ಚಿಕ್ಕನಾಯಕನಹಳ್ಳಿ: -ಹೇಮಾವತಿ ನಾಲಾ ಕಾಮಗಾರಿ ಮಖ್ಯ ಕೇನಾಲ್ನಿಂದ ಚಿಕ್ಕನಾಯಕನಹಳ್ಳಿ ಭಾಗದ ದಬ್ಬೇಘಟ್ಟದವರೆಗೆ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ತಾಲೂಕಿನ ಹೇಮಾವತಿ ನಾಲಾ ಕಾಮಗಾರಿಯ ಪ್ರಗತಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿ, ಹೇಮಾವತಿ ನಾಲಾ ಕಾಮಗಾರಿಗೆ ತಡೆಯೊಡ್ಡಿದ್ದಂತಹ ರೈತರ ಮನೆಗಳಿಗೆ ತೆರಳಿ ಮನವೊಲಿಸಿ. ಕೆಲವು ಕೈಬಿಟ್ಟ ಪ್ರಕರಣಗಳನ್ನು ಪುನ@ ಸೇರಿಸಿ ಇದರಲ್ಲಿ ರೈತರಿಗೆ ಪರಿಹಾರವನ್ನು ಕೊಡಿಸುವ ಮೂಲಕ ಕಾಮಗಾರಿಯು ದಬ್ಬೇಘಟ್ಟದ ಕೆರೆಯವರೆಗೆ ನಡೆಯುವಂತೆ ಮಾಡಲಾಗಿದೆ. ಇನ್ನು ಎರಡು ಕಡೆಗಳಲ್ಲಿ ಸೇತುವೆ ಕಾರ್ಯ ನಡೆಯುತ್ತಿದೆ ಎಂದರು.
ಈ ಬಾರಿ ತುಮಕೂರಿನ ಕಡೆಯ ಮುಖ್ಯ ಕೆನಾಲ್ನಲ್ಲಿ ಹೇಮೆ ಹರಿಯುವ ವೇಳೆಗೆ ಕಾಮಗಾರಿ ಪೂರ್ಣವಾಗಿ ದಬ್ಬೇಘಟ್ಟದ ಕೆರೆಯ ಮೂಲಕ ಮೇಲನಹಳ್ಳಿ, ನವಿಲೆ ಕೆರೆಗೆ ಹರಿಯುವುದರಲ್ಲಿ ಸಂದೇಹವಿಲ್ಲ. ಇದರೊಂದಿಗೆ ಚಿಕ್ಕನಾಯಕನಹಳ್ಳಿ ಭಾಗದ ಕಾಮಗಾರಿಯಲ್ಲಿ ಬಂಡೆಯು ಸಿಕ್ಕಿರುವುದರಿಂದ ತಡವಾಗುತ್ತಿದೆ ಎಂದು ಮಾಹಿತಿ ನೀಡಿದರು. ತಹಸೀಲ್ದಾರ್ ಮಮತಾ, ಹೇಮಾವತಿ ನಾಲಾ ಇಂಜನಿಯರ್ ಪ್ರಭಾಕ್ ಸೇರಿ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.