲಿ ವ್ಹೀಲಿಂಗ್​ ಮತ್ತು ಡ್ರಾಗ್​ ರೇಸಿಂಗ್​ ಮಾಡುವವರ ರಸ್ತೆಯಲ್ಲಿ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರು, ಅದರಲ್ಲು ಮಹಿಳೆಯರನ್ನು ಕೆಣಕುವುದು ಕಂಡುಬಂದರೆ ಹಾಗೂ ಅಸಭ್ಯವಾಗಿ ವರ್ತಿಸಿದ್ದೇ ಆದಲ್ಲಿ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲೆ ಮೀರಿದರೆ ಕ್ರಮ!
ವಿದ್ಯಾಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣಗಳು ಮತ್ತು ಹಾಸ್ಟಲ್​ಗಳಲ್ಲಿ ಶಿಸ್ತಿನಚೌಕಟ್ಟು ಮೀರದೆ ಹೊಸ ವರ್ಷಾಚರಣೆಯನ್ನು ಅಚರಿಸಲು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು. ಅನಾವಶ್ಯಕವಾಗಿ ಇತರೆ ಗುಂಪುಗಳೊಂದಿಗೆ ಜಗಳಕ್ಕಿಳಿದು ಗಲಾಟೆ ಮಾಡಿಕೊಳ್ಳದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಜನರು ಅದರಲ್ಲು ವಿಶೇಷವಾಗಿ ಯುವಜನತೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹದ್ದುಮೀರಿ ವರ್ತಿಸಬಾರದು. ಸಂಭ್ರಮಕ್ಕೆ ಇಲಾಖೆ ಅಡ್ಡಿಪಡಿಸುವುದಿಲ್ಲ. ಆದರೆ, ಎಲ್ಲೆ ಮೀರಿ ತೋರುವ ವರ್ತನೆಗೆ ಕಠಿಣ ಕ್ರಮ ಜರುಗಿಸಲಾಗುವುದು. ಈ ಬಾರಿ ಯಾವುದೇ ಅಹಿತಕರ ಘಟನೆಗಳಿಂದ ಮುಕ್ತವಾಗಿರಲೆಂಬುದು ಇಲಾಖೆ ಆಶಿಸಿದೆ. ಎಲ್ಲಾ ಮುಂಜಾಗೃತ ಕ್ರಮವನ್ನು ಅನುಸರಿಸಿ ಹೊಸ ವರ್ಷ ಆಚರಿಸಬೇಕು.
ಕೆ.ವಿ.ಅಶೋಕ್​
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ